Published On: Tue, Aug 13th, 2019

20 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ರೈತ ಸಂಘದಿಂದ ಒತ್ತಾಯ.

ಕೋಲಾರ: ಸರ್ಕಾರ ಕೂಡಲೇ ಸಚಿವ ಸಂಪುಟ ವಿಸ್ತರಣೆ ಮಾಡಿ ಪ್ರತಿ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಅತೀವೃಷ್ಠಿ ಹಾಗೂ ಅನಾವೃಷ್ಠಿಯಿಂದ ತತ್ತರಿಸಿರುವ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 20 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರೈತ ಸಂಘದಿಂದ ಮೆಕ್ಕೆ ವೃತ್ತದಲ್ಲಿ ಬೆಳೆಗಳ ಸಮೇತ ಹೋರಾಟ ಮಾಡಿ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ನೀಡಿ ಅಗ್ರಹಿಸಲಾಯಿತು. ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ರಾಜ್ಯ ಉಪಾದ್ಯಕ್ಷ  ಕೆ.ನಾರಾಯಣಗೌಡ ರಾಜ್ಯದಲ್ಲಿ 30 ವರ್ಷಗಳಿಂದ ಕಂಡು ಕೇಳಿರದ  ಬೀಕರವಾದ ಬರ ಹಾಗೂ ನೆರೆ ಹಾವಳಿಯಿಂದ ರಾಜ್ಯದ ಜನ  ತತ್ತರಿಸುತ್ತಿದ್ದಾರೆ.

Raitha sangha cm sachiva samputa horata news 13-08-2019 (4)

ದೇವರು ಮುನಿದರೆ ಪ್ರಕೃತಿ ವಿಕೋಪ ಯಾವ  ರೀತಿ ಇರುತ್ತದೆ. ಎನ್ನುವುದಕ್ಕೆ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ  ಸುರಿಯುತ್ತಿರುವ ಬೀಕರವಾದ ಮಳೆಗೆ ಸಾವಿರಾರು ಹಳ್ಳಿಗಳ  ಲಕ್ಷಾಂತರ ಕುಟುಂಬಗಳು ಇಂದು ನೆಲೆ ಇಲ್ಲದೆ ಊಟವಿಲ್ಲದ ಪರಿಸ್ಥಿತಿ  ಒಂದುಕಡೆಯಾದರೆ ಮತ್ತೊಂದುಕಡೆ ಹನಿ ಮಳೆ ಇಲ್ಲದೆ ಕುಡಿಯಲು ನೀರಿಲ್ಲದೆ ದನಕರುಗಳಿಗೆ ಮೇವಿಲ್ಲದೆ . ಮಳೆ ನಂಬಿ ಬಿತ್ತನೆ  ಮಾಡಬೇಕಾದ ಲಕ್ಷಾಂತರ ಕುಟುಂಬಗಳು ಮಳೆಗಾಗಿ ದೇವರ ಮರೆ ಹೋಗುತ್ತಿದ್ದಾರೆ.

Raitha sangha cm sachiva samputa horata news 13-08-2019

ಮತ್ತೊಂದೆಡೆ ರಾಜ್ಯದಲ್ಲಿ ಅತೀವೃಷ್ಠಿ ಹಾಗೂ  ಅನಾವೃಷ್ಠಿಗೆ ತುತ್ತಾಗಿರುವ ಜಿಲ್ಲೆಗಳಿಗೆ ಸ್ಪಂದಿಸಬೇಕಾದ ರಾಜ್ಯ ಬಿಜೆಪಿ  ಸರ್ಕಾರ ರಚನೆ ಮಾಡಿ ಒಂದು ತಿಂಗಳಾದರೂ ಸಚಿವ ಸಂಪುಟ ವಿಸ್ತರಣೆ ಮಾಡದೆ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೆ  ಕೋಮಾ ಸ್ಥಿತಿಯಲ್ಲಿರುವ ರೋಗಿಯಂತೆ ಸರ್ಕಾರವಿರುವ ಜೊತೆಗೆ ನಾನೇ ರಾಜ ನಾನೇ ಮಂತ್ರಿಯೆಂಬಂತೆ ಮಾನ್ಯ ಯಡಿಯೂರಪ್ಪನವರು  ಹಿಟ್ಲರ್ ಆಡಳಿತ ನಡೆಸುತ್ತಿದ್ದಾರೆಂದು ಅಕ್ರೋಶ ವ್ಯಕ್ತಪಡಿಸಿದರು.

ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಇಡೀ ದೇಶಕ್ಕೆ ಹಾಲು ಹಣ್ಣು ತರಕಾರಿ ಕೊಟ್ಟಂತಂಹ ಜಿಲ್ಲೆ ಇಂದು ಸಂಪೂರ್ಣವಾಗಿ ಬರಕ್ಕೆ ತುತ್ತಾಗುವ ಜೊತೆಗೆ ಹಾಲು ಮತ್ತು ರೇಷ್ಮೇ ಬೆಲೆ ಕುಸಿತದಿಂದ ಅದನ್ನೇ ನಂಬಿದ್ದ ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದಿವೆ. ಮತ್ತೊಂದೆಡೆ ಬೀಕರವಾದ ಮಳೆಗೆ ಲಕ್ಷಾಂತರ ಕುಟುಂಬಗಳು ಮನೆ ಮಠ ಬೆಳೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿವೆ ಇಂತಹ ಸನ್ನಿವೇಶದಲ್ಲಿ ಜನರ ಮದ್ಯೆ ಇರಬೇಕಾದ ಜನ ಪ್ರತಿನಿದಿಗಳು ಆಡಳಿತ ಮತ್ತು ವೀರೋಧ ಪಕ್ಷಗಳು ಹಗ್ಗಾಜಗ್ಗಾಟದಲ್ಲಿ ತೊಡಗಿವೆ.

Raitha sangha cm sachiva samputa horata news 13-08-2019 (3)

ಸರ್ಕಾರ ರಚನೆ ಮಾಡಿ ಒಂದು  ತಿಂಗಳಾದರೂ ಸಚಿವ ಸಂಪುಟ ವಿಸ್ತರಣೆಯೂ ಮಾಡದೇ ಇಲ್ಲವೇ ಜಿಲ್ಲಾದಿಕಾರಿಗಳಿಗೆ ಹೆಚ್ಚಿನ ಅಧಿಕಾರವೂ ನೀಡದೆ ಜನ ಸಾಮಾನ್ಯರ ಜೀವನದ  ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರಕ್ಕೆ ಒಂದು ದಿನದಲ್ಲಿ ಸಚಿವ ಸಂಪುಟ  ವಿಸ್ತರಣೆ ಮಾಡಿ ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ  ನೀಡಬೇಕು. ಇಲ್ಲವೇ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವೀಕೆ  ಜಾರಿಗೊಳಿಸಿ, ಜಿಲ್ಲಾದಿಕಾರಿಗಳಿಗೆ ಅಧಿಕಾರವನ್ನು ನೀಡಿ ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಹಾಗೂ ರಾಜ್ಯಕ್ಕೆ  ಕೇಂದ್ರದಿಂದ 20 ಸಾವಿರ ಕೋಟಿ ಅನುದಾನ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಮನವಿ ಮಾಡಿದರು.

ಹೋರಾಟದ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ತಹಶೀಲ್ದಾರ್‍ರವರು  ನಿಮ್ಮ ಮನವಿಯ ಜೊತೆಗೆ ಜಿಲ್ಲೆಯ ಬರ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವ ಜೊತೆಗೆ ನಿಮ್ಮ ಸಮಸ್ಯೆಗಳಿಗೆ ದಿನದ 24 ಗಂಟೆ ಸೇವೆ ಮಾಡಲು ಜಿಲ್ಲಾಡಳಿತ ಸಿದ್ದ ಎಂದು ಭರವಸೆ ನೀಡಿದರು. ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಕಾವ್ಯಾಂಜಲಿ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಈಕಂಬಳ್ಳಿ ಮಂಜುನಾಥ್, ಮಾಸ್ತಿ ವೆಂಕಟೇಶ್, ತೆರ್ನಹಳ್ಳಿ ಆಂಜಿನಪ್ಪ, ಸುಪ್ರೀಂ ಚಲ, ವಡ್ಡಹಳ್ಳಿ ಮಂಜುನಾಥ್, ರಂಜಿತ್, ಸಾಗರ್, ಚಂದ್ರಪ್ಪ, ಸಹದೇವಪ್ಪ, ಸಿ. ಮುನಿಯಪ್ಪ, ಮುಂತಾದವರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter