Published On: Mon, Oct 7th, 2019

ರಾಜ್ಯ ದ ಶ್ರೀಮಂತ ದೇವಸ್ಥಾನ ಗಳಲ್ಲಿ ಬಡವರಿಗೆ ಉಚಿತ ಮದುವೆ ಸರಕಾರದ ಚಿಂತನೆ : ಕೋಟ

ಫರಂಗಿಪೇಟೆ : ದೇವಸ್ಥಾನಗಳು ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ . ರಾಜ್ಯ ದ ಸುಮಾರು 100 ಶ್ರೀಮಂತ ದೇವಸ್ಥಾನ ಗಳನ್ನ ಗುರುತಿಸಿ ಅಲ್ಲಿ ಬಡವರ ಮದುವೆ ಗೆ ಉಚಿತ ವ್ಯವಸ್ಥೆ ಮಾಡಲಾಗುವುದು . ನಮ್ಮ ಸರಕಾರ ನೊಂದವರಿಗೆ ಬದುಕು ಕಟ್ಟಿ ಕೊಡುವ ಕೆಲಸ ಮಾಡಿದೆ ಸುಮಾರು 10000 ಸರಕಾರೀ ಶಾಲೆ ಗಳು ವಿದ್ಯಾರ್ಥಿ ಗಳ ಕೊರತೆ ಯಿಂದ ಮುಚ್ಚುವ ಹಂತಕ್ಕೆ ಬಂದಿದೆ , ಮೂಲಸೌಕರ್ಯ , ಉತ್ತಮ ಶಿಕ್ಷಣ ದ ಮೂಲಕ ವಿದ್ಯಾರ್ಥಿಗಳು ಸರಕಾರೀ ಶಾಲೆ ಗಳಿಗೆ ಬರುವಂತ ವಾತಾವರಣ ಸೃಷ್ಟಿಸ ಬೇಕು , ಆ ನಿಟ್ಟಿನಲ್ಲಿ ನಮ್ಮ ಜಿಲ್ಲೆ ಯ ವಿದ್ಯಾ ಪ್ರೇಮಿ ಗಳು ಸುಮಾರು ಸರಕಾರೀ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಿದ್ದಾರೆ . ನಮ್ಮ ಸರಕಾರವೂ ಈ ಬಗ್ಗೆ ಯೋಚಿಸುತ್ತಿದೆ ಎಂದು ಕರ್ನಾಟಕ ಸರಕಾರದ ಬಂದರು ಮತ್ತು ಮೀನುಗಾರಿಕೆ , ದತ್ತಿ ಮತ್ತು ಮುಜರಾಯಿ ಸಚಿವರು , ದ ಕ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರು ಕೊಡ್ಮಾಣ್ ನಲ್ಲಿ ೩೧ ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.IMG_2497 news

ಕೊಡ್ಮಾಣ್ ಸರಕಾರಿ ಪ್ರೌಢ ಶಾಲೆ ಯಲ್ಲಿ ನಿರಂತರ ೧೦೦ ಶೇಖಡ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರನ್ನು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಗೌರವಿಸಿದರು ಅಂತೆಯೇ ಸಾಮಾಜಿಕ ಕಾರ್ಯಕರ್ತರಾದ ದಾಮೋದರ ನೆತ್ತರಕೆರೆಯವರನ್ನು ಸನ್ಮಾನಿಸಲಾಯಿತು ಪ್ರೌಢ ಶಾಲೆಗೆ ತರಗತಿ ಕೊಠಡಿಗಳು , ಕಚೇರಿ, ಲ್ಯಾಬೋರೇಟರಿ , ಉತ್ತಮ ರಸ್ತೆ ಗಳ ಅನಿವಾರ್ಯತೆ ಗಳಿರುವ ಬಗ್ಗೆ ಉಸ್ತುವಾರಿ ಸಚಿವರಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ನಾಯ್ಗ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು , ಶಾಲಾ ಮುಖ್ಯಶಿಕ್ಷರು , ಶಿಕ್ಷಕವರ್ಗ ದವರು ಮನವಿ ಸಲ್ಲಿಸಿದರು .

ಜಿಲ್ಲೆಯಲ್ಲೇ ಮಾದರಿಯಾಗಿ ಶಾರದಾ ಮಹೋತ್ಸವವನ್ನು ಆಚರಿಸಿಕೊಂಡು ಬಂದಿರುವ ಕೊಡ್ಮಾಣ್ ನಲ್ಲಿ ದಿನಂಪ್ರತಿ ವೈದಿಕ , ಹೋಮ , ಸಾಂಸ್ಕ್ರತಿಕ ಕಾರ್ಯಕ್ರಮ ಗಳಲ್ಲದೆ ಜಯ ಭಾರತ ಗ್ರಾಮ ವಿಕಾಸ ದ ಸಹಯೋಗದೊಂದಿಗೆ ಡಾ ನಾರಾಯಣ ಶೆಣೈ ರಿಂದ ನೀರು -ಅರಿವು , ಡಾ ಶಿಕಾರಿ ಪುರ ಕೃಷ್ಣಮೂರ್ತಿ ಯವರಿಂದ ಧಾರ್ಮಿಕ ಸದ್ಭಾವನಾ , ಶ್ರೀ ಪುಂಡರೀಕಾಕ್ಷ ಯೋಗಾಚಾರ್ಯ ಬೆಳ್ಳೂರ್ ರವರಿಂದ ಕುಟುಂಬ ಪ್ರಬೋಧನ್– ನಮ್ಮ ಮನೆ ಎಂಬ ಚಿಂತನಾ ಕೂಟ ಕಾರ್ಯಕ್ರಮ ವನ್ನು ಆಯೋಜಿಸಿಕೊಂಡಿದೆ.

ಧಾರ್ಮಿಕ ಸಭಾ ವೇದಿಕೆಯಲ್ಲಿ ಬಂಟ್ವಾಳ ಶಾಸಕ ರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು, ದ ಕ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷರು ಮೋಹನ್ ಬೆಂಗ್ರೆ , ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಪಂಚಾಯತ್ ಸದಸ್ಯರಾದ ರವೀಂದ್ರ ಕಂಬಳಿ , ಪ್ರೌಢ ಶಾಲಾ ಶಿಕ್ಷಕ ರಾಮಚಂದ್ರ ರಾವ್ , ಉತ್ಸವ ಸಮಿತಿ ಅಧ್ಯಕ್ಷರಾದ ಲಕ್ಷ್ಮಿಕಾಂತ್ ನಾಯಕ್ ಕೊಡ್ಮಾಣ್ , ಕಾರ್ಯದರ್ಶಿ ಸುಜಿತ್ ಕುಮಾರ್ , ಕೋಶಾಧಿಕಾರಿ ವಿನಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಯವರು ಸ್ವಾಗತಿಸಿ ಪ್ರಸ್ತಾವನೆ ಗೈದರು ,ಸಂತೋಷ್ ಶೆಟ್ಟಿ ಕೊಡ್ಮಾಣ್ ವಂದಿಸಿದರು , ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter