Published On: Sun, Dec 1st, 2019

ನಾವೂರು : ಅಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ : ತಾಲೂಕಿನ ನಾವೂರು   ಶ್ರೀ ಸುಬ್ರಾಯ ನಾವೂರೇಶ್ವರ  ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವವು‌ 2020 ಜ. 11-19ರವರೆಗೆ ನಡೆಯಲಿದ್ದು,ಇದರ “ಆಮಂತ್ರಣ ಪತ್ರಿಕೆ ” ಬಿಡುಗಡೆಯ ಸರಳ ಸಮಾರಂಭ  ದೇವಸ್ಥಾನದ ವಠಾರದಲ್ಲಿ ನಡೆಯಿತು.  ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು “ಆಮಂತ್ರಣ ಪತ್ರಿಕೆ “ಯನ್ನು ಬಿಡುಗಡೆಗೈದು ಮಾತನಾಡಿ,ದೇವಳದ ಬ್ರಹ್ಮಕಲಶೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರಲ್ಲದೆ ಗ್ರಾಮಸ್ಥರ,ಊರ ಪರವೂರಿನ ಭಕ್ತ ಜನರ ಸಹಕಾರವನ್ನು ಯಾಚಿಸಿದರು.
IMG-20191130-WA0064
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ  ಹರಿಕೃಷ್ಣ ಬಂಟ್ವಾಳ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ರಾಮಚಂದ್ರ ಭಟ್, ಸದಸ್ಯರಾದ ಪೂರ್ಣಿಮಾ, ಅರ್ಚಕ  ವೆಂಕಟದಾಸ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮುರಳೀಧರ ಭಟ್,    ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ.,ರಾಮಚಂದ್ರ ಗೌಡ ಮಣಿ,ಜಿಪಂ ಸದಸ್ಯ ಪದ್ಮಶೇಖರ ಜೈನ್, ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿಯ ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ  ಸದಾನಂದಗೌಡ ಸ್ವಾಗತಿಸಿ, ವಂದಿಸಿದರು.
IMG-20191130-WA0084
ಸಚಿವರ ಭೇಟಿ: ಇದೇ ಸಂದರ್ಭ ಕಂಬಳಕೂಟಕ್ಕೆ ತೆರಳುತ್ತಿದ್ದ ರಾಜ್ಯ ಮುಜರಾಯಿ ಸಚಿವ,ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಳದ ಜೀರ್ಣೋದ್ದಾರ ಕಾರ್ಯದ ಕಾಮಗಾರಿಯನ್ನು ವೀಕ್ಷಿಸಿದರು.ದೇವಳದ ಅಭಿವೃದ್ದಿ ಕಾರ್ಯಕ್ಕೆ ಮುಜರಾಯಿ ಇಲಾಖೆಯಿಂದ ಎರಡು ಲಕ್ಷ ರೂ.ಅನುದಾನ ಮಂಜೂರುಗೊಳಿಸುವ ಭರವಸೆಯನ್ನು ಸಚಿವರು ನೀಡಿದರು.ಶಾಸಕ ರಾಜೇಶ್ ನಾಯ್ಕ್,ದೇವಳದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ  ಹರಿಕೃಷ್ಣ ಬಂಟ್ವಾಳ ಹಾಗೂ ದೇವಳದ ಪದಾಧಿಕಾರಿಗಳು ಸಚಿವರನ್ನು ಸ್ವಾಗತಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter