Published On: Sun, Dec 1st, 2019

ಎಸ್ ಸಿ ಎಸ್ ಟಿ ಸಭೆ

ಬಂಟ್ವಾಳ: ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಕಳಿಯ ಬೀಡು ಎಬಲ್ಲಿ 8 ದಲಿತ ಕುಟುಂಬಗಳು ಟರ್ಪಾಲ್ ಹಾಸಿದ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. 80 ವರ್ಷ ಪ್ರಾಯದ ವೃದ್ದರು, ಸಣ್ಣ ಮಕ್ಕಳು ಈ ಮನೆಯಲ್ಲಿ ವಾಸವಿದ್ದು
ಮಳೆ ಬಿಸಿಲಿಗೆ ಹೇಗೆ ಬದುಕಬೇಕು  ದ.ಕ. ಜಿಲ್ಲಾ ಪೊಲೀಸ್ ವತಿಯಿಂದ ಬಿ.ಸಿ.ರೋಡಿನ ರೋಟರಿ ಸಭಾಭವನದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಎಸ್‍ಸಿಎಸ್‍ಟಿ ಕುಂದು ಕೊರತೆ ನಿವಾರಣಾ ಸಭೆಯಲ್ಲಿ ದಲಿತ ಮುಖಂಡ ಬೆಳ್ತಂಗಡಿಯ ಶೇಖರ್ ಪೊಲೀಸ್ ಅಧಿಕಾರಿಗಳನ್ನು ಈ ರೀತಿ ಪ್ರಶ್ನೆ ಮಾಡಿದರು. ದಲಿತರಿಗೆ ಮನೆ ನಿರ್ಮಿಸಿ ಕೊಡುವುದಾಗಿ ಹೇಳಿ ಮನೆಯನ್ನು ಕೆಡವಲಾಗಿದೆ. ಇದರಿಂದಾಗಿ ದಲಿತರು ಮನೆಯಿಲ್ಲದೆ ಟರ್ಪಾಲಿನ ಗುಡಿಸಲಿನಲ್ಲಿ ವಾಸಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ವರಿಷ್ಠಾಧಿಕಾರಿ ವಿಕ್ರಂ ಆಮ್ಟೆ ಮಾತನಾಡಿ ಈ ಸಮಸ್ಯೆಯನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗುವುದು, ಎಲ್ಲಾ ವಿಷಯವನ್ನು ಪೊಲೀಸರಿಗೆ ದೂರು ನೀಡುವ ಬದಲು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರೆ ಒಳ್ಳೆಯದು ಎಂದರು.

BTW_D1_1B

ಮೂಡನಡುಗೋಡು ಗ್ರಾಮದ ಬೊಮ್ಮಿ ಎಂಬವರ ಮನೆಗೆ ಭಾಗ್ಯಜ್ಯೋತಿ ವಿದ್ಯುತ್ ಸಂಪರ್ಕವಿದ್ದರೂ 8594 ರೂ ಬಿಲ್ ಬಂದಿದೆ. ಬಡವರಿಗೆ ಈ ರೀತಿ ವಿದ್ಯುತ್ ಬಿಲ್ ಬಂದರೆ ಹೇಗೆ ಪಾವತಿಸುವುದು ಎಂದು ವಿಶ್ವನಾಥ ಚೆಂಡ್ತಿಮಾರ್ ಪ್ರಶ್ನಿಸಿದರು. ಈ ಬಗ್ಗೆ ಸಮಸ್ಯೆಯನ್ನು ಮೆಸ್ಕಾಂನ ಅಧಿಕಾರಿಗಳ ಗಮನಕ್ಕೆ ತನ್ನಿ, ಅಲ್ಲಿ ಪರಿಹಾರವಾಗದಿದ್ದರೆ ಡಿಸಿ ಅಥವಾ ಎಸಿಗೆ ದೂರು ನೀಡಿ ಎಂದು ವಿಕ್ರಂ ಆಮ್ಟೆ ಸಲಹೆ ನೀಡಿದರು. ಬಂಟ್ವಾಳದ ಎರಡು ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿಗಳಿಲ್ಲದೆ ಮಹಿಳಾ ದೂರುದಾರರಿಗೆ ತೊಂದರೆಯಾಗುತ್ತಿದೆ. ಮಹಿಳಾ ಸಿಬ್ಬಂದಿಗಳನ್ನು ನೇಮಿಸುವಂತೆ ಬೇಬಿ ಮೈರನಪಾದೆ ಆಗ್ರಹಸಿದರುಹೀ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಎಡಿಷನಲ್ ಎಸ್ಪಿ ತಿಳಿಸಿದರು. ಬ್ರಹ್ಮರಕೂಟ್ಲು ಟೋಲ್‍ಗೇಟ್‍ನಲ್ಲಿ ಫಾಸ್‍ಟ್ಯಾಗ್ವಿ ತರಿಸುವಾಗ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ವರ್ತಿಸಲು ಸೂಚನೆ ನೀಡಬೇಕೆಂದು ನಾರಾಯಣ ಪುಂಚಮೆ ಗಮನ ಸೆಳೆದರು. ತನ್ನ ವರ್ಗದ ಜಮೀನನನು ಅತಿಕ್ರಮಿಸಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿರುವುದರಿಂದ ತನಗೆ ತೊಂದರೆ ಆಗಿರುವುದಾಗಿ ಬೆಳ್ತಂಗಡಿಯ ಲಾಯಿಲಾ ನಿವಾಸಿ ನಂದಿತಾ ಆರೋಪಿಸಿದರು. ಜಮೀನು ಅತಿಕ್ರಮಿಸಿದವರ ಜೊತೆಗೆ ಬೆಳ್ತಂಗಡಿ ತಹಶೀಲ್ದಾರ್ ಮತ್ತಿತರು ಸೇರಿಕೊಂಡು ಅನ್ಯಾಯ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

BTW_D1_1A

ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ಬೀಟ್ ಪೊಲೀಸ್ ಅಳವಡಿಸುವಂತೆ ಒತ್ತಾಯ ಕೇಳಿ ಬಂತು. ಎಡಿಷನಲ್ ಎಸ್ಪಿ ವಿಕ್ರಂ ಆಮ್ಟೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಿಸಿಬಿ ಡಿವೈಎಸ್ಪಿ ಕುಮಾರಸ್ವಾಮಿ, ಡಿಸಿಬಿ ಇನ್ಸ್‍ಪೆಕ್ಟರ್ಗು ರುರಾಜ್, ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮಾಂತರ ಠಾಣಾ ಎಸೈ ಪ್ರಸನ್ನ ಸ್ವಾಗತಿಸಿ, ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter