Published On: Mon, Oct 14th, 2019

ಕಡ್ತಲ ಸಾಧಕರಿಗೆ ವಿಜಯದಶಮಿ ಗೌರವ

ಅಜೆಕಾರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 3 ಸಾಧಕರು ಮತ್ತು ಒಂದು ಸಂಸ್ಥೆಗೆ ಕಡ್ತಲ ಗ್ರಾಮದ ಸಿರಿ ಬೈಲು ಶ್ರೀ ದುರ್ಗಾಪರಮೇಶ್ವರಿ ಮತ್ತು ಬರ್ಬರೇಶ್ವರ ದೇವಸ್ಥಾನದ ವಾರ್ಷಿಕ ವಿಜಯ ದಶಮಿ ಗೌರವವನ್ನು ಪುಣೆಯ ಉದ್ಯಮಿ ವಿಶ್ವನಾಥ ಪೂಜಾರಿ ಸಹಿತ ಗಣ್ಯರು ಪ್ರದಾನಿಸಿದರು. ಸಾಹಿತಿ-ಹಿರಿಯ ಪತ್ರಕರ್ತರಾದ ಡಾ.ಶೇಖರ ಅಜೆಕಾರು, ನಮ್ಮ ಬೆದ್ರ ತಂಡದ ನಿರ್ದೇಶಕ –ಚಿತ್ರನಟ ಉಮೇಶ ಮಿಜಾರು, ಯುವ ಪ್ರಗತಿಪರ ಕೃಷಿಕ ಎಂ.ಕಾಂ ಪದವಿಧರ ಬೋಜ ನಾಯ್ಕ್ ಮತ್ತು ಗಾಂಧಿಗ್ರಾಮ ಪ್ರಶಸ್ತಿ ಪುರಸ್ಕೃತ ಕಡ್ತಲ ಪಂಚಾ‌ಯತ್‌ ಪರವಾಗಿ ಅಧ್ಯಕ್ಷ ಅರುಣ್ ಹೆಗ್ಡೆ ಅವರು ಗೌರವವನ್ನು ಸ್ವೀಕರಿಸಿದರು.IMG_5372 (1)

ಊರಿನ ಬಗ್ಗೆ ದೂರದ ಊರಿನಲ್ಲಿರುವ ಉದ್ಯಮಿಗಳು ತೋರುತ್ತಿರುವ ಕಾಳಜಿ ಅನನ್ಯವಾದುದು ಮತ್ತು ಅದು ಊರಿನ ಅಭಿವೃದ್ಧಿಗೆ ಅಗತ್ಯವಾಗಿದೆ. ದಯಾನಾಯಕ್ ಅವರು ಎಣ್ಣೆಹೊಳೆಯಲ್ಲಿ ತಾಯಿಯ ಹೆಸರಿನಲ್ಲಿ ಹೈಸ್ಕೂಲು ತೆರೆದ ಹಾಗೆ ವಿಶ್ವನಾಥ ಪೂಜಾರಿ ಅವರು ತನ್ನ ತಾಯಿಯನ್ನು ಮುಂದೆ ಕುಳ್ಳಿರಿಸಿ ವಿಜಯ ದಶಮಿಯನ್ನು ಈ ರೀತಿ ವಿಶಿಷ್ಟವಾಗಿ ಆರು ವರ್ಷಗಳಿಂದ ಆಚರಿಸುತ್ತಿರುವುದು ಅಭಿನಂದನೀಯ ಎಂದು ಗೌರವ ಸ್ವೀಕರಿಸಿದ ಡಾ.ಶೇಖರ ಅಜೆಕಾರು ಹೇಳಿದರು.
ಆಡಳಿತ ಮೊಕ್ತೇಸರರಾದ ಪ್ರಶಾಂತ ಬೆಳಿರಾಯ ಅಧ್ಯಕ್ಷತೆ ವಹಿಸಿದ್ದರು. ವಿಜಯ ದಶಮಿಯ ದಿನದ ಅನ್ನ ಸಂತರ್ಪಣೆ, ನಾಟಕ ಮತ್ತು ಎಲ್ಲಾ ಕಾರ್ಯಕ್ರಮಗಳ ನಿರಂತರ ಪ್ರಾಯೋಜಕರಾದ ಉದ್ಯಮಿ ಕಡ್ತಲ ವಿಶ್ವನಾಥ ಪೂಜಾರಿ ಪೂನಾ, ಉಮೇಶ ಹೆಗ್ಡೆ ಮಾಣಿಬೆಟ್ಟು, ಗುಲಾಬಿ ಪೂಜಾರಿ, ಸಂಝೀವ ಪೂಜಾರಿ ಕುಂಟಿಬೆಟ್ಟು ಮುಖ್ಯ ಅತಿಥಿಗಳಾಗಿದ್ದರು. ಯೋಗಪಟು, ಶಿಕ್ಷಕ ಶೇಖರ ಕಡ್ತಲ ಅವರು ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.ಬೆದ್ರ ತಂಡದ ನೂತನ ನಾಟಕ ಕುಸಲ್ದ ಗೊಬ್ಬು ಕಿಕ್ಕಿರಿದ ಜನಸಂದಣಿಯೊಂದಿಗೆ ಪ್ರದರ್ಶನಗೊಂಡಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter