Published On: Thu, Nov 7th, 2019

ಎಸ್ಪಿ ನೇತೃತ್ವದಲ್ಲಿ ವಿಶೇಷ. ಸಭೆ

ಬಂಟ್ವಾಳ:  ಟಿಪ್ಪು ಜಯಂತಿ ಆಚರಣೆ,ಆಯೋಧ್ಯ ತೀರ್ಪು ಹಾಗೂ ಈದ್ ಮಿಲಾದ್ ಈ ಮೂರು ಪ್ರಮುಖ  ಕಾರ್ಯಕ್ರಮಗಳ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಮೀಪ್ರಸಾದ್ ಅವರ ನೇತೃತ್ವದಲ್ಲಿ ಬಂಟ್ವಾಳ ಉಪವಿಭಾಗದ ಎ.ಎಸ್.ಪಿ.ಕಚೇರಿಯಲ್ಲಿ ವಿಶೇಷ ಸಭೆ ನಡೆದಿದೆ.

IMG-20191107-WA0030
ಬಂಟ್ವಾಳ ವೃತ್ತ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿವ ದೆಸೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಎಸ್ ಪಿ ಲಕ್ಷ್ಮೀಪ್ರಸಾದ್ ಅವರು ಚರ್ಚಿಸಿದರು.  ಬಂಟ್ವಾಳ ವೃತ್ತನಿರೀಕ್ಷಕರ ವ್ಯಾಪ್ತಿಗೊಳಪಟ್ಟ  ಬಂಟ್ವಾಳ ನಗರ , ಗ್ರಾಮಾಂತರ , ಟ್ರಾಫಿಕ್  ಹಾಗೂ ವಿಟ್ಲ ಪೋಲೀಸ್ ಠಾಣಾ ಸಿಬ್ಬಂದಿಗಳಿಗೆ ಮೊಡಂಕಾಪು ಮತ್ತು ಬಂಟ್ವಾಳ ಎಸ್.ವಿ.ಎಸ್.ಶಾಲಾ ಮೈದಾನದಲ್ಲಿ ಮಾಬ್ ಅಪರೇಷನ್ ಮತ್ತು ಕ್ರೌಡ್ ಕಂಟ್ರೋಲ್ ನ ಬಗ್ಗೆ ವಿಶೇಷ ತರಬೇತಿ ನೀಡಲಾಯಿತು. ‌
ವೃತ್ತದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಲಾಟಿ ಮಾಬ್ ಆಪರೇಷನ್ ಹಾಗೂ ಟಿಜಿ ಗನ್, ಗ್ರನೇಡ್ಸ್ ಉಪಯೋಗಿಸುವ ಕುರಿತು ಡಿ.ಎ.ಆರ್.ಆರ್.ಪಿ.ಐ ನಾರಾಯಣ ಮಾಹಿತಿ  ನೀಡಿದರು.
ಬಂಟ್ವಾಳ ತಾಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಅದನ್ನು  ನಿಯಂತ್ರಿಸಲು  ಎಲ್ಲಾ ರೀತಿಯಲ್ಲೂ ಸನ್ನದ್ದವಾಗಿದೆಯಲ್ಲದೆ
ಯಾವುದೇ ಅಹಿತಕರ ಘಟನೆಗಳು ನಡೆಯದಂತೆಯು ಮುನ್ನೆಚ್ಚರಿಕಾ ಕ್ರಮವಾಗಿ   ತರಬೇತಿ ನೀಡಲಾಗಿದೆ . ಎಸ್ಪಿಯವರೇ ಖುದ್ದಾಗಿ ಈ ತರಬೇತಿಯ  ಪರಿಶೀಲನೆಯನ್ನು ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಬಂಟ್ವಾಳ ಉಪವಿಭಾಗದ ಎ.ಎಸ್.ಪಿ.ಸೈದುಲು ಅಡಾವತ್,  ವೃತ್ತ ನಿರೀಕ್ಷಕ ಟಿ.ಟಿ.ನಾಗರಾಜ್,  ಎಸ್.ಐ.ಗಳಾದ ಚಂದ್ರಶೇಖರ್, ಪ್ರಸನ್ನ , ಯಲ್ಲಪ್ಪ, ಟ್ರಾಫಿಕ್ ಠಾಣಾ ಎಸ್. ಐ. ರಾಮನಾಯ್ಕ್ರವರು ಉಒಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter