Published On: Sat, Oct 5th, 2019

ರಾಮಪ್ಪಏಳ್ತಿಮಾರ್‍ರವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲ್ಲಡ್ಕ ಶಾಖೆ ಮತ್ತು ಶ್ರೀರಾಮ ಮಂದಿರಕಲ್ಲಡ್ಕ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ.

ಕಲ್ಲಡ್ಕ : ದಿನಾಂಕ 4.10.2019 ಸಂಜೆ 6.30ಕ್ಕೆ ಶ್ರೀರಾಮ ಮಂದಿರದ ಮಾಧವ ಸಭಾಂಗಣದಲ್ಲಿರಾಮಪ್ಪ ಏಳ್ತಿಮಾರ್ ಇವರಿಗೆರಾಷ್ಟ್ರೀಯ ಸ್ವಯಂಸೇವಕ ಸಂಘ ಕಲ್ಲಡ್ಕ ಶಾಖೆ ಮತ್ತು ಶ್ರೀರಾಮ ಮಂದಿರಕಲ್ಲಡ್ಕ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

20191004_181119
ರಾಷ್ಟ್ರೀಯ ಸ್ವಯಂಸೇವಕ ಸಂಘದದಕ್ಷಿಣಮಧ್ಯಕ್ಷೇತ್ರೀಯಕಾರ್ಯಕಾರಿಣಿ ಸದಸ್ಯರಾದಡಾ ಪ್ರಭಾಕರ ಭಟ್ ಮಾತನಾಡಿರಾಂಪಣ್ಣಒಬ್ಬರು ಹಿಂದು ವಿಚಾರಕ್ಕಾಗಿ, ಧ್ಯೇಯಕ್ಕಾಗಿ ಬದುಕಿರುವ ವ್ಯಕ್ತಿ.ಸಂಘದ ಸ್ವಯಂಸೇವಕರಾಗಿದ್ದುಕೊಂಡು ಸಂಘ ನೀಡಿದಸೂಚನೆಯನ್ನುಕಟ್ಟು ನಿಟ್ಟಾಗಿ ಪಾಲಿಸಿದ ಒಬ್ಬ ವ್ಯಕ್ತಿ.ತುರ್ತು ಪರಿಸ್ಥಿತಿಯನ್ನು ವಿರೊಧಿಸಿ ಹೋರಾಟ ಮಾಡಿದುದು ಮಾತ್ರವಲ್ಲದೆ, ಮಿಸಾ ಕಾಯ್ದೆಯಡಿಜೈಲುವಾಸ ಅನುಭಸಿದವರು. ವಿದ್ಯಾಭ್ಯಾಸಕಡಿಮೆಯಾದರೂಧೈರ್ಯವಂತರಾಗಿದ್ದುದಲ್ಲದೇ, ನಿಟಿಲೇಶ್ವರನಕಾರ್ಯದಲ್ಲಿ, ಮಂದಿರದ ಮೊಸರುಕುಡಿಕೆಉತ್ಸವದಲ್ಲಿ ಶ್ರೀಕೃಷ್ಣನ ಪಲ್ಲಕ್ಕಿ ಹೊರುವಲ್ಲಿ ಮುಂಚೂಣಿಯಲ್ಲಿದ್ದರು.ಎಂದಿಗೂ ಹಿಂದೂ ವಿರೋಧಿಯಾಗಿರದೆಅಥವಾಧರ್ಮವಿರೋಧಿಯಾಗಿರದೆ ಸದಾ ಸ್ನೇಹಿಜೀವಿಯಾಗಿಜೀವನ ನಡೆಸಿದವರು ಇವರುಎಂದರು.
ನಂತರ ಹಿಂದೂಜಾಗರಣ ವೇದಿಕೆಯ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅ.ವೈ ಮಾತನಾಡಿರಾಂಪಣ್ಣಒಬ್ಬರು ಶ್ರಮಜೀವಿ, ಸ್ವಾವಲಂಬಿ, ಸಮಾಜಸೇವಕ, ಹೊಸ ಬದುಕನ್ನು ತಿಳಿಸಿಕೊಟ್ಟ ವ್ಯಕ್ತಿತ್ವಅವರದ್ದು, ಸಮಾಜದಿಂದ ಸಮಾಜಕ್ಕೋಸ್ಕರ ಬದುಕಬೇಕುಎಂದು ತಿಳಿದುಕೊಂಡವರು ಎಂದರು.
ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಪದ್ಮನಾಭಕೊಟ್ಟಾರಿ, ಬಾಳ್ತಿಲ ಗ್ರಾಮ ಪಂಚಾಯತ್‍ಅಧ್ಯಕ್ಷರಾದ ವಿಠಲ ನಾಯ್ಕ, ನೇತಾಜಿಯುವಕ ಮಂಡಲದಗೌರವಾಧ್ಯಕ್ಷರು ನಾಗೇಶ ಕೆ, ಆನಂದ ಮಾಸ್ತರ್, ಪಾಂಡುರಂಗ ಪ್ರಭು, ನಾರಾಯಣ ಸೋಮಯಾಜಿ, ಕ.ಕೃಷ್ಣಪ್ಪ, ದಿನೇಶ್ ಶೈಣೈ, ರತ್ನಾಕರ ಶೆಟ್ಟಿ, ಜಗದೀಶಕಲ್ಲಡ್ಕ ಹಾಗೂ ಊರಿನ ಹಿರಿಯರು, ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದು ಅವರನ್ನು ಸ್ಮರಣೆ ಮಾಡಿದರು.ಕೊನೆಯಲ್ಲಿಒಂದು ನಿಮಿಷ ಮೌನ ಪ್ರಾರ್ಥನೆಯ ಬಳಿಕ, ಅವರ ಭಾವಚಿತ್ರಕ್ಕೆಎಲ್ಲರೂ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.
ಕಾರ್ಯಕ್ರಮವನ್ನುಚೆನ್ನಪ್ಪಆರ್‍ಕೋಟ್ಯಾನ್ ನಿರ್ವಹಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter