Published On: Wed, Oct 9th, 2019

ಸಂವೇದನಾಶೀಲ ಸ್ಥಳಗಳ ಭೇಟಿ

ಬಂಟ್ವಾಳ :ಕಲ್ಲಡ್ಕ  ಶ್ರೀರಾಮ ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ವತಿಯಿಂದ ಸಂವೇದನಾಶೀಲ ಸ್ಥಳ ಭೇಟಿ ಎಂಬ ಕಾರ್ಯಕ್ರಮದ ಅಂಗವಾಗಿ ಕನ್ಯಾನ ಭಾರತ್ ಸೇವಾಶ್ರಮಕ್ಕೆ ಭೇಟಿ ನೀಡಲಾಯಿತು.

IMG-20191005-WA0098
ಯುವಮನಸ್ಕರಲ್ಲಿ ತಂದೆ ತಾಯಿಗಳೊಂದಿಗೆ ಪ್ರೀತಿ, ವಾತ್ಸಲ್ಯ, ಬಾಂಧವ್ಯವನ್ನು ವೃದ್ಧಿಸುವುದು. ಹೆತ್ತವರು ಹೊರೆಯಲ್ಲ ಎಂಬ ಭಾವನೆ ಮೂಡಿಸುವುದರ ಜೊತೆಗೆ ಹಿರಿಯರನ್ನು ಅಮಾನವೀಯವಾಗಿ ಆಶ್ರಮಕ್ಕೆ ತಳ್ಳುವುದು ಕಡಿಮೆಯಾಗಬೇಕು ಎಂಬುವುದು ಈ ಕಾರ್ಯಕ್ರಮದ ಉದ್ದೇಶ.
ಕನ್ಯಾನ ಭಾರತ್ ಸೇವಾಶ್ರಮದ ಸಂಚಾಲಕ ಈಶ್ವರ ಭಟ್ ಹಾಗೂ ಸ್ಥಳೀಯ ನಿವಾಸಿ ಪರಶುರಾಮ ಆಶ್ರಮದ ಹುಟ್ಟು ಮತ್ತು ಬೆಳವಣೆಗೆಗಳ ಬಗ್ಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಸೇವಾಯೋಜನೆಯ ಸ್ವಯಂಸೇವಕರು ಆಶ್ರಮದಲ್ಲಿ ಶ್ರಮದಾನವನ್ನು ನಡೆಸಿಕೊಟ್ಟರು. ಆಶ್ರಮ ನಿವಾಸಿಗಳೊಂದಿಗೆ ಸುಖ-ಕ್ಷೇಮ ವಿಚಾರಣೆ ಹಾಗೂ ಹಿರಿಯರನ್ನು ತಮ್ಮ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಮನರಂಜಿಸಿದರು. ಅಲ್ಲಿಯ ಹಿರಿಯರು ಅವರ ಕಲಾಪ್ರತಿಭೆಯನ್ನು ಮುಗ್ಧತೆಯೊಂದಿಗೆ ಮುಕ್ತವಾಗಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ೧೦೫ ವಿದ್ಯಾರ್ಥಿಗಳು, ಯೋಜನಾಧಿಕಾರಿ ಹರೀಶ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter