Published On: Sun, Sep 15th, 2019

ಬಂಟ್ವಾಳ ತಾ.ಬಿಲ್ಲವ ಸಂಘದಿಂದ ಸಂಭ್ರಮದ ನಾರಾಯಣ ಗುರುಜಯಂತಿ ಆಚರಣೆ

ಬಂಟ್ವಾಳ : ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರುವ ನಾರಾಯಣಗುರು ಮಂದಿರದಲ್ಲಿ ಭಾನುವಾರ  ಬ್ರಹ್ಮಶ್ರೀ ನಾರಾಯಣಗುರುವರ್ಯರ 165 ನೇ ಜನ್ಮದಿನಾಚರಣೆಯು ಸಂಭ್ರಮದಿಂದ ನಡೆಯಿತು. ಬೆಳಿಗ್ಗೆ ಭಜನೆ,ಗುರುಪೂಜೆ,ಮಹಾಪೂಜೆಯ ಬಳಿಕ ನಾರಾಯಣಗುರು ಮಂದಿರದಲ್ಲಿ ಸಭಾ ಕಾರ್ಯಕ್ರಮ,ಸಾಧಕರಿಗೆ ಸನ್ಮಾನ,ಅಭಿನಂದನೆಯು ನಡೆಯಿತು.IMG-20190915-WA0024

ಮಂಗಳೂರು ಸಂಸದ ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿ  ಸ್ವಾತಂತ್ರ್ಯಪೂರ್ವದಲ್ಲಿ ಕಗ್ಗತ್ತಲು ತುಂಬಿದ್ದಾಗ ಬೆಳಕು ಕೊಟ್ಟವರು ನಾರಾಯಣಗುರುಗಳು ಎಂದು ನಳಿನ್ ಹೇಳಿದರು.ತಾನು ಯಾವತ್ತೂ ಕೂಡ ಜಾತಿವಾದಿಯಾಗಿ ನಡೆದುಕೊಂಡಿಲ್ಲ, ಬ್ರಹ್ಮಶ್ರೀ ನಾರಾಯಣಗುರುಗಳ ವಿಚಾರಧಾರೆ,ಸಿದ್ದಾಂತವನ್ನು ಪಾಲಿಸುತ್ತಿದ್ದೇನೆ ಎಂದ ಸಂಸದ ನಳಿನ್  ನಾರಾಯಣಗುರುಗಳಿಂದಾಗಿ  ದೇಶದಲ್ಲಿ ಹಿಂದೂ ಧರ್ಮ ಉಳಿಯಲು ಸಾಧ್ಯವಾಗಿದೆ ಎಂದರು.

IMG-20190915-WA0065

ಅತಿಥಿಯಾಗಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತುಮಾತನಾಡಿ,ಬಿಲ್ಲವಸಮಾಜಸೇವಾಸಂಘದಕಾರ್ಯಚಟುವಟಿಕೆಗಳನ್ನುಶ್ಲಾಘಿಸಿದರು.ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಅವರುಸಮಾರಂಭದಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ವೇಳೆ ಸರಕಾರಿ ಶಾಲೆ ಉಳಿಸಿ,ಬೆಳಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಹಾಗೂ  ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಸನ್ಮಾನಿಸಲಾಯಿತು.ಪ್ರತಿಭಾನ್ವಿತ ಯುವ ವಿಜ್ಙಾನಿ ಮಾ.ಕೌಶಿಕ್  ಬತ್ತನಾಡಿ, ಕರಾಟೆಪಟು ಮಾ.ನಿಖಿಲ್ ಅವರನ್ನು ಅಭಿನಂದಿಸಲಾಯಿತು.

IMG-20190915-WA0030

ಸಂಘದ ಉಪಾಧ್ಯಕ್ಷ ನಾರಾಯಣ ಪೂಜಾರಿ ಬೊಳ್ಳುಕಲ್ಲು, ಕೋಶಾಧಿಕಾರಿ ಉಮೇಶ್ ಸುವರ್ಣ,  ಲೆಕ್ಕಪರಿಶೋಧಕ ಸತೀಶ್ ಬಿ., ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ಜಯಲಕ್ಷ್ಮಿ ಭುವನೇಶ್ ವೇದಿಕೆಯಲ್ಲಿದ್ದರು. ಸಂಘದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳ ಅನುಯಾಯಿಗಳು ಯಾವತ್ತು ಕೂಡ ಜಾತಿವಾದಿಯಾಗಲು ಸಾಧ್ಯವಿಲ್ಲ, ಜಾತಿಯಿಂದ ದೇಶವನ್ನು ಕಟ್ಟಲು,ಶ್ರೇಷ್ಠನಾಗಲು ಸಾಧ್ಯವಾಗದು,ಸಾಧನೆ,ಛಲ,ಜ್ಙಾನದಿಂದ ಮಾತ್ರ ಗೌರವದ ಸ್ಥಾನ ಸಿಗುವುದು ಎಂದರು.     ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಎಂ.ತುಂಬೆ ಸ್ವಾಗತಿಸಿದರು.  ಜತೆ ಕಾರ್ಯದರ್ಶಿ ಆನಂದ ಸಾಲ್ಯಾನ್ ಶಂಭೂರು ವಂದಿಸಿದರು.

IMG-20190915-WA0026

ಕಲಾವಿದ  ಲಕ್ಷ್ಮೀಶಸುವರ್ಣ ಕಾರ್ಯಕ್ರಮ ನಿರೂಪಿಸಿದರು.  ಇದಕ್ಕು ಮೊದಲು ಇತ್ತೀಚೆಗೆ ನಿಧನರಾದ ಬಂಟ್ವಾಳ ತಾಲೂಕು ಯುವವಾಹಿನಿ ಸ್ಥಾಪಾಕಧ್ಯಕ್ಷ ಬಿ.ತಮ್ಮಯ್ಯ ಅವರ ಆತ್ಮಕ್ಕೆ ಶಾಂತಿಕೋರಿ ಶ್ರದ್ದಾಂಜಲಿ ಅರ್ಪಿಸಲಾಯಿತು.  ಸಂಘದ ಕಚೇರಿ ಅವರಣದಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಂಸದರಿಗೆ ಸಂಘದಿಂದ ಮನವಿ ಸಲ್ಲಿಸಲಾಯಿತು. . ಬಳಿಕ ಬಂಟ್ವಾಳ ತಾ.ಬಿಲ್ಲವ ಮಹಿಳಾ ಸಮಿತಿ ಮತ್ತು ಯುವವಾಹಿನಿ ಬಂಟ್ವಾಳ ತಾ.ಘಟಕದ ಸಹಯೋಗದೊಂದಿಗೆ ಸಾಂಸ್ಕೃತಿಕ ಕಾರ್ಯ ಕ್ರಮಗಳು ಜರಗಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter