Published On: Tue, Aug 13th, 2019

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆ ಸಸ್ಯಸಂರಕ್ಷಣಾ ಪದ್ದತಿಗಳ ತರಬೇತಿ

ಬಂಟ್ವಾಳ : ಮಣ್ಣು ಸಮೃದ್ದವಾದ ಪೋಷಕಾಂಶಗಳಿಂದ ಕೂಡಿರುತ್ತದೆ. ಅದಕ್ಕೆ ನೆಸರ್ಗಿಕವಾಗಿ ಇರುವಂತಹ ಸೊಪ್ಪುಸದೆಗಳಿಂದ ಸಿಕ್ಕಿದ ವಸ್ತುಗಳಿಂದ ಪೋಷಕಾಂಶ ದೊರೆಯುತ್ತದೆ. ಅಂತಹ ಮಣ್ಣಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸುವ ಮೂಲಕ ಮಣ್ಣನ್ನು ಪೋಷಕಾಂಶ ರಹಿತವಾಗಿ ಮಾಡಲಾಗದು ಎಂದು ಶಂಭೂರು ಗ್ರಾಮದ ಪೂರ್ಣ ಸಾವಯವ ಕೃಷಿಕ ಕಮಲಾಕ್ಷ ಶಂಭೂರು ಹೇಳಿದರು.Copy of 1308btrbph7A

ಅವರು ಆ. 13ರಂದು ತನ್ನ ಸಾವಯವ ತೋಟದಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ ಆಶ್ರಯದಲ್ಲಿ ನಡೆದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆ ಸಸ್ಯಸಂರಕ್ಷಣಾ ಪದ್ದತಿಗಳ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು.ಕೇಂದ್ರ ಸರಕಾರವು ರಾಷ್ಟ್ರವ್ತಾಪ್ತಿ ವಿಸ್ತಾರದ ಸಾವಯವ ಕೃಷಿ ಆಧಾರಿತ ಸಹಕಾರಿ ಸಂಸ್ಥೆಯನ್ನು ಆರಂಭಿಸಿದೆ. ಈಗಾಗಲೇ ತೀರ್ಥಹಳ್ಳಿಯಲ್ಲಿ ಅದರ ಮೊದಲ ಸಭೆ ನಡೆದಿದೆ. ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಯುವುದು. ಎಲ್ಲರೂ ಸದಸ್ಯರಾಗುವ ಮೂಲಕ ಹಾಗೂ ಸಂಪೂರ್ಣ ಸಾವಯವ ಕೃಷಿ ಮಾಡುವ ಮೂಲಕ ದೇಶದ ಆರೋಗ್ಯ ಹೆಚ್ಚಿಸಬೇಕು ಎಂದು ಕರೆ ನೀಡಿದರು.1308btrbph7

ಬ್ರಹ್ಮಾವರ ಕೃಷಿ ಸಂಶೋಧಕಿ ಮಧುರಿಮ ಮಾತನಾಡಿ ರೈತರು ಕೀಟ ನಾಶಕವನ್ನು ನೈಸರ್ಗಿಕವಾಗಿ ಬಳಸುವ ವಿಧಾನ ಅತ್ಯಂತ ಕಡಿಮೆ ಖರ್ಚಿನದ್ದು ಎಂದರು.ನೀರು, ದೇಶಿ ಹಸುವಿನ ಸೆಗಣಿ, ಗೋಮೂತ್ರ, ಬೇವಿನ ಎಲೆಯಿಂದ ನೀಮಾಸ್ತ್ರವನ್ನು, ತಂಬಾಕು, ಮೆಣಸಿನ ಕಾಯಿ, ಜವಾರಿ ಬೆಳ್ಳುಳ್ಳಿ, ಬೇವಿನ ಎಲೆ , ದೇಶಿ ಗೋವಿನ ಮೂತ್ರ ಬಳಸಿ ಅಗ್ನಿ ಅಸ್ತ್ರವನ್ನು, ಬೇವಿನ ಎಲೆ, ಹೊಂಗೆ, ಹಾಗಲ , ಸೀತಾಫಲ, ಲಕ್ಕಿ , ಲಂಟಾನ, ಔಡಲ, ದತ್ತೂರಿ, ಪೇರಲ, ದಾಳಿಂಬೆ, ಪಾರ್ಥೇನಿಯಂ, ದೇಶಿ ಹಸುವಿನ ಗಂಬಲ ಬಳಸಿ ಮಾಡುವ ಬ್ರಹ್ಮಾಸ್ತ್ರ ಕೀಟನಾಶಕದ ಬಗ್ಗೆ ವಿವರಣೆ ನೀಡಿದರು.

ಬ್ರಹ್ಮಾವರ ಕೃಷಿ ಸಂಶೋಧಕಿ ಬಸಮ್ಮ ಮಾತನಾಡಿ ದೇಶಿಯ ಹಾಲು, ಕರಿಮೆಣಸು ಪುಡಿಯಿಂದ ಕರಿಮೆಣಸು ಅಸ್ತ್ರ, ಶುಂಠಿಪುಡಿ, ದೇಶಿಹಸುವಿನ ಹಾಲು ಬಳಸಿ ಶುಂಠಿ ಅಸ್ತ್ರವನ್ನು, ಸೀತಾಫಲದ ಎಲೆ, ಹಸುವಿನ ಗಂಜಲ, ನುಗ್ಗೆ ಎಲೆ, ಸೀತಾಫಲ ಶಿಲೀಂದ್ರ ನಾಶಕ ತಯಾರಿ ಬಗ್ಗೆ ಮಾಹಿತಿ ನೀಡಿದರು.ಇನ್ನೊಬ್ಬ ಸಂಶೋಧಕ ಸುನಿಲ್ ಮಾತನಾಡಿ ಬೇವಿನ ಎಲೆ, ದೇಶಿ ಹಸುವಿನ ಹಾಲು, ಸೆಗಣಿ ಬಳಸಿ ಬೇವು ಅಧಾರಿತ ಶಿಲೀಂದ್ರ ನಾಶಕ ಪೇಸ್ಟ್ ತಯಾರಿ ಬಗ್ಗೆ ವಿವರ ನೀಡಿದರು. ಅದರ ಪ್ರಾತ್ಯಕ್ಷಿಕೆ ನೀಡಿ ಭವಿಷ್ಯದಲ್ಲಿ ಸಾವಯವ ಕೃಷಿಕರ ಕೂಟವನ್ನು ರಚಿಸಿಕೊಂಡು ಕೃಷಿ ಮಾಡುವುದು ಹೆಚ್ಚು ಆರೋಗ್ಯಕರ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟ ತೆಂಗು ಉತ್ಪಾದಕರ ಸೌಹಾರ್ಧ ಸಹಕಾರಿ ನಿ. ಅಧ್ಯಕ್ಷ ರಾಜಾ ಬಂಟ್ವಾಳ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಪುರುಷೋತ್ತಮ ಸಾಲ್ಯಾನ್ ದಿಂಡಿಕೆರೆ, ನರಿಕೊಂಬು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪ್ರೇಮನಾಥ ಶೆಟ್ಟಿ ಅಂತರ, ತಾ.ಪಂ. ಮಾಜಿ ಉಪಾಧ್ಯಕ್ಷ ಆನಂದ ಎ.ಶಂಭೂರು , ಪ್ರಗತಿಪರ ಕೃಷಿಕರಾ ಕೃಷ್ಣಪ್ಪ ಸಪಲ್ಯ ಅಂತರ, ದರ್ಣಪ್ಪ ಕುಲಾಲ್ ಅಂತರ, ನಾರಾಯಣ ಪೂಜಾರಿ ಕೇದಿಗೆ, ಪಾಣೆಮಂಗಳೂರು ಕೃಷಿ ಅ„ಕಾರಿ ಕೊರಗಪ್ಪ, ತೋಟಗಾರಿಕಾ ಅ„ಕಾರಿ ರೆಹನಾ ಮತ್ತು ಇತರರು ಉಪಸ್ಥಿತರಿದ್ದರು.ಕೃಷಿ ಸಿಆರ್‍ಪಿ ಚಂದ್ರಶೇಖರ ಕಣ್ಯಾಣಾಗ್ರಹಾರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter