Published On: Mon, Nov 25th, 2019

ಫರಂಗಿಪೇಟೆ ಮಾತೃನಮನ ಕಾರ್ಯಕ್ರಮ

ಫರಂಗಿಪೇಟೆ  : ಮೊದಲು ತಮ್ಮ ತಮ್ಮ ಮನೆಯನ್ನು ದೇವಾಲಯದಂತೆ ಮಾಡಬೇಕು. ಮಕ್ಕಳಿಗೆ ಸಂಸ್ಕಾರ ಕಲಿಸಲು ಕಲಿಕೆಗೆ ಬೇಕಾದ ಮೊದಲ ಪಾಠ ಶಾಲೆ ಮನೆಯೇ ಆಗಬೇಕು. ಮನೆಗೆ ಬರುವ ಅತಿಥಿಗಳು ಬರುವಾಗ ಅವರನ್ನು ಸತ್ಕರಿಸುವ ಅವರಿಗೆ ಒಳ್ಳೆಯ ಆಧರಾತಿಥ್ಯವನ್ನು ನೀಡುವ ಕ್ರಮವೂ ಮನೆಯಿಂದಲೇ ಮಕ್ಕಳಿಗೆ ಬರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಬಾರತ  ಕುಟುಂಬ ಪ್ರಬೋಧಿನಿ ಸಂಯೋಜಕರಾದ   ಕಜಂಪಾಡಿ ಸುಬ್ರಹ್ಮಣ್ಯ ಭಟ್ ತಿಳಿಸಿದರು.IMG_0899_resize
ಅವರು ಪುದು ಗ್ರಾಮದ ನಾಗರಕ್ತೇಶ್ವರಿ ಕ್ಷೇತ್ರದಲ್ಲಿ ಜನವರಿ ೧೬ರಂದು ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಫರಂಗಿಪೇಟೆ ಸೇವಾಂಜಲಿ ಸಭಾಭವನದಲ್ಲಿ ಆದಿತ್ಯವಾರ ನಡೆದ ಮಾತೃನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಧರ್ಮದ ಹಿಂದೆ ಇರುವವರು ಬೇಕು. ಕಲಿಯುಗದಲ್ಲಿ ತಪ್ಪುಗಳನ್ನು ಕಡಿಮೆ ಮಾಡುವ ಸಂಘಟನೆಗಳಿಂದ ಒಳ್ಳೊಳ್ಳೆ ಕಾರ್ಯಕ್ರಮಗಳು ನಡೆಯುತ್ತಿದ್ದು ಇದರಿಂದ ಸಮಾಜ ಅಭಿವೃದ್ಧಿಯಾಗುತ್ತದೆ ಎಂದರು.ಗೌರವ ಮಾರ್ಗದರ್ಶಕರಾಗಿ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರದಾನ ಸಂಚಾಲಕರಾಗಿ ತೇವು ತಾರಾನಾಥ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. IMG_0949_resize
ಕಾರ್ಯಕ್ರಮದ ಉದ್ಘಾಟನೆಗೂ ಮೊದಲು ಜ್ಯೋತಿಗುಡ್ಡೆ ದುರ್ಗಾಪರಮೇಶ್ವರಿ ದೇವಸ್ಥಾನದ ಸೇವಾ ಬಳಗದವರಿಂದ ವಿಶೇಷ ಸ್ವರ ಮೇಳ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಉದಯ ಕುಮಾರ್ ಜ್ಯೋತಿಗುಡ್ಡೆ, ಕೊಳಲು ವಾದನದಲ್ಲಿ ವೇಣುಗೋಪಾಲ್, ಸಂಗೀತದಲ್ಲಿ ಸ್ವರೇಣ್ಯ ಜ್ಯೋತಿಗುಡ್ಡೆ, ತಾಳದಲ್ಲಿ ಶ್ರೀನಾಥ್ ಗುಂಡಿಬೆಟ್ಟು ಸಹಕರಿಸಿದ್ದರು. ಗಣ್ಯ ಅತಿಥಿಗಳಿಂದ ಭಾರತ ಮಾತೆಗೆ ಪುಷ್ಪಾರ್ಚನೆ ಅರ್ಪಿಸಲಾಯಿತು. ಆಕರ್ಷಕ ರಂಗೋಲಿ ಹಾಗು  ಅರಸಿನ ಕುಂಕುಮ ಪುಷ್ಪ ದೊಂದಿ ಗೆ ಸಾಂಪ್ರದಾಯಿಕ ವಾಗಿ  ಸ್ವಾಗತಿಸಿದ್ದು   ವಿಶೇಷ ವಾಗಿತ್ತು ನಾಗಮಂಡಲೋತ್ಸವ ಮಹಿಳಾ ಸಮಿತಿ ಸಂಚಾಲಕಿ ಜಯಶ್ರೀ ಕರ್ಕೇರ ಸ್ವಾಗತಿಸಿದರು. ಸಹ ಸಂಚಾಲಕಿ ಆಶಾಚಂದ್ರ ಕಾರ್ಯಕ್ರಮ ನಿರೂಪಿಸಿದರು. ನಾಗಮಂಡಲೋತ್ಸವ ಸಮಿತಿಯ ಸಹ ಸಂಚಾಲಕಿಯರಾದ  ಶೈಲಜಾ ಶೆಟ್ಟಿ, ಆಶಾನಯನ , ಲಾವಣ್ಯಸುರೇಶ್, ಉಮಾಚಂದ್ರಶೇಖರ್, ಗೀತಾ , ಚಂದ್ರಕಲಾ ನಾಣ್ಯ, ಹರಿಣಾಕ್ಷಿ ಗಟ್ಟಿ , ಹರಿಣಾಕ್ಷಿ  ಸದಾನಂದ ನೆತ್ತರಕೆರೆ , ರಾಧಿಕಾ , ಸುನೀತಾ ವಿಠ್ಠಲ , ಅಮಿತಾ ,ಶಾಲಿನಿ , ಲೀಲಾವತಿ , ಉಮಾ ಲಿಂಗಪ್ಪ , ಗೀತಾ ದಯಾನಂದ , ಬೇಬಿ ಆನಂದ  ಈ ಸಂದರ್ಭ ಉಪಸ್ಥಿತರಿದ್ದರು. ಸಹಸಂಚಾಲಕಿ ಕಮಲಾರಮೇಶ್ ಧನ್ಯವಾದ ನೆರವೇರಿಸಿದರು. IMG_0921_resize
ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಅಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ಕಾರ್ಯಾಧ್ಯಕ್ಷ ಚಂದ್ರಹಾಸ್ ಶೆಟ್ಟಿ ರಂಗೋಲಿ, ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ, ಗೌರವ ಸಲಹೆಗಾರ ವಜ್ರನಾಭ ಶೆಟ್ಟಿ ಅರ್ಕುಳ ಬೀಡು,  ಸದಾನಂದ ಆಳ್ವ ಕಂಪ, ರಾಧಾಕೃಷ್ಣ ತಂತ್ರಿ ಪೊಳಲಿ , ರಾಜಶೇಖರ್ ರೈ ಕಳ್ಳಿಗೆ, , ಕೊಡಮಣ್ಣು ಕಾಂತಪ್ಪ ಶೆಟ್ಟಿ, ಚಂದ್ರ ಶೇಖರ ತೇಜ  , ಪದ್ಮನಾಭ  ಬಂಗೇರ  ಮಾರಿಪಳ್ಳ , ಮಾಧವ ನಾಣ್ಯ, ಎಂ. ಆರ್. ನಾಯರ್,  ಕೃಷ್ಣ ಕುಮಾರ ಪೂಂಜಾ , ವಿಠ್ಠಲ ಶೆಟ್ಟಿ ನೀರೊಲ್ಬ್ , ಅರುಣ್ ಆರ್ ಶೆಟ್ಟಿ ಪೆರ್ಲಬೈಲ್ , ಪ್ರಕಾಶ್ ಕಿದೆಬೆಟ್ಟು ,ಕ್ಷೇತ್ರ ದ  ಅಧ್ಯಕ್ಷ ಪೂವಪ್ಪ ಬಂಗೇರ  ನಾಣ್ಯ ,  ವಿನಯ ಕಡೆಗೋಳಿ , ಜಗದೀಶ್ ಕಡೆಗೋಳಿ   ಈ ಸಂದರ್ಭ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter