Published On: Mon, Sep 23rd, 2019

ಸೆ.29ರಿಂದ 74ನೇ ದಸರಾ ಸಾಹಿತ್ಯ, ಸಾಂಸ್ಕøತಿಕ ಉತ್ಸವ

ಮೂಡುಬಿದಿರೆ:ಸಮಾಜ ಮಂದಿರ ಸಭಾ ಮೂಡುಬಿದಿರೆ ಇದರ ವತಿಯಿಂದ 74ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕøತಿಕ ಉತ್ಸವ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಸೆ29ರಿಂದ ಅ.3ರವರೆಗೆ ಸಾಯಂಕಾಲ 7ರಿಂದ ನಡೆಯಲಿದೆ.  ವಿಶ್ರಾಂತ ಕುಲಪತಿ ಮಂಗಳೂರಿನ ಡಾ. ಬಿ.ಎ. ವಿವೇಕ ರೈ ಅವರು ಸೆ29ರಂದು ದಸರಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶತಾಯುಷಿ, ಸಾಧಕ ಮಿಜಾರುಗುತ್ತು ಆನಂದ ಆಳ್ವ, ಸಮಾಜ ಮಂದಿರದ ಹಿರಿಯ ಸದಸ್ಯ, ಕಾರ್ಯದರ್ಶಿ ಹೆಚ್. ಉದಯ ಶಂಕರ ಪ್ರಭು ಅವರನ್ನು ಸಮಾಜ ಮಂದಿರ ಪುರಸ್ಕಾರ ದೊಂದಿಗೆ ಗೌರವಿಸಲಾಗುವುದು ಎಂದು ಸಮಾಜ ಮಂದಿರ ಸಭಾದ ಅಧ್ಯಕ್ಷ , ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.

ಮೊದಲ ದಿನ ಡಾ. ಬಿ.ಎ. ವಿವೇಕ ರೈ ಅವರು ಯುರೋಪಿನಲ್ಲಿ ಕನ್ನಡ ಕುರಿತು ಉಪನ್ಯಾಸ ನೀಡಲಿದ್ದಾರೆ. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ವಾಲಿ ಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದರು. ಸೆ.30ರಂದು ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕøತ ವಿಭಾಗದ ಡಾ. ಶ್ರೀಶ ಕುಮಾರ್ ಎಂ.ಕೆ. ಅವರು ಸಾಹಿತ್ಯ ಬದುಕಿನ ಪಾಠ ಕುರಿತು ಉಪನ್ಯಾಸ ನೀಡಲಿರುವರು. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿರುವರು. ಬಳಿಕ ಮಂಗಳೂರಿನ ಸನಾತನ ನಾಟ್ಯಾಲಯದ ವಿದುಷಿ ಶಾರದಾ ಮಣಿ ಶೇಖರ್ ಅವರ ಮೂಡುಬಿದಿರೆ ಮತ್ತು ಮಂಗಳೂರಿನ ಶಿಷ್ಯೆಯರಿಂದ ನೃತ್ಯ ವೈವಿಧ್ಯ ನಡೆಯಲಿದೆ. ಅ.1ರಂದು ವರ್ಧಮಾನ ಪ್ರಶಸ್ತಿ ಪೀಠದ 2018ನೇ ಸಾಲಿನ ವರ್ಧಮಾನ ಪ್ರಶಸ್ತಿ ಪ್ರದಾನ ನಡೆಯಲಿದೆ. ಬಳಿಕ ಮೂಡುಬಿದಿರೆಯ ದಿಗಿಣ ದಿವಿಜ ಯಕ್ಷನಾಟ್ಯ ಕಲಾ ಕೇಂದ್ರದ ಮಕ್ಕಳ ತಂಡದವರಿಂದ ಹನುಮೋಧ್ಭವ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಅ.2ರಂದು ಗಾಂಧೀಜಿ-150ರ ಸ್ಮರಣೆಯ ಅಂಗವಾಗಿ ಚಿಂತಕ ಅರವಿಂದ ಚೊಕ್ಕಾಡಿಯವರಿಂದ ಗಾಂಧೀ ಮಾರ್ಗ ಕುರಿತ ಉಪನ್ಯಾಸ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬಳಿಕ ಟಾಪ್ ಎಂಟರ್‍ಟೈನರ್ಸ್ ಮೂಡುಬಿದಿರೆ ತಂಡದಿಂದ ನೃತ್ಯ ವೈಭವ ನಡೆಯಲಿದೆ. ಅ.3ರಂದು ಸಮಾರೋಪ ಸಮಾರಂಭದಲ್ಲಿ ಡಾ. ಎಂ. ಮೋಹನ ಆಳ್ವ ಅವರು ಶಿಕ್ಷಣ-ಆತಂಕದ ನಡೆಗಳು ಕುರಿತು ಉಪನ್ಯಾಸ ನೀಡಲಿದ್ದಾರೆ. ವಿದ್ಯಾರ್ಥಿ ಪುರಸ್ಕಾರ, ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಅವರಿಗೆ ಸಮಾಜ ಮಂದಿರ ಪುರಸ್ಕಾರ ಮಾಡಲಾಗುವುದು. ಬಳಿಕ ಆರಾಧನಾ ನೃತ್ಯ ಕೇಂದ್ರ ಮೂಡುಬಿದಿರೆ ಇಲ್ಲಿನ ನಾಟ್ಯವಿದುಷಿ ಸುಖದಾ ಬರ್ವೆ ಅವರ ಶಿಷ್ಯರಿಂದ ನೃತ್ಯ ಸಿಂಚನ ನಡೆಯಲಿದೆ ಎಂದು ಅಭಯಚಂದ್ರ ಹೇಳಿದರು. ಸಮಾಜ ಮಂದಿರ ಸಭಾದ ಜತೆ ಕಾರ್ಯದರ್ಶಿ ಕೆ. ಆರ್. ಪಂಡಿತ್, ಕೋಶಾಧಿಕಾರಿ ವಾಸುದೇವರಾವ್, ದಸರಾ ಉತ್ಸವ ಸಂಚಾಲಕ ಡಾ. ಪುಂಡಿಕಾೈ ಗಣಪಯ್ಯ ಭಟ್, ಎಂ.ಗಣೇಶ್ ಕಾಮತ್, ಸಹಿತ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter