Published On: Sun, Sep 15th, 2019

ಪಣೋಲಿಬೈಲ್ ನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಸಮಾರೋಪ

ಬಂಟ್ವಾಳ: ಬಿಜೆಪಿ ಯುವಮೋರ್ಚಾ ಬಂಟ್ವಾಳ ಕ್ಷೇತ್ರ ಸಮಿತಿ ಮತ್ತು ಸಜಿಪಮುನ್ನೂರು ಹಾಗೂ ಸಜಿಪಮೂಡ ಗ್ರಾಮ ಸಮಿತಿಗಳ ಜಂಟಿ ಆಶ್ರಯದಲ್ಲಿ ಪಣೋಲಿಬೈಲಿನಲ್ಲಿ ಪ್ರಥಮ ಹಂತದ ಸದಸ್ಯತ್ವ ಅಭಿಯಾನದ ಸಮಾರೋಪ ಸಮಾರಂಭ ಭಾನುವಾರ  ನಡೆಯಿತು. ಅತಿಥಿಯಾಗಿ ಭಾಗವಹಿಸಿ ಮಾತಾನಾಡಿದ  ಬಂಟ್ವಾಳ  ಶಾಸಕ ಯು.ರಾಜೇಶ್ ನಾಯ್ಕ್  ಜಗತ್ತಿನಲ್ಲಿ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷದ ಸದಸ್ಯತ್ವವನ್ನು ಜನಸಾಮಾನ್ಯರು ಕೂಡ ಆಧುನಿಕ ತಂತ್ರಜ್ಣಾನದ ಮೂಲಕ ಪಡೆಯುವಂತಾಗಲು ಈ ರೀತಿಯ ಅಭಿಯಾನಗಳಿಂದ ಸಾದ್ಯವಾಗುತ್ತದೆ ಎಂದರು.ಪ್ರತಿ ಬೂತು ಮಟ್ಟದಲ್ಲಿ ನಾಗರಿಕರ ಭಾವನೆಗಳೊಂದಿಗೆ ಪಕ್ಷವನ್ನು ಜೋಡಿಸಲು ಶ್ರಮಿಸುತ್ತಿರುವ ಕಾರ್ಯಕರ್ತರ ಶ್ರಮ ಶ್ಲಾಘನೀಯ ಎಂದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಮಾತನಾಡಿ ಈ ರೀತಿಯ ಅಭಿಯಾನಗಳಿಂದ ಪಕ್ಷದ ತತ್ವ, ಸಿದ್ದಾಂತಗಳನ್ನು ಪ್ರತಿಯೊಬ್ಬರಿಗೂ ತಿಳಿಸಿ ಸದಸ್ಯರನ್ನಾಗಿಸುವ ಕಾರ್ಯ ನಿರಂತರ ನಡೆಯಲಿ ಎಂದರು.
IMG-20190901-WA0089 (1)
ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸಂದೇಶ್ ಶೆಟ್ಟಿ ಮತ್ತು ಕ್ಷೇತ್ರ ಸಮಿತಿಯ ಪ್ರದಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ ಶುಭ ಹಾರೈಸಿದರು. ಯುವಮೋರ್ಚಾ ಕ್ಷೇತ್ರ ಸಮಿತಿ ಅಧ್ಯಕ್ಷ ವಜ್ರನಾಥ ಕಲ್ಲಡ್ಕ ಅವರು ಸಭಾಧ್ಯಕ್ಷತೆ ವಹಿಸಿ ಅಭಿಯಾನದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಕ್ಷೇತ್ರ ಸಮಿತಿ ಉಪಾದ್ಯಕ್ಷ ಶ್ರೀಕಾಂತ್ ಶೆಟ್ಟಿ, ಕಾರ್ಯದರ್ಶಿಗಳಾದ ರಮಾನಾಥ ರಾಯಿ, ರಂಜಿತ್ ಮೈರ, ಜಿಲ್ಲಾ ಯುವಮೋರ್ಚಾ ಉಪಾದ್ಯಕ್ಷ ಸುದರ್ಶನ್ ಬಜ, ಕ್ಷೇತ್ರ ಯುವಮೋರ್ಚಾ ಉಪಾದ್ಯಕ್ಷ ವಿನೀತ್ ಶೆಟ್ಟಿ ಪೆರಾಜೆ, ದಿನೇಶ್ ದಂಬೆದಾರ್, ಕೋಶಾಧಿಕಾರಿ ರೂಪೇಶ್ ಆಚಾರ್ಯ, ಸಜಿಪಮುನ್ನೂರು ಮಹಾಶಕ್ತಿಕೇಂದ್ರದ ಅಧ್ಯಕ್ಷ ಅರವಿಂದ ಭಟ್, ಪ್ರಭಾರಿ ಬಾಲಕೃಷ್ಣ ಸೆರ್ಕಳ, ಕ್ಷೇತ್ರ ಸಮಿತಿ ಸದಸ್ಯರಾದ ಪ್ರವೀಣ್ ಗಟ್ಟಿ, ಸಜಿಪಮುನ್ನೂರು ಗ್ರಾಮ ಸಮಿತಿ ಅಧ್ಯಕ್ಷ ದಯಾನಂದ ಬಿ ಎಂ, ಸಜಿಪಮೂಡ ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ ಸಾರ್ತಾವು, ಕಾರ್ಯದರ್ಶಿ ಅಶೋಕ ಗಟ್ಟಿ, ಯಶವಂತ ನಗ್ರಿ, ಕೀರ್ತನ್ ಸಾಲ್ಯಾನ್, ಚರಣ್ ಜೀತ್ ಗಟ್ಟಿ, ಚೇತನ್ ಕುಮಾರ್, ಸಂತೋಷ್ ಕುಮಾರ್, ಪ್ರಶಾಂತ್ ಆಯೆರೆ, ರಾಜೇಶ್ ನಾಯಕ್ ದಾಸರಗುಡ್ಡೆ, ನಂದಕಿಶೋರ್ ಖಂಡಿಗ, ಪುಷ್ಪರಾಜ್, ವೀರೇಂದ್ರ ಕುಲಾಲ್, ನವೀನ್ ಕುಂದರ್, ಗಣೇಶ್ ದೇವಾಡಿಗ, ಸೀತಾರಾಮ ಅಗೋಳಿಬೆಟ್ಟು, ಸಂದೇಶ್ ಗಟ್ಟಿ, ಗಣೇಶ್ ಮರ್ತಾಜೆ, ಉಪಸ್ಥಿತರಿದ್ದರು.
Attachments area

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter