Published On: Wed, Oct 16th, 2019

ಪುದು ಪಂಚಾಯತ್ : ಅಧಿಕಾರಿಗಳ ಗೈರು ಕೆಡಿಪಿ ಸಭೆ ಮೊಟಕು

ಬಂಟ್ವಾಳ: ಪುದು ಗ್ರಾಮ ಪಂಚಾಯತ್ ನಲ್ಲಿ ಮಂಗಳವಾರ ನಡೆದ  ಗ್ರಾಮಮಟ್ಟದ ಪ್ರಗತಿಪರಿಶೀಲನಾ ಸಭೆ(ಕೆಡಿಪಿ)ಗೆ  ಅಧಿಕಾರಿಗಳು ಗೈರು ಹಾಜರಾದ ಕಾರಣದಿಂದ  ಸಭೆ ಆರ್ಧದಲ್ಲೆ ಮೊಟಕುಗೊಂಡಿತು‌.  ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.   19 ಇಲಾಖೆ ಅಧಿಕಾರಿಗಳು ಭಾಗವಹಿಸಬೇಕಾದ ಸಭೆಯಲ್ಲಿ  ಕೃಷಿ , ಅರೋಗ್ಯ ,ಕಂದಾಯ, ಶಿಕ್ಷಣ , ಗ್ರಂಥಾಲಯ,  ಮೆಸ್ಕಾಂ, ಸಹಕಾರ,  ಪೊಲೀಸ್ ಇಲಾಖೆ ಮಾತ್ರ  ಭಾಗವಹಿಸಿದ್ದರೆ ಉಳಿದ ಇಲಾಖಾಧಿಕಾರಿಗಳು ಗೈರು ಹಾಜರಾಗಿದ್ದರು.  ಸಾರ್ವಜನಿಕ ಹಿತದೃಷ್ಟಿಯಿಂದ  ಹಾಜರಿದ್ದ ಅಧಿಕಾರಿಗಳಲ್ಲಿ  ಅಗತ್ಯ ವಿಷಯಗಳ ಬಗ್ಗೆ  ಚರ್ಚೆ ನಡೆಸಲಾಯಿತು.IMG-20191015-WA0082

ಪುದು ಗ್ರಾಮದಲ್ಲಿ ಶಂಕಿತ  ಡೆಂಗ್ಯು ಪ್ರಕರಣ  ಪತ್ತೆಯಾಗಿರುವ ಹಿನ್ನಲೆಯಲ್ಲಿ  ಆಶಾ ಕಾರ್ಯಕರ್ತರು ಮನೆ,ಮನೆಗೆ ಭೇಟಿ ಕೊಟ್ಟು ಸೊಳ್ಳೆಯ ಲಾರ್ವ ನಾಶ ಮಾಡಲು ಕ್ರಮಕೈಗೊಳ್ಳಲಾಗುತ್ತಿದ್ದು, ನಾಗರಿಕರು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಸಭೆಯ ಗಮನಕ್ಕೆತಂದರು. ಪುದು ಪಂಅಧ್ಯಕ್ಷ ರಮ್ಲಾನ್ ಆಶಾ ಕಾರ್ಯಕರ್ತರಿಗೆ ಸ್ವಚ್ಚತೆ ಬಗ್ಗೆ ವಿಶೇಷ ಕಾಳಜಿ ವಹಿಸಿ ರೋಗ ತಡೆಗಟ್ಟಲು ಕ್ರಮಕೈಗೊಳ್ಳಲುಸೂಚಿಸಿದರ ಪರಂಗಿಪೇಟೆಯ ಹಳೆ ರಸ್ತೆಯ ಎರಡು ಬದಿಯಲ್ಲಿ ವಾಹನ ಪಾರ್ಕಿಂಗ್  ಮಾಡುವುದರಿಂದ ಸಂಚಾರಕ್ಕೆ ತೊಡಕಾಗುತ್ತಿದ್ದು, ಒಂದೇ ಬದಿಯಲ್ಲಿ ಪಾರ್ಕಿಂಗ್ ಮಾಡುವವ್ಯವಸ್ಥೆಗೆಚರ್ಚೆನಡೆಯಿತು,

ರೈತರಿಗೆ  ಸಬ್ಸಿಡಿ ಆಧಾರದಲ್ಲಿ ಸಿಗುತ್ತಿದ್ದ  ಟಲ್ಲರ್ ಕಳೆದ ಎರಡು ತಿಂಗಳಿನಿಂದ ಸಿಗದಿರುವ ಬಗ್ಗೆ ಪ್ರಸ್ತಾವಿಸಿದ  ಅಧ್ಯಕ್ಷ  ರಮ್ಲಾನ್ ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಲು ಸೂಚಿಸಿದರು,   ಅಂಗನವಾಡಿಯಲ್ಲಿ ಮಕ್ಕಳಿಗೆ ಬರುವ ಆಹಾರದಲ್ಲಿ ದುರುಪಯೋಗವಾಗುವ ಆರೋಪಗಳಿದ್ದು, ಯಾವುದೆಲ್ಲ ಆಹಾರ ಮಕ್ಕಳಿಗೆ ನೀಡಲಾಗುತ್ತದೆ ಮತ್ತು ಎಷ್ಟು  ಮಕ್ಕಳು  ಹಾಜರಾಗುತ್ತಾರೆಂಬ ವರದಿ ನೀಡುವಂತೆ ಎಂದು  ನಿರ್ದೇಶಿಸಿದರು.   ಸಭೆಯಲ್ಲಿ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ  ಜಿಲ್ಲಾ ಪಂಚಾಯತ್  ಸಿಇಒ ರವರಿಗೆ ಪತ್ರಬರೆಯಲು  ಸಭೆಯಲ್ಲಿ ತೀರ್ಮಾನಿಸಲಾಯಿತು.   ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಪಿಡಿಒ ಪ್ರೇಮಲತಾ  ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter