Published On: Thu, Nov 21st, 2019

ಕಲ್ಲಡ್ಕದಲ್ಲಿ ಅಪ್ರಾಪ್ತೆಗೆ ಕಿಸ್ ಕೊಟ್ಟು ಪೊಲೀಸ್ ಬಲೆಗೆ ಬಿದ್ದ ರಿಕ್ಷಾ ಚಾಲಕ

ಬಂಟ್ವಾಳ: ಕಲ್ಲಡ್ಕದ ವಾಣಿಜ್ಯ ಸಂಕೀರ್ಣವೊಂದರ ಬಳಿ ನಿಂತಿದ್ದ ಅಪ್ರಾಪ್ತ ಬಾಲಕಿಯೋರ್ವಳಿಗೆ  ಕಿಸ್ ಕೊಟ್ಟ  ಪ್ರಕರಣಕ್ಕೆ ಸಂಬಂಧಿಸಿದಂತೆ  ಬಂಟ್ವಾಳನಗರ  ಪೊಲೀಸರು  ಆರೋಪಿ, ರಿಕ್ಷಾ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಕಲ್ಲಡ್ಕ ಸಮೀಪದ ಬೊಳಂತೂರು ನಿವಾಸಿ, ರಿಕ್ಷಾ ಚಾಲಕ ರಹೀಂ ಸದ್ಯ ಪೋಲೀಸರ ವಶದಲ್ಲಿರುವ ಆರೋಪಿಯಾಗಿದ್ದಾನೆ.

ಗುರುವಾರ ಕಲ್ಲಡ್ಕ ಮೇಲಿನ ಪೇಟೆಯಲ್ಲಿರುವ ವಾಣಿಜ್ಯ ಸಂಕೀರ್ಣವೊಂದರ ಬಳಿ ತನ್ನ ಸ್ನೇಹಿತೆಯ ಬರುವಿಕೆಗಾಗಿ ಏಕಾಂಗಿಯಾಗಿ    ನಿಂತಿದ್ದ  ಅಪ್ರಾಪ್ತ ವಯಸ್ಸಿನ  ಶಾಲಾ ಬಾಲಕಿಯ ಬಳಿಬಂದ ಆರೋಪಿ ಆಕೆಯನ್ನು ತಬ್ಬಿಕೊಂಡು ಕಿಸ್ ಕೊಟ್ಟಿದ್ದಾನೆ.  ಒಮ್ಮಲೇ ನಡೆದ ಈ ಘಟನೆಯಿಂದ ಭಯಬೀತಳಾದ ಬಾಲಕಿ ಬೊಬ್ಬೆ ಹೊಡೆದಿದ್ದು,ಸಂಕೀರ್ಣಸುತ್ತ ಮುತ್ತ ಇದ್ದ ಜನರು ಸ್ಥಳಕ್ಕೆ ಧಾವಿಸುವಷ್ಠರಲ್ಲಿ   ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ತಿಳಿದು ಬಂದಿದೆ.
ಮೊದಲೇ ಕೋಮುಸೂಕ್ಷ್ಮ ಪ್ರದೇಶವಾಗಿರುವ  ಕಲ್ಲಡ್ಕದಲ್ಲಿ ಈ ಘಟನೆ ಕೆಲಹೊತ್ತು ಸ್ಥಳೀಯರಲ್ಲಿ ಆತಂಕಕ್ಕು ಒಳಗಾಯಿತು.ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿ ಸೂಕ್ತ ಬಂದೋಬಸ್ತ್ ಮಾಡಿದರು.ಬಳಿಕ ಎಎಸ್ಪಿ ಸೈದುಲ್ ಅಡಾವತ್ ಅವರ ನಿರ್ದೇಶನದಂತೆ,ಸಿಐ ನಾಗರಾಜ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಎಎಸ್ಐ ಜಯರಾಮರೈ ಮತ್ತವರ ಸಿಬಂದಿಗಳ ತಂಡ ಆರೋಪಿಯನ್ನು ವಶಕ್ಕೆಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter