Published On: Sun, Nov 10th, 2019

ಪುದುವಿನಲ್ಲಿ ಹೈಮಾಸ್ಕ್ ದೀಪ ಉದ್ಘಾಟನೆ

ಬಂಟ್ವಾಳ:  ಸುಮಾರು 4.60 ಲಕ್ಷ ರೂ. ವೆಚ್ಚದ ನಾಲ್ಕು ಹೈಮಾಸ್ಕ್ ದೀಪಗಳ ಉದ್ಘಾಟನಾ ಕಾರ್ಯಕ್ರಮ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆಯಿತು. ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ಪುದು ಗ್ರಾಮ ಪಂಚಾಯತ್‌ನ ಅನುದಾನದಡಿ ಅಮ್ಮೆಮಾರ್ ಬದ್ರಿಯ ಜುಮಾ ಮಸೀದಿ ಬಳಿ, ಮಾರಿಪಳ್ಳ ಬಸ್ ನಿಲ್ದಾಣ ಬಳಿ, ಸುಜೀರ್ ಮದರಸ ಬಳಿ ಹಾಗೂ ಪೆರಿಮಾರ್ ಜುಮಾ ಮಸೀದಿ ಬಳಿ ಒಟ್ಟು ನಾಲ್ಕು ಹೈಮಾಸ್ಕ್ ದೀಪಗಳನ್ನು ಉದ್ಘಾಟಿಸಲಾಯಿತು.

10 btl pudhu (1)
ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅಮ್ಮೆಮಾರ್ ಮಸೀದಿ ಬಳಿ ಹೈಮಾಸ್ಕ್ ದೀಪವನ್ನು ಉದ್ಘಾಟಿಸಿ ಮಾತನಾಡಿ, ಪುದು ಗ್ರಾಪಂ ಜನ ಸ್ನೇಹಿ ಪಂಚಾಯತ್ ಆಗಿ ಬೆಳೆಯುತ್ತಿದ್ದು, ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿ, ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಇಲ್ಲಿನ ಜನಪ್ರತಿನಿಧಿಗಳ ಸಹಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಮುಂದೆಯು ನಿಮ್ಮ ಸಹಕಾರ ಅಗತ್ಯ ಎಂದರು. ಮಾಜಿ ಜಿಪಂ ಸದಸ್ಯ ಉಮರ್ ಫಾರೂಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಪುದು ಗ್ರಾಪಂ ವ್ಯಾಪ್ತಿಯ ಸರ್ವತೋಮುಖ ಅಭಿವೃದ್ಧಿಗಾಗಿ ಇಲ್ಲಿನ ಶಾಸಕರು, ಎಂಎಲ್‌ಸಿ ಅವರು ಸಾಕಷ್ಟು ಅನುದಾನ ಒದಗಿಸಿದರಲ್ಲದೆ, ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿ ಕಾರ್ಯಕ್ಕೆ ಪಣತೊಟ್ಟಿದ್ದಾರೆ. ಗ್ರಾಮಸ್ಥರ ಬೇಡಿಕೆಗಳಿಗೆ ಸಕಾಲದಲ್ಲಿ ಸ್ಪಂದಿಸಿ, ಈಡೇರಿಸಿದ ಶಾಸಕರಿಗೆ ಅಭಿನಂದನೆಗಳು ಎಂದರು.

10 btl pudhu (2) (1)

ಈ ಸಂದರ್ಭದಲ್ಲಿ ಅಮ್ಮೆಮಾರ್ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಹನೀಫಿ, ಮಸೀದಿ ಅಧ್ಯಕ್ಷ ಉಮರಬ್ಬ ಎಎಸ್ಬಿ, ಉಪಾಧ್ಯಕ್ಷ ಖಾದರ್, ಸುಲೈಮಾನ್ ಉಸ್ತಾದ್, ಪಂ. ಸದಸ್ಯರಾದ ಹಾಶೀರ್ ಪೇರಿಮಾರ್, ರಝಾಕ್, ಅಖ್ತರ್ ಹುಸೈನ್, ಮುಸ್ತಫಾ, ರಫೀಕ್ ಪೇರಿಮಾರ್, ಪ್ರಮುಖರಾದ ಇಮ್ರಾನ್ ಐ.ಎಸ್, ತೌಫೀಕ್, ಮಜೀದ್ ಪೇರಿಮಾರ್, ಇಕ್ಬಾಲ್ ಸುಜೀರ್, ಸಲಾಂ ಸುಜೀರ್, ಅಬೂಬಕರ್ ಪಿ, ಜಾಫರ್, ಕಬೀರ್, ರಫೀಕ್ ವಳಚಿಲ್, ಜಾಹಿಪ್ಪಾಡಿ, ಹಾಶಿಂ ಮಾರಿಪಳ್ಳ, ಕಬೀರ್ ಮಾರಿಪಳ್ಳ, ಎಂ.ಕೆ.ಮುಹಮ್ಮದ್, ಇಕ್ಬಾಲ್ ಐ.ಕೆ., ಶರೀಫ್ ಪೇರಿಮಾರ್, ಇಬ್ರಾಹಿಂ, ಸೌಕತ್, ಮಜೀದ್, ಪೇರಿಮಾರ್ ಮಸೀದಿ ಖತೀಬ್ ರಫೀಕ್ ಸಅದಿ, ಅಧ್ಯಕ್ಷ ಶಾಫಿ ಪೆರಿಮಾರ್, ಅಬ್ದುಲ್ ಫಲುಲ್, ನಝೀರ್, ಸಿರಾಜ್ ಮುಸ್ತಫಾ, ಲತೀಫ್, ಸಮದ್ ಹಾಜರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter