Published On: Tue, Nov 19th, 2019

ರಕ್ಷಿಸಲ್ಪಟ್ಟ ಮಾನಸಿಕ ಅಸ್ವಸ್ಥ ಚೇತರಿಕೆ; ಸೂಚನೆ.

ಉಡುಪಿ: ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಬಳಿಯ ತಾವರೆಕೆರೆಗೆ ಹಾರಲು ಹೊರಟ ಮನೋರೋಗಿ ಅಪರಿಚಿತ ಯುವಕನನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ, ದೊಡ್ಡಣಗುಡ್ಡೆ ಡಾ.ಎ.ವಿ ಬಾಳಿಗಾ ಆಸ್ಪತ್ರೆಗೆ ದಾಖಲುಪಡಿಸಿದ ಘಟನೆಯು ಕಳೆದ ಅ.23 ರಂದು ನಡೆದಿತ್ತು. ಅಂದು ವಿಶು ಶೆಟ್ಟಿಯವರು ಯುವಕನ ಸಂಬಂಧಿಕರು ಪತ್ತೆಯಾಗದ ಕಾರಣದಿಂದ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಕಾಸರಗೋಡು ಮಂಜೇಶ್ವರದ ಶ್ರೀಸಾಯಿನಿಕೇತನ ಸೇವಾಶ್ರಮದಲ್ಲಿ ಉಡುಪಿ ನಗರಠಾಣೆ, ಸಮಾಜಸೇವಕ ತಾರಾನಾಥ್ ಮೇಸ್ತ ಶಿರೂರು ಅವರ ಸಹಕಾರದೊಂದಿಗೆ ದಾಖಲುಪಡಿಸಿದ್ದರು.7fff7128-fa34-40d6-996a-50e3a63b3f62

ಶ್ರೀಸಾಯಿನಿಕೇತನ ಸೇವಾಶ್ರಮದ ಸಂಚಾಲಕರಾದ ಡಾ.ಉದಯ ಕುಮಾರ್ ಅವರು ಅಸಹಾಯಕ ಯುವಕನಿಗೆ ನೆಲೆ ಕಲ್ಪಿಸಿ ಮಾನವಿಯತೆ ಮೆರೆದಿದ್ದರು. ಯುವಕನು ಆಶ್ರಮದಲ್ಲಿ ನೀಡಿದ ಚಿಕಿತ್ಸೆಗೆ ಗುಣಮುಖ ಕಂಡಿದ್ದಾನೆ. ಮನೆಯನ್ನು ಸೇರುವ ಆಶೆಯನ್ನು ವ್ಯಕ್ತಪಡಿಸುತ್ತಿದ್ದಾನೆ. ಆತನ ಮನೆಗೆ ಸೇರಿಸುವ ಪ್ರಯತ್ನಗಳು ನಡೆಯುತ್ತಿದೆ. ಸಾರ್ವಜನಿಕರ ನೆರವನ್ನು ಕೊರಲಾಗಿದೆ.0b1e9813-19c3-4fe4-a37b-ff27260c4f97

ಯುವಕನು ತನ್ನ ಹೆಸರು ಪಿತಾಂಬರ ಬಾರಿಕ್ (25ವ), ತಂದೆ ರಾಜೇಂದ್ರ ಬಾರಿಕ್, ದಾಸ್ಥಾಯಿ ಗ್ರಾಮ, ಬದ್ರಕ್ ಜಿಲ್ಲೆ, ಒಡಿಸ್ಸಾ ಎಂದು ಹೇಳಿಕೊಂಡಿದ್ದು. ಶಿರಾಲಿ, ಭಟ್ಕಳ ಭಾಗದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಅಂದು ತಿಳಿಸಿರುತ್ತಾನೆ. ಇದೀಗ ಆತ ಮತ್ತೊಂದು ಮಾಹಿತಿ ನೀಡಿದ್ದು ಬೈಂದೂರು ಸನಿಹದ ಶಿರೂರು ಗ್ರಾಮದಲ್ಲಿ ಕೆಲಸ ಮಾಡಿಕೊಂಡಿದ್ದೆ ಚೆಕ್ಕ್ ಪೊಸ್ಟ್ ಬಳಿಯ ಗಣೇಶ ಎನ್ನುವ ಗುತ್ತಿಗೆದಾರರೊಂದಿಗೆ ಕೆಲಸ ಮಾಡಿಕೊಂಡಿದ್ದೆ ಎಂದು ಹೇಳಿಕೊಂಡಿದ್ದಾನೆ. ಆತನಲ್ಲಿ ನನ್ನ ವಿಳಾಸದ ವಿವರಗಳು ಅಗತ್ಯ ದಾಖಲೆಗಳು, ಮೊಬೈಲ್ ಫೋನ್ ಇದೆ ಎಂದು ಹೇಳಿಕೊಂಡಿದ್ದಾನೆ. ಈ ಆಧಾರಗಳು ಚಿದಂಬರನ ಊರಿಗೆ ಸೇರಿಸಲು ಅಗತ್ಯ ದಾಖಲೆಗಳಾಗಿವೆ.

ಸರ್ಪನಕಟ್ಟೆ ಪೊಲೀಸ್ ಚೆಕ್ಕ್ ಪೊಸ್ಟ್, ಶಿರೂರು ಗಡಿಭಾಗದ ಪಾರೆಸ್ಟ್ ಚೆಕ್ಕ್ ಪೊಸ್ಟ್, ಶಿರೂರು ಮಾರ್ಕೆಟ್ ಚೆಕ್ಕ್ ಪೊಸ್ಟ್ ಈ ಮೂರು ಚೆಕ್ಕ್ ಪೊಸ್ಟ್ ಗಳಲ್ಲಿ ಯಾವ ಚೆಕ್ಕ್ ಪೊಸ್ಟ್ ಸನಿಹದ ಗುತ್ತಿಗೆದಾರ ಗಣೇಶ ಎಂದು ಪಿತಾಂಬರನು ಹೇಳಲು ಶಕ್ತನಾಗಿಲ್ಲ. ಗುತ್ತಿಗೆದಾರನ ಪೂರ್ಣ ಮಾಹಿತಿಯು ಪಿತಾಂಬರಿನಿಗಿಲ್ಲವಾಗಿದೆ.

ಯುವಕನ ಸಂಬಂಧಿಕರು ಭಟ್ಕಳ- ಶಿರಾಲಿ-ಶಿರೂರು ಭಾಗದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ದುಡಿಯುತ್ತಿದ್ದಾರೆಂಬ ಮಾಹಿತಿಯು ಲಭ್ಯವಾಗಿದೆ ಯುವಕನ ಸಂಬಂಧಿಕರು ಅಥವಾ ಪರಿಚಯಸ್ಥರು ಯಾರಾದರು ಇದ್ದಲ್ಲಿ ಉಡುಪಿ ನಗರ ಪೊಲೀಸ್ ಠಾಣೆ, ಅಥವಾ ಸಮಾಜಸೇವಕ ತಾರಾನಾಥ್ ಮೇಸ್ತ ಶಿರೂರು (7760421868),ಅವರನ್ನು ಸಂಪರ್ಕಿಸುವಂತೆ ಸಮಾಜಸೇವಕ ವಿಶು ಶೆಟ್ಟಿ ಅವರು ಸೂಚಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter