Published On: Tue, Oct 15th, 2019

ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಚಿಂತನೆ ಸಾಮಾಜಿಕ ಕ್ಷೇತ್ರದಲ್ಲಿ ಮೈಲುಗಲ್ಲು : ಪ್ರಭಾಕರ ಪ್ರಭು

ಬಂಟ್ವಾಳ: ಕರ್ನಾಟಕ ರಾಜ್ಯದಲ್ಲಿನ ಅತೀ ಹೆಚ್ಚು ಅದಾಯ ತಂದು ಕೊಡುವ ಹಿಂದೂ ಧಾರ್ಮಿಕ ದೇವಸ್ಥಾನಗಳಲ್ಲಿ ಸ್ವಂತ ಅದಾಯ ಅಥವಾ ಸರ್ಕಾರದ ಸಹಾಯ ಧನದ ಮೂಲಕ ಹಿಂದೂ ಸಮಾಜದಲ್ಲಿನ ಬಡವರಿಗೆ ಸಾಮೂಹಿಕ ವಿವಾಹ ಏರ್ಪಾಡು ಮಾಡುವ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ಚಿಂತನೆ ಸಾಮಾಜಿಕ ಕ್ಷೇತ್ರದಲ್ಲಿ ಹೊಸಮೈಲಿಗಲ್ಲು ನಿರ್ಮಿಸಿದೆ ಎಂದು ಬಂಟ್ವಾಳ ತಾಪಂ ಸದಸ್ಯ ಪ್ರಭಾಕರ ಪ್ರಭು ತಿಳಿಸಿದ್ದಾರೆ.
IMG_20190622_204841ಯೋಜನೆಯ ಮೂಲಕ ,ವಧು – ವರರಿಗೆ ಕರಿಮಣಿ,ಸೀರೆ, ಇನ್ನಿತರ ವಿವಾಹ ಸಂಬಂಧಿಸಿದ ಸಾಹಿತ್ಯ ಮತ್ತು   ಸಾಂಪ್ರಾದಾಯಿಕವಾಗಿ  ಬೇಕಾಗುವ ಇತರ ವಸ್ತುಗಳನ್ನು ನೀಡುವ ಸರ್ಕಾರದ ಈ ಮಹತ್ವದ ಯೋಜನೆಯಿಂದ ಬಡವರು ತಮ್ಮ ತಮ್ಮ ಇಷ್ಟಾರ್ಥಗಳಿಗೆ ದೇವಳದ ಹುಂಡಿಗೆ ಹಾಕುವ ಹಣ ಬಡವರ ಪಾಲಿಗೆ   ಸೇರಲ್ಪಟ್ಟು,ದೇವಸ್ಥಾನಗಳ ಅದಾಯದಿಂದ ಸಾಮಾಜಿಕ ಸುಧಾರಣೆ ಸಾದ್ಯವಾಗಿ,ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ  ದೆಸೆಯಲ್ಲಿ  ದೇವಸ್ಥಾನಗಳಲ್ಲಿ  ಸಾಮೂಹಿಕ ವಿವಾಹ ಕಲ್ಪನೆಯೊಂದಿಗೆ  ಹೊಸ ರೂಪ ನೀಡಿದ ರಾಜ್ಯದ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಯವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುವ ಪ್ರಭಾಕರ ಪ್ರಭು         ಅರ್ಥಿಕವಾಗಿ ಹಿಂದುಳಿದವರ ವಧು-ವರರಿಗೆ  ಪ್ರೊತ್ಸಾಹ ನೀಡಿ ಸಾಮೂಹಿಕ ವಿವಾಹಕ್ಕೂ ಪ್ರಾಮುಖ್ಯತೆ ನೀಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
.
Attachments area

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter