Published On: Thu, Jul 18th, 2019

ಕೋಲಾರ ರೈತರು ಕೊಂಡುಕೊಳ್ಳುವ ಸಸಿಗಳಿಗೆ ಕಡ್ಡಾಯವಾಗಿ ರಸೀದಿ ನೀಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಮೌನ ಹೋರಾಟ ಮಾಡಿ ಉಪ ನಿರ್ದೇಶಕರಿಗೆ ಮನವಿ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಪರವಾನಗಿ ಇಲ್ಲದ ನರ್ಸರಿಗಳು ವಿರುದ್ದ ಕ್ರಮ ಕೈಗೊಂಡು ಕಡ್ಡಾಯವಾಗಿ ರೈತರು ಕೊಂಡುಕೊಳ್ಳುವ ಸಸಿಗಳಿಗೆ ಕಡ್ಡಾಯವಾಗಿ ರಸೀದಿ ನೀಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ತೋಟಗಾರಿಕೆ ಇಲಾಖೆಯ ಮುಂದೆ ಮೌನ ಹೋರಾಟ ಮಾಡಿ ಉಪ ನಿರ್ದೇಶಕರಿಗೆ ಮನವಿ ನೀಡಿ ಅಗ್ರಹಿಸಲಾಯಿತು.raitha sangha thotagarike narsari news 18-07-2019 (6)

ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಒಂದು ಕಡೆ ಬೀಕರವಾದ ಬರಗಾಲ ಮತ್ತೊಂದುಕಡೆ ಸಾಲ ಮಾಡಿ ಕೊಳವೆ ಭಾವಿ ಕೊರೆಸಿ ಬೆಳೇದ ಬೆಳೆ ನಕಲಿ ಬಿತ್ತನೆ ಬೀಜದ ಹಾವಳಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಕಂಗಲಾಗುತ್ತಿದ್ದಾರೆ. ನೆಪ ಮಾತ್ರಕ್ಕೆ ಸಾವಿರಕ್ಕೆ ಒಬ್ಬ ರೈತರ ತೋಟದಲ್ಲಿ ಕಂಪನಿಗಳು ಹಾಗೂ ಏಜೆಂಟ್‍ಗಳು ಜನರನ್ನು ಯಾಮಾರಿಸಲು ಬೆಳೆ ಕ್ಷೇತ್ರೋತ್ಸವ ಮಾಡಿ ಸಾವಿರಾರು ಜನ ರೈತರನ್ನು ಯಾಮಾರಿಸುತ್ತಿದ್ದಾರೆ. ಇನ್ನೂ ಬೆಳೆ ನಾಶವಾದಾಗ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ವಾತಾವರಣದ ನೆಪ ಹೇಳಿ ಕಂಪನಿಗಳ ಪರ ನಿಲ್ಲುತ್ತಾರೆ. ಹಾಗೂ ಲಕ್ಷಾಂತರ ಬಂಡವಾಳ ಹಾಕಿ ಬೆಳೆ ಕಳೆದು ಕೊಂಡ ರೈತ ಸಾಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಾಗೂ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳು ನೂರಾರು ಬ್ರಾಂಡ್‍ಗಳ ಹೆಸರಿನಲ್ಲಿ ರೈತರನ್ನು ಯಾಮಾರಿಸಿ ಅವರ ಜೊತೆಗೆ ನರ್ಸರಿ ಮಾಲೀಕರು ಕಂಪನಿಗಳ ತಾಳಕ್ಕೆ ತಕ್ಕಂತೆ ಕುಣಿದು ರೈತರ ಮರಣ ಶಾಸನ ಬರೆಯುತ್ತಿದ್ದಾರೆ. ಇಷ್ಟೇಲ್ಲಾ ಅವ್ಯವಸ್ಥೆ ಇದ್ದರೂ ಯಾವುದೇ ಅಧಿಕಾರಿಯೂ ಸಂಬಂಧಪಟ್ಟ ಕಂಪನಿಗಳ ಸಭೆ ಕರೆಯದ ಜೊತೆಗೆ ಎಷ್ಟು ಕಂಪನಿಗಳಿವೆ ಎಷ್ಟು ನರ್ಸರಿಗಳಿವೆಂದು ಅಧಿಕಾರಿಗಳಿಗೆ ಮಾಹಿತಿಯಿಲ್ಲದ ಇಲಾಖೆಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.raitha sangha thotagarike narsari news 18-07-2019

ಮಹಿಳಾ ಜಿಲ್ಲಾದ್ಯಕ್ಷೆ ಎ,ನಳಿನಿ ಮಾತನಾಡಿ ವ್ಯವಸಾಯ ನೀ ಸಾಯ ಎಂಬ ಗಾದೆಯಂತೆ ಜಿಲ್ಲೆಯಲ್ಲಿ ಕೃಷಿ ತೋಟಗಾರಿಕೆ, ರೇಷ್ಮೇ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಗಳು ರೈತರ ಪಾಲಿಗೆ ಇಲ್ಲದಂತಾಗಿವೆ. ಜೊತೆಗೆ ಜಿಲ್ಲಾದ್ಯಂತ ನರ್ಸರಿಗಳು ಮತ್ತು ಬೀಜ , ಕೀಟ ನಾಶಕ ಕಂಪನಿಗಳು ಪರವಾನಗಿ ಮತ್ತು ನವೀಕರಿಸಿಕೊಂಡು ಕೃಷಿ ಇಲಾಖೆಯಲ್ಲಿ ನೊಂದಣಿ ಮಾಡಿಸುವಂತೆ ಜಿಲ್ಲಾಧಿಕಾರಿಗಳು ಕಡ್ಡಾಯಗೊಳಿಸಿ ವರ್ಷಗಳೂ ಕಳೇದರೂ ಇದುವರೆಗೂ ನೊಂದಣಿ ಮಾಡಿಸಿಕೊಳ್ಳುತ್ತಿಲ್ಲ. ಜಿಲ್ಲಾದ್ಯಂತ ಮಾರಾಟವಾಗುವ ಎಲ್ಲಾ ಬಿತ್ತನೆ ಬೀಜ ಕಂಪನಿಗಳು ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಕಡ್ಡಾಯವಾಗಿ ನೊಂದಣಿ ಮಾಡಿಸಿಕೊಳ್ಳಬೇಕೆಂದು ಆದೇಶಿಸಬೇಕು. ಜಿಲ್ಲಾದ್ಯಂತ ಸುಮಾರು ನೂರಾರು ನರ್ಸರಿಗಳಿದ್ದು, ಈ ನರ್ಸರಿಗಳಲ್ಲಿ ರೈತರು ತಂದ ಸಸಿಗಳಲ್ಲಿ ಬಿತ್ತನೆ ಬೀಜದ ರಶೀದಿ ಅಥವಾ ಸಸಿಗಳ ರಶೀಧಿ ಶೇ. 90ರಷ್ಟು ನೀಡುವುದಿಲ್ಲ. ರೈತನ ಬೆಳೆ ಹಾಳಾದಾಗ ಯಾರು ಜವಾಬ್ದಾರಿ ಹೊರಲು ಸಿದ್ದವಿಲ್ಲ.

raitha sangha thotagarike narsari news 18-07-2019 (4)ಸಸಿಕೊಂಡ ಪ್ರತಿ ರೈತನಿಗೂ ನರ್ಸರಿಯ ಹೆಸರು ಬೀಜದ ಲಾಟ್ ನಂ. ಕಂಪನಿಯ ಹೆಸರು ಉತ್ಪಾಧನೆಯ ದಿನಾಂಕ, ಅವಧಿ ಮುಗಿದ ದಿನಾಂಕದ ಸಂಪೂರ್ಣ ವಿವರದ ರಶೀದಿಯನ್ನು ರೈತರಿಗೆ ನೀಡದಿದ್ದಲ್ಲಿ ಆ ನರ್ಸರಿಯ ವಿರುದ್ದ ರೈತನ ಬೆಳೆ ನಷ್ಟವಾದಾಗ ನಷ್ಟವನ್ನು ನರ್ಸರಿ ಮಾಲೀಕ ಹಾಗೂ ಬೀಜ ಕಂಪನಿಯ ಮಾಲೀಕರು ನಷ್ಟ ತುಂಬಿಕೊಡಬೇಕು. ಇಲ್ಲವೇ ಅವರ ವಿರುದ್ದ ಕ್ರಿಮಿನಲ್ ಮೊಖದ್ದೊಮ್ಮೆ ಧಾಖಲಿಸಬೇಕು. ಈ ವಿಚಾರದಲ್ಲಿ ಮೀನಾಮೇಶವೆಣಿಸದೆ ಒಂದು ತಿಂಗಳು ಗಡವು ಕೊಟ್ಟು ನೊಂದಣಿ ಮಾಡಿಸಿಕೊಳ್ಳದ ನರ್ಸರಿಗಳು ಹಾಗೂ ಬೀಜ ಮತ್ತು ಕೀಟನಾಶಕ ಕಂಪನಿಗಳ ವಿರುದ್ದ ಪ್ರಕರಣ ದಾಖಲಿಸಿ ಆ ನರ್ಸರಿ ಕಂಪನಿಗಳನ್ನು ಮುಚ್ಚಿಸಬೇಕು. ರೈತರಿಗೆ ಯಾವುದೆ ರೀತಿಯ ಬೆಳೆ ನಷ್ಟವಾದರು ಸಮರ್ಪಕವಾಗಿ ಸಂಬಂಧಪಟ್ಟವರಿಂದ ಪರಿಹಾರ ಸಿಗುವಂತೆ ವ್ಯವಸ್ತೆ ಮಾಡಿ ಬೀಜಕಂಪನಿಗಳ ಮತ್ತು ನರ್ಸರಿಗಳಿಂದ ರೈತರು ನಷ್ಟಹೊಂದದ ರೀತಿ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ನಿರ್ದೇಶಕರಾದ ಗಾಯಿತ್ರಿರವರು ಮಾತನಾಡಿ ಈ ನಿಮ್ಮ ಮನವಿಯ ಬಗ್ಗೆ ಚರ್ಚೆ ಮಾಡುತ್ತೇನೆ. ನಾನು ಅಧಿಕಾರ ವಹಿಸಿಕೊಂಡು ಕೇವಲ 3 ದಿವಸಗಳಾಗಿವೆ ಆದಕ್ಕಾಗಿ 3-4 ದಿನಗಳ ಕಾಲವಕಾಶ ಕೊಡಿ ನಿಮ್ಮ ಬೇಡಿಕೆಗಳನ್ನು ಈಡೇರಿಸುವೆಂಧು ಭರವಸೆ ನೀಡಿದರು.
ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಈಕಂಬಳ್ಳಿ ಮಂಜುನಾಥ್, ರಂಜಿತ್, ರಾಮಕೃಷ್ಣಪ್ಪ, ಮಾಸ್ತಿ ವೆಂಕಟೇಶ್, ಮಂಗಸಂದ್ರ ವೆಂಕಟೇಶಪ್ಪ, ಮುನಿಯಪ್ಪ, ಚೆನ್ನರಾಯಪ್ಪ, ಸುಪ್ರೀಂಚಲ, ನಾರಾಯಣ್, ಮುಂತಾದವರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter