Published On: Sun, Sep 22nd, 2019

ಬಿ.ಸಿ.ರೋಡ್ ಸೌಂದರ್ಯಕರಣ ಕಾಮಗಾರಿಗೆ ಚಾಲನೆ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಮಹತ್ವಾಕಾಂಕ್ಷೆಯ ಬಿ.ಸಿ.ರೋಡ್ ನಲ್ಲಿ 15 ಕೋ.ರೂ.ವೆಚ್ಚದಲ್ಲಿ ನಗರ ಸೌಂದರ್ಯಕರಣದ ಕಾಮಗಾರಿಗೆ ಅಕ್ಟೋಬರ್ 21 ರಂದು ಚಾಲನೆ ನೀಡಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ. ಶನಿವಾರ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಸಂಸದ ನಳಿನ್ ಕುಮಾರ್ ಕಟೀಲ್ ಅವರ ಉಪಸ್ಥಿತಿಯಲ್ಲಿ ಮಂಗಳೂರಿನ ಸಕ್ಯೂ೯ಟ್ ಹೌಸ್ ನಲ್ಲಿ ವಿವಿಧ ಕಂಪೆನಿಗಳ ಪ್ರಮುಖರು,ಅಧಿಕಾರಿಗಳ ಅಂತಿಮ ಸಭೆ ನಡೆಸಲಾಗಿದ್ದು,ಸೌಂದರ್ಯ ಕರಣದ ನೀಲನಕಾಶೆಯನ್ನುಅಂತಿಮಗೊಳಿಸಿ,ಕಾಮಗಾರಿ ಆರಂಭಕ್ಕು ದಿನ ನಿಗದಿಪಡಿಸಲಾಗಿದೆ ಎಂದರು.

ಸಹಾಯಕ ಆಯುಕ್ತರಾದ ರವಿಚಂದ್ರ ನಾಯಕ್,ವಿನ್ಯಾಸಗಾರ ಧರ್ಮರಾಜ್,ರಾಷ್ಟ್ರೀಯ ಹೆದ್ದಾರಿಪ್ರಾಧಿಕಾರದಅಧಿಕಾರಿಗಳು,ಪಿಡಬ್ಲ್ಯುಡಿ,ಮೆಸ್ಕಾಂ, ವಿವಿಧ ಇಲಾಖೆಯ ಅಧಿಕಾರಿಗಳ ಸಹಿತ ಯೋಜನೆಗೆ ಸಿ.ಎಸ್.ಆರ್ ನಿಧಿ ವಿನಿಯೋಗಿಸುವ ಸಂಸ್ಥೆಗಳಾದ ಎಂ.ಆರ್.ಪಿ.ಎಲ್,ಎನ್.ಎಂ.ಪಿ.ಟಿ ಯ ಪ್ರತಿನಿಧಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಶಾಸಕ ರಾಜೇಶ್ ನಾಯ್ಕ್ ವಿವರಿಸಿದರು. ಮುಖ್ಯಮಂತ್ರಿಯವರು 5 ಕೋಟಿಯ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಿದ್ದು,ಸಿ.ಎಸ್.ಆರ್ ನಿಧಿಯಿಂದ 10 ಕೋ.ರೂ.

FB_IMG_1569048266430

ಈ ಯೋಜನೆಗೆ ವಿನಿಯೋಗಿಸಲಾಗುತ್ತದೆ ಹಾಗೆಯೇ ಶಶಿಕಿರಣ್ ಶೆಟ್ಟಿ,ಜಗನ್ನಾಥ ಶೆಣೈ, ಸಂತೋಷ್ ಪೂಜಾರಿ, ಬಿ.ಎ.ಮೊಯ್ದಿನ್, ಜೆರ್ರಿ ಕತಾರ್ ಈ ಐವರು ಪ್ರಮುಖರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ.ಜನರ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಯಲಿದೆ ಎಂದವರು ತಿಳಿಸಿದರು. ಬಿ.ಸಿ.ರೋಡಿನ ಕೈಕಂಬದಿಂದ ಬಹ್ರಶ್ರೀ ನಾರಾಯಣಗುರು ವೃತ್ತದವರೆಗೆ ಸೌಂದರ್ಯಕರಣಗೊಳಿಸಲಾಗುತ್ತಿದ್ದು, ಗುಣಮಟ್ಟದಸಿಸಿಟಿವಿ,ಬೀದಿದೀಪ ಅಳವಡಿಕೆ,ಒಳಚರಂಡಿ ,ಬಸ್ ತಂಗುದಾಣ,ಕೆಎಸ್ ಆರ್ ಟಿಸಿ ಬಸ್ ತಂಗುದಾಣದ ಮುಂಭಾಗ ವೃತ್ತ ನಿರ್ಮಾಣ,ಪ್ಲೈಒವರ್ ಅಡಿಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಸಾರ್ವಜನಿಕ ಶೌಚಾಲಯ, ಹೂದೋಟ,ಕೈಕುಂಜ ಪ್ರದೇಶದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ,ಟ್ರಾಫಿಕ್ ಪೊಲೀಸ್ ಠಾಣೆ ಮೊದಲಾದ ಅಭಿವೃದ್ದಿ ಕಾರ್ಯಗಳು ಈ ಯೋಜನೆಯಲ್ಲಿ ಒಳಗೊಂಡಿದೆ ಎಂದರು.

ದಿನವೊಂದಕ್ಕೆ ಲಕ್ಷಾಂತರಮಂದಿ ಜನರು ಬಿ.ಸಿ.ರೋಡ್ ಗೆ ಬಂದು ಹೋಗುವುದರಿಂದ ಸ್ವಚ್ಚಮತ್ತು ಸುಂದರನಗರವನ್ನಾಗಿಸುವ ಸಂದರ್ಭದಲ್ಲಿ ಬೆರಳೆಣಿಕೆ ಮಂದಿಗೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಜನರು ಸಹಕರಿಸುವಂತೆ ಶಾಸಕರು ಕೋರಿದರು. ಮಳೆ ನಿಂತ ತಕ್ಷಣ ಹೆದ್ದಾರಿಯನ್ನು ದುರಸ್ಥಿಗೊಳಿಸುವ ಕಾರ್ಯ ನಡೆಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಸಭೆಯಲ್ಲಿ ಹಾಜರಿದ್ದ ರಾ.ಹೆ.ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ದೇಶದಾದ್ಯಂತ ಸೇವಾಸಪ್ತಾಹ ಕಾರ್ಯಕ್ರಮಗಳು ನಡೆಯುತ್ತಿದ್ದು,ಬಂಟ್ವಾಳ ಕ್ಷೇತ್ರ ಬಿಜೆಪಿಯಿಂದ ರಕ್ತದಾನ ಶಿಬಿರ,ಪೌರ ಕಾರ್ಮಿಕರ ಸಮಸ್ಯೆಗಳನ್ನು ಅರಿತುಕೊಳ್ಳುವ ಉದ್ದೇಶದಿಂದ ಅವರೊಂದಿಗೆ ಸಂವಾದ ಹಾಗೂ ಸಹಭೋಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ,ಪುರಸಭಾಸದಸ್ಯಗೋವಿಂದಪ್ತಭು,ಜಿಲ್ಲಾಉಪಾಧ್ಯಕ್ಷ ಜಿ.ಆನಂದ,ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ,ಕ್ಷೇತ್ರ ಸಮಿತಿ ಪ್ರ.ಕಾರ್ಯದರ್ಶಿಗಳಾದ ರಾಮದಾಸ್ ,ಮೋನಪ್ಪದೇವಸ್ಯ,ಉಪಾಧ್ಯಕ್ಷ ದೇವಪ್ಪ ಪೂಜಾರಿ,ರಮಾನಾಥ ರಾಯಿ,ಪುರುಷೋತ್ತಮಶೆಟ್ಟಿ ವಾಮದಪದವು ಮೊದಲಾದವರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter