Published On: Tue, Aug 13th, 2019

ರಾಷ್ಟ್ರ ಧ್ವಜವನ್ನು ಗೌರವಿಸೋಣ – ಹಿಂದೂ ಜನಜಾಗೃತಿ ಸಮಿತಿ

ಉಚ್ಚನ್ಯಾಯಾಲಯದ ಆದೇಶದಂತೆ ರಾಷ್ಟ್ರಧ್ವಜದ ಅವಮಾನವನ್ನು ತಡೆಯಲು ಹಾಗೂ ರಾಜ್ಯ ಸರ್ಕಾರದಿಂದ ಪ್ಲಾಸ್ಟಿಕ ಮೇಲಿನ ನಿರ್ಬಂಧದ ನಿರ್ಣಯದ ಕುರಿತು ಕ್ರಮಕೈಗೊಳ್ಳುವ ಕುರಿತು ಬಂಟ್ವಾಳ ತಾಲೂಕಿನ ತಹಸೀಲುದಾರರಿಗೆ ಮನವಿಯನ್ನು ನೀಡಲಾಯಿತು.IMG-20190813-WA0000

ಹಿಂದೂ ಜನಜಾಗೃತಿ ಸಮಿತಿಯು ಈ ದಿಶೆಯಿಂದ ಕಳೆದ 16ವರ್ಷಗಳಿಂದ ರಾಷ್ಟ್ರಧ್ವಜದ ಗೌರವ ಕಾಪಾಡುವ ಅಭಿಯಾನವನ್ನು ಮಾಡುತ್ತಿದೆ. ಸ್ವಾತಂತ್ರ್ಯದಿನಾಚರಣೆಯ ಸಂದರ್ಭ ರಾಷ್ಟ್ರಧ್ವಜದ ಅನಾಧರ ಆಗದೆ ಜಾಗೃತಿ ಮೂಡಿಸಲು  ಹಿಂದೂ ಜನಜಾಗೃತಿ ಸಮಿತಿ ವತಿಯಿಂದ  ಬಂಟ್ವಾಳ ತಾಲೂಕು ತಹಶೀಲ್ದಾರರ ಅನುಪಸ್ಥಿತಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಯಾದ ಪ್ರಸನ್ನ ಪಕ್ಕಳ ಅವರಿಗೆ ಮಾನವಿ ನೀಡಲಾಯಿತು. ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಅಜಿತ್, ಶ್ರೀ ಕಿರಣ್, ಶ್ರೀ ಪಾಲಕ್ಷ, ಶ್ರೀ ರಾಧ ಕೃಷ್ಣ ಮತ್ತು ಧರ್ಮ ಪ್ರೇಮಿಗಳಾದ ದಿನೇಶ್ ಕಂಡಿಗ,ವಿಜಿತ್, ಮನೋರಾಜ್ ಶೆಟ್ಟಿ ಮಂಚಿ ಗುತ್ತು.

ಶಾಲಾ ಕಾಲೇಜು ಹಾಗೂ ಇತರ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ  ಶಿಕ್ಷಣಾಧಿಕಾರಿಗಳ ಕಚೇರಿಗೆ, ಶಿಕ್ಷಣಾಧಿಕಾರಿಗಳಿಗೆ ಕೂಡ ಮನವಿಯನ್ನು ನೀಡಲಾಯಿತು.

 ರಾಷ್ಟ್ರಧ್ವಜವು ರಾಷ್ಟ್ರದ ಗೌರವವಾಗಿದೆ! ಆದರೆ ದುರ್ದೈವದಿಂದ ಹೆಚ್ಚಿನ ಭಾರತೀಯರಿಗೆ ಇದರ ನೆನಪು ಕೇವಲ 15 ಅಗಸ್ಟ ಮತ್ತು 26 ಜನೆವರಿಯಂದು ಮಾತ್ರ ಆಗುತ್ತದೆ. ಈ ದಿನದಂದು ರಾಷ್ಟ್ರಧ್ವಜವನ್ನು ಅತ್ಯಂತ ಗೌರವದಿಂದ ಹಾರಿಸಲಾಗುತ್ತದೆ ! ಆದರೆ ಇದೇ ಕಾಗದದಿಂದ / ಪ್ಲಾಸ್ಟಿಕನಿಂದ ತಯಾರಿಸಿದ ರಾಷ್ಟ್ರಧ್ವಜವು ಸಂಜೆಯಾಗುತ್ತಿದ್ದಂತೆ ರಸ್ತೆಯ ಮೇಲೆ, ಕಸದ ಬುಟ್ಟಿಯಲ್ಲಿ, ಚರಂಡಿಯಲ್ಲಿ ಇತ್ಯಾದಿ ಸ್ಥಳದಲ್ಲಿ ಬಿದ್ದಿರುವುದನ್ನು ಕಾಣುತ್ತೇವೆ. ಪ್ಲಾಸ್ಟಿಕನಿಂದ ತಯಾರಾದ ರಾಷ್ಟ್ರಧ್ವಜವಂತೂ ನಾಶವೂ ಆಗುವುದಿಲ್ಲ, ಇದರಿಂದ ಹಲವು ದಿನಗಳವರೆಗೆ  ನಮಗೆ ಆ ರಾಷ್ಟ್ರಧ್ವಜದ ಅಗೌರವವನ್ನು ನೋಡಬೇಕಾಗುತ್ತದೆ. ರಾಷ್ಟ್ರಧ್ವಜದ ಈ ರೀತಿಯಲ್ಲಾಗುವ ಅಗೌರವವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮುಂಬೈ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆಯನ್ನು(ದಾವೆ ಸಂ. 103/2011) ಹೂಡಲಾಗಿದೆ. ಇದರ ಬಗ್ಗೆ ಆಲಿಕೆಯನ್ನು ಮಾಡುತ್ತ ನ್ಯಾಯಾಲಯವು ಪ್ಲಾಸ್ಟಿಕನ ರಾಷ್ಟ್ರಧ್ವಜದ ಅಗೌರವವನ್ನು ತಡಗಟ್ಟಲು ಸರ್ಕಾರಕ್ಕೆ ಆದೇಶವನ್ನು ಕೊಡಲಾಗಿತ್ತು ಅದಕ್ಕನುಸಾರ ಕೇಂದ್ರೀಯ ಮತ್ತು ರಾಜ್ಯದ ಗೃಹ ವಿಭಾಗ ಮತ್ತು ಶಿಕ್ಷಣ ವಿಭಾಗದ ಮೂಲಕ ಈ ವಿಷಯ ಕುರಿತು ಒಂದು ಸುತ್ತೋಲೆಯನ್ನು ಹೊರಡಿಸಿದೆ. ಇತ್ತೀಚಿನ ದಿನದಲ್ಲಿ ಸರ್ಕಾರವು `ಪ್ಲಾಸ್ಟಿಕ ನಿರ್ಬಂಧ’ದ ನಿರ್ಣಯವನ್ನೂ ತೆಗೆದುಕೊಂಡಿದೆ. ಇದರ ಪ್ರಕಾರ ಪ್ಲಾಸ್ಟಿಕನ ರಾಷ್ಟ್ರಧ್ವಜದ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಉಚ್ಚ ನ್ಯಾಯಾಲಯವು ವಿಶೇಷವಾಗಿ ಸರ್ಕಾರಕ್ಕೆ ಆದೇಶವನ್ನು ಕೊಡುವುದರ ಮೂಲಕ ಸರ್ಕಾರವು ರಾಷ್ಟ್ರಧ್ವಜದ ಅವಮಾನವನ್ನು ತಡೆಯಲು ರಾಷ್ಟ್ರಧ್ವಜ ಗೌರವ ಕಾಪಾಡಲು ಕೃತಿ ಸಮಿತಿಗಳನ್ನು, ಸ್ಥಳಿಯ ಸ್ವಯಂಸೇವಾ ಸಂಸ್ಥೆಗಳನ್ನು ಸೇರಿಸಿ ಮಾಡಬೇಕು ಈ ಉಪಕ್ರಮದ ಅಂತರ್ಗತದಲ್ಲಿ ಪ್ಲಾಸ್ಟಿಕನ ರಾಷ್ಟ್ರಧ್ವಜದ ಮಾಧ್ಯಮದಿಂದ ಆಗುವಂತಹ ಅಗೌರವವನ್ನು ತಡೆಗಟ್ಟಲು ವಿವಿಧ ಮಾಧ್ಯಮದಿಂದ ಜಾಗೃತಿಯನ್ನು ಮಾಡುವುದು ಅನಿವಾರ್ಯವಾಗಿದೆ. ಉದಾ : ಜಾಹಿರಾತು, ಫಲಕಗಳು, ಕರಪತ್ರಗಳು ಇತ್ಯಾದಿಗಳಿಂದ ಜಾಗೃತಿ ಮೂಡಿಸುವುದು. ಇದರ ಅಂತರ್ಗತದಲ್ಲಿ ವಿದ್ಯಾಲಯಗಳಲ್ಲಿ ವ್ಯಾಖ್ಯಾನ ಮಾಡುವುದು, ಪ್ರಶ್ನಾವಳಿಯ ಸ್ಪರ್ಧೆಯನ್ನು ತೆಗೆದುಕೊಳ್ಳುವುದು, ಕರಪತ್ರವನ್ನು ಹಂಚುವುದು, ಪೋಸ್ಟರ-ಹೋರ್ಡಿಂಗ್ಸ್ ಹಾಕುವುದು, ಸ್ಥಲೀಯ ಕೇಬಲ್ ವಾಹಿನಿಯಲ್ಲಿ ಸೀಡಿ ತೋರಿಸುವುದು, ರಸ್ತೆಯಲ್ಲಿ ಬಿದ್ದಿರುವ ರಾಷ್ಟ್ರಧ್ವಜವನ್ನು ಒಟ್ಟು ಮಾಡುವುದು, ಸಾಮಾಜಿಕ ಸಂಕೇತಸ್ಥಳಗಳ ಮೂಲಕ ಪ್ರಚಾರ ಮಾಡುವುದು ಇತ್ಯಾದಿ ಕಾರ್ಯಗಳನ್ನು ಮಾಡಲಾಗುತ್ತದೆ.

- ಶ್ರೀ ಚಂದ್ರ ಮೊಗೇರ್

ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕರು

ದಕ್ಷಿಣ ಕನ್ನಡ ಜಿಲ್ಲೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter