Published On: Tue, Aug 13th, 2019

ತಾಲ್ಲೂಕಿನ ಶಾಲೆಗಳಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವಕ್ಕೆ ಕರೆ ಖಾದಿ ಧ್ವಜ ಬಳಸಿ,ಪ್ಲಾಸ್ಟಿಕ್ ಧ್ವಜ ನಿಷೇದ-ಕೆ.ಎಸ್.ನಾಗರಾಜಗೌಡ

ಕೋಲಾರ: ತಾಲ್ಲೂಕಿನಾದ್ಯಂತ ಎಲ್ಲಾ ಸರ್ಕಾರಿ,ಅನುದಾನಿತ,ಖಾಸಗಿ ಶಾಲೆಗಳಲ್ಲಿ ಸ್ವಾತಂತ್ರ್ಯೋತ್ಸವವನ್ನು ಸಡಗರ,ಸಂಭ್ರಮದಿಂದ ಆಚರಿಸಿ, ಕಡ್ಡಾಯವಾಗಿ ಖಾದಿ ಧ್ವಜ ಬಳಸಿ, ಅದ್ದೂರಿಯಾಗಿ ಆಚರಿಸಲು ಕ್ರಮ ವಹಿಸಿ ಎಂದು ಮುಖ್ಯಶಿಕ್ಷಕರು ಮತ್ತು ಸಿಆರ್‍ಪಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಸೂಚನೆ ನೀಡಿದರು.14kolar7

ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನಡೆದ ಮುಖ್ಯಶಿಕ್ಷಕರು, ಸಿಆರ್‍ಪಿಗಳ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಆ.14 ರಂದೇ ಸ್ವಚ್ಚಭಾರತ ಅಭಿಯಾನದಡಿ ಶಾಲೆಗಳ ಕೊಠಡಿ ಹಾಗೂ ಆವರಣವನ್ನು ಸ್ವಚ್ಚಗೊಳಿಸಲು ಕ್ರಮವಹಿಸಿ ಎಂದರು.
ನೂತನ ಖಾದಿ ಧ್ವಜವನ್ನು ಬಳಸಿ ಎಂದ ಅವರು, ಪ್ಲಾಸ್ಟಿಕ್ ಧ್ವಜ ಬಳಕೆಗೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿ, ಧ್ವಜಾರೋಹಣ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳು, ಎಸ್‍ಡಿಎಂಸಿಯವರನ್ನು ಕರೆಸಿ ಶಿಷ್ಟಾಚಾರಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಲು ಸೂಚಿಸಿದರು.
ಆ.15 ರಂದು ಬೆಳಗ್ಗೆ 9 ಗಂಟೆಗೆ ಮುನ್ನವೇ ಧ್ವಜಾರೋಹಣ ಮಾಡಿರಬೇಕು, ವಂದೇ ಮಾತರಂ, ರಾಷ್ಟ್ರಗೀತೆ, ನಾಡಗೀತೆಯನ್ನು ಮಕ್ಕಳಿಂದ ಹಾಡಿಸಿ, ಶಾಲೆಯಲ್ಲಿ ಸಂಭ್ರಮದ ವಾತಾವರಣ ಇರುವಂತೆ ನೋಡಿಕೊಳ್ಳಿ ಎಂದರು.
ಶಾಲೆಯ ಎಲ್ಲಾ ಶಿಕ್ಷಕರು ಕಡ್ಡಾಯವಾಗಿ ಹಾಜರಿದ್ದು, ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಬೇಕು, ಇಡೀ ಕಾರ್ಯಕ್ರಮದಲ್ಲಿ ಲೋಪ ಕಂಡು ಬರದಂತೆ ಎಲ್ಲರೂ ಸಹಕಾರದಿಂದ ತಂಡೋಪಾದಿಯಲ್ಲಿ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಿದ ಕುರಿತು ವರದಿ ತಯಾರಿಸಿ ದಾಖಲೆಗಳನ್ನು ನಿರ್ವಹಿಸಲು ಸೂಚಿಸಿದ ಬಿಇಒ ಅವರು, ಮಕ್ಕಳಿಗೆ ಶಾಲೆಯಲ್ಲಿ ಸಿಹಿ ತಯಾರಿಸಿ ವಿತರಿಸಲು ಸೂಚಿಸಿದರು.
ಶಾಲೆಯ ಆವರಣದಲ್ಲಿನ ಗಿಡ ಮರಗಳಿಗೆ ಪಾತಿ ಮಾಡಿ ಇಡೀ ಆವರಣ ಸುಂದರವಾಗಿ ಕಾಣುವಂತೆ ಸಿದ್ದಪಡಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಿಆರ್‍ಸಿ ರಾಮಕೃಷ್ಣಪ್ಪ, ಶಿಕ್ಷಣ ಸಂಯೋಜಕರಾದ ಮುನಿರತ್ನಯ್ಯಶೆಟ್ಟಿ, ಆರ್.ಶ್ರೀನಿವಾಸನ್, ವೆಂಕಟಾಚಲಪತಿ, ರಾಘವೇಂದ್ರ, ಬೈರೆಡ್ಡಿ ಮತ್ತಿತರರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter