Published On: Thu, Jul 18th, 2019

ಪರಿಸರವಾದಿ ಕಾಡುದೇವಂಡಹಳ್ಳಿ ಮುನಿವೆಂಕಟಪ್ಪನವರಿಗೆ ಗದ್ದುಗೆ ಗೌರವ, ಸಾಲು ಮರ ತಿಮ್ಮಕ್ಕನ ಜೀವನ ಕುರಿತು ನಾಟಕ

ಕೋಲಾರ: ಗುರು ಪೂರ್ಣಿಮೆಯ ಅಂಗವಾಗಿ ಪರಿಸರವಾದಿ ಕಾಡುದೇವಂಡಹಳ್ಳಿ ಮುನಿವೆಂಕಟಪ್ಪನವರಿಗೆ ಗದ್ದುಗೆ ಗೌರವ, ಸಾಲು ಮರ ತಿಮ್ಮಕ್ಕನ ಜೀವನ ಕುರಿತು ನಾಟಕವು ಆದಿಮದಲ್ಲಿ ಅದ್ದೂರಿಯಾಗಿ ಪ್ರದರ್ಶಿಸಲ್ಪಟ್ಟಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟಿ.ಕೆ.ನೆಟರಾಜ್ ಮಾತನಾಡಿ ನಾಟಕ ಇರುವುದರಿಂದ ನಾಟಕವೇ ಮುಖ್ಯ. ಭಾಷಣಗಳಲ್ಲ.ನಾಟಕ ನಡೆಸಿಕೊಡುತ್ತಿರುವ `ಥಿಯೇಟರ್ ಥೆರಪಿ’ ತಂಡದ ಹಸರೇ ಅರ್ಥಪೂರ್ಣ. ಲಿಯೋ ಟಾಲ್ಸ್‍ಟಾಯ್ `ದಿ ಆರ್ಟ್’ ಎಂಬ ಕೃತಿಯಲ್ಲಿ ಕಲೆ ಮತ್ತದರ ಜವಾಬ್ಧಾರಿ ಬಗ್ಗೆ ಬಹಳ ಚೆನ್ನಾಗಿ ವಿವರಿಸಿದ್ದಾರೆ. ನಾಟಕ, ಕಲೆ, ಸಾಹಿತ್ಯ ಮಾನವನಿಗೆ ಚಿಕಿತ್ಸಕ ರೂಪದಲ್ಲೇ ಇವೆ. ಮರಗಳಿಗೂ ಜೀವ ಇದೆ, ಭಾವನೆಗಳಿವೆ ಎಂದು ವೈಜ್ಞಾನಿಕವಾಗಿ ಹೇಳಲ್ಪಟ್ಟಿದೆ. ಜಾಗತಿಕ ತಾಪಮಾನದ ಪರಿಣಾಮದಿಂದ ಹವಾಮಾನ ವೈಪರಿತ್ಯಗಳು ಸಂಭವಿಸುತ್ತಿವೆ. ವೈಜ್ಞಾನಿಕವಾಗಿ ಮುಂದುವರೆದಷ್ಟೂ ಸವಾಲುಗಳು ಬೆನ್ನಟ್ಟಿ ಬರುತ್ತಿವೆ. ಆದ್ದರಿಂದ ಪರಿಸರವನ್ನು ಕಾಪಾಡಿಕೊಳ್ಳುವ ಜವಾಬ್ಧಾರಿ ನಮ್ಮೆಲರ ಮೇಲೆ ಇದೆ. ಮನುಷ್ಯನ ಆಸೆ, ದುರಾಸೆಗಳತ್ತ ಸಾಗಿ ಪರಿಸರ ರಕ್ಷಣೆಯಲ್ಲಿ ನಿರ್ಲಕ್ಷ್ಯ ಸರಿಯಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರರ ಪ್ರಕಾರ ವಿಚಾರ ಮಾಡದ ಹೊರತು ಮತಾಂಧರಾಗಿ, ಮೂರ್ಖರಾಗಿ, ಗುಲಾಮರಾಗಿ ಬದುಕಬೇಕಾಗುತ್ತದೆ ಎಂದರು. ವಿಜ್ಞಾನದ ಲೇಖಕ ಪುರುಷೋತ್ತಮ ರಾವ್ ಪರಿಸರ ಎಂದರೆ ನಮ್ಮ ಸುತ್ತಮುತ್ತಲಿನ ಬದುಕೇ ಆಗಿದೆ. ಕಾಡುದೇವಂಡಹಳ್ಳಿ ಮುನಿವೆಂಕಟಪ್ಪನ ಪರಿಸರ ಪ್ರಜ್ಞೆ ಮತ್ತು ಕಾಳಜಿ ಕುರಿತು ಹೇಳಿದರು. ಸಾಲು ಮರದ ತಿಮ್ಮಕ್ಕನಂತೆ ಮುನಿವೆಂಕಟಪ್ಪನೂ ಪರಿಸರ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಗಿಡ ನೆಟ್ಟರೆ ಸಾಲದು ಪೋಷಿಸಿ ಬೆಳಸಬೇಕು ಎಂದರು.hunime hadu (2)

ನಾಟಕ `ಸಾಲು ಮರದ ತಾಯಿ ತಿಮ್ಮಕ್ಕ’ ಎರಡನೇ ಪ್ರದರ್ಶನವಾಗಿ ಆದಿಮದಲ್ಲಿ ಥಿಯೇಟರ್ ಥೆರಪಿ, ಬೆಂಗಳೂರು ತಂಡ ಪ್ರಸ್ತುತ ಪಡಿಸಿತು. ಸಾಲು ಮರದ ತಿಮ್ಮಕ್ಕನ ಬದುಕು, ಬವಣೆಗಳ ಬಗ್ಗೆ ನೈಜವಾಗಿ ಹೆಣದಿರುವ ನಾಟಕದಲ್ಲಿ ಸರಿ ಸುಮಾರು ಎಲ್ಲಾ ಪಾತ್ರಗಳು ಸುಮಾರು ನೂರು ವರ್ಷಕ್ಕೂ ಹಿಂದಿನ ಕಾಲಘಟ್ಟದವು. ಇಂದಿನ ಆಧುನಿಕ ಹವ್ಯಾಸಿ ಕಲಾವಿದರು ಅಭಿನಯಿಸಿದ ಪಾತ್ರಗಳಲ್ಲಿ ಅಭಿನಯ ಕೊರತೆ ಇರಲಿಲ್ಲ. ನಾಟಕಕಾರರೇ ನಿರೂಪಕರಾಗಿ ಗಮನ ಸೆಳೆದಿದ್ದರು. ನಿರ್ದೇಶನ ಮತ್ತು ನಾಟಕದ ಸಂಬಾಷಣೆ ಹಳ್ಳಿಯ ಹಟ್ಟಿ ಸಂಸ್ಕøತಿಯ ಜನಪದ ಗತ್ತು ಗಮ್ಮತ್ತು ಸ್ತ್ರೀ, ಪುರುಷ ಪಾತ್ರಗಳಲ್ಲಿ ತುಂಬಿಕೊಂಡಿತ್ತು.hunime hadu (1)_2

ತಿಮ್ಮಕ್ಕನ ಬಾಲ್ಯಾವಸ್ಥೆಯ ಬಾಲೆ ಪಾತ್ರದ ಕೂಸು ನಿಜಕ್ಕೂ ಪರಿಣಾಮಕಾರಿಯಾಗಿ ನಿರ್ವಹಿಸಿ ನೆರೆದ ಪ್ರೇಕ್ಷಕರ ಗಮನಸೆಳೆದಳು. ಎರಡು ಗಂಟೆಗಳ ಕಾಲ ನೆಡೆದ ನಾಟಕದಲ್ಲಿ ಗುಬ್ಬಿ ತಾಲ್ಲೂಕಿನ ಹೊಸೂರಲ್ಲಿ ಹುಟ್ಟಿದ ತಿಮ್ಮಕ್ಕ ಬಾಲ್ಯದಲ್ಲಿ ಶಾಲೆಗೆ ಹೋಗುವ ಕನಸು ಕಂಡವಳು. ತನ್ನ ತಾಯಿ ಪೋರು ತಾಳಲಾರದೆ ಜೀತಕ್ಕೆ ಸೇರಿದಳು. ತಂದೆಯ ಕರುಣೆಯ ಕರುಳು ತಿಮ್ಮಕ್ಕನನ್ನು ಆರೈಕೆ ಮಾಡಿತು. ಅಪ್ಪನ ಮುದ್ದು ಮಗಳಾದ ತಿಮ್ಮಕ್ಕ ರಾಮನಗರ ಜಿಲ್ಲೆಯ ಹುಲಿಕಲ್‍ಗೆ ಸೊಸೆಯಾಗಿ ಹೋದಳು. ಅಲ್ಲಿ ಅತ್ತೆಯ ಪೋರು ಅನುಭವಿಸಬೇಕಾಗಿ ಬಂತು. ಸಂತಾನವಿಲ್ಲದೆ ಬಂಜೆತನದ ನಿಂದೆ ಬಿತ್ತು. ಏನೆಲ್ಲಾ ಕಷ್ಟ ಕಾರ್ಪಣ್ಯಗಳು, ಕಷ್ಟ ಕೋಟಲೆಗಳ ಎದುರಿಸಿ ಬದುಕಲು ಪತಿ ಬಿಕ್ಕಲು ಚಿಕ್ಕಯ್ಯ ತಿಮ್ಮಕ್ಕನಿಗೆ ಅಕ್ಕರೆಯ ಸಕ್ಕರೆ ಉಣಿಸಿದ ಪ್ರೀತಿಯ ಪತಿರಾಯನಾಗಿ ಬೆಳಗಿದ. ಮೂರು ಆಲದ ಗಿಡಗಳನ್ನು ಸತಿ-ಪತಿ ನೆಟ್ಟರು. ಅವುಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ಕರೆದುಕೊಂಡರು. ಅಲ್ಲಿಂದ ಸಾಲು ಮರಗಳು ಬೆಳೆಸುವ ಪರಿಸರ ತಾಯಿಯಾಗಿ ಬೆಳಕಿಗೆ ಬಂದಳು.hunime hadu (3)_2

ಕೇಂದ್ರ ಸರ್ಕಾರದಿಂದ `ನ್ಯಾಷನಲ್ ಸಿಟಿಜನ್ ಅವಾರ್ಡ್’ ಸಂದಿತು. ಪೇಪರ್, ಟಿ.ವಿ ಮಾಧ್ಯಮಗಳು ತಿಮ್ಮಕ್ಕನ ಪರಿಸರ ಕಾಳಜಿಯನ್ನು ಪ್ರಚುರಪಡಿಸಿದವು. ಸಂದರ್ಶನಕ್ಕಾಗಿ ಬಂದ ಉಮೇಶ್ ತಿಮ್ಮಕ್ಕನ ಪ್ರೀತಿ ಗಳಿಸಿದ ಮಗನಾಗಿದ್ದಾನೆ. ಈವರೆಗೂ ತಿಮ್ಮಕ್ಕನವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ಆದರೆ, ಪದ್ಮಶ್ರೀ ಪ್ರಶಸ್ತಿ ಬಂದಾಗ ತಿಮ್ಮಕ್ಕ `ಹಳ್ಳಿಗೆ ಹೆರಿಗೆ ಆಸ್ಪತ್ರೆ’ ಮಾಡಿಸಿ ಕೊಡಿ ಎನ್ನುವ ಮೂಲಕ ಸಾಮಾಜಿಕ ಸ್ತ್ರೀ ಕಳಕಳಿ ತೋರಿಸಿರುವ ಸಾವಿರದ ಸಾಲು ಮರ ತಿಮ್ಮಕ್ಕ ತಾಯಿ ಮಮಕಾರ ಹಂಚಿಕೊಂಡಿದ್ದಾಳೆ. ಡಿ.ಆರ್.ರಾಜಪ್ಪ ರಾಗ ಸಂಯೋಜನೆ, ಗಾಯನ, ಶೋಕ ಸನ್ನಿವೇಶಗಳ ಆಲಾಪಗಳು ಸಂದರ್ಭಕ್ಕೆ ತಕ್ಕಂತೆ ಬಳಕೆ ಆಗಿ ನಾಟಕಕ್ಕೆ ಇಂಬು ತಂದು ಕೊಟ್ಟಿತ್ತು. ರಚನೆ; ಬೇಲೂರ್ ರಘುನಂದನ್, ನಿರ್ದೇಶನ ರಾಮಕೃಷ್ಣ ಬೆಳ್ತೂರ್, ಸಂಗೀತ; ಡಿ.ಆರ್.ರಾಜಪ್ಪ ನಿರ್ವಹಿಸಿದ್ದರು. ಜೆ.ಜಿ.ನಾಗರಾಜ್ ನಿರೂಪಿಸಿ, ವಂದಿಸಿದರು ಯಡೆಹಳ್ಳಿ ಶ್ರೀನಿವಾಸ್ ಸ್ವಾಗತಿಸಿದರು. ಆದಿಮ ಪರಿಸರವಾದಿ ಮುನಿವೆಂಕಟಪ್ಪನಿಗೆ ಗದ್ದುಗೆ ಗೌರವ ಸಲ್ಲಿಸಿತು. ಎಲ್ಲಾ ಮುಖ್ಯಸ್ಥರು ಭಾಗವಹಿಸಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter