Published On: Thu, Jul 18th, 2019

ಕಂದಾವರ ಪಿಡಿಒ ರೋಹಿಣಿಗೆ ವರ್ಗಾವಣೆ ; ಅದ್ದೂರಿ ಸನ್ಮಾನ

ಕೈಕಂಬ : ಕಂದಾವರ ಗ್ರಾಮ ಪಂಚಾಯತ್‍ನಲ್ಲಿ ಕಳೆದ ಏಳು ವರ್ಷದಿಂದ ಗ್ರಾಮಾಭಿವೃದ್ಧಿ ಅಧಿಕಾರಿಯಾಗಿ(ಪಿಡಿಒ) ಕರ್ತವ್ಯ ನಿರ್ವಹಿಸಿರುವ ರೋಹಿಣಿಯವರಿಗೆ ಗುರುವಾರ ಕಂದಾವರ ಗ್ರಾಪಂ ಸಭಾಂಗಣದಲ್ಲಿ ಆತ್ಮೀಯ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.ಕಂದಾವರ ಗ್ರಾಪಂ ಅಧ್ಯಕ್ಷ ವಿಜಯಾ ಜಿ ಸುವರ್ಣ ಪ್ರಸ್ತಾವಿಕ ಮಾತನಾಡುತ್ತ, ರೋಹಿಣಿ ಧೈರ್ಯವಂತ ಹಾಗೂ ದಕ್ಷ ಅಧಿಕಾರಿಯಾಗಿದ್ದು, ಗ್ರಾಮದ ಅಭಿವೃದ್ಧಿಗಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅದಕ್ಕೆ ಇಂದಿಲ್ಲಿ ನೆರೆದ ಗ್ರಾಮಸ್ಥರೇ ಸಾಕ್ಷ್ಯಿಯಾಗಿದ್ದಾರೆ. ಕಾನೂನಿನ ಚೌಕಟ್ಟಿನೊಳಗೆ ಕರ್ತವ್ಯ ನಿರ್ವಹಿಸುತ್ತಿದ್ದ ಪಿಡಿಒ, ಬಡವರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದರು ಎಂದು ಅಭಿಮಾನ ವ್ಯಕ್ತಪಡಿಸಿದರು.

gur-july-18-pdo sanmana-1

gur-july-18-u p ibrahim speaking (1)

gur-july-18-rohini speakingಜಿಪಂ ಸದಸ್ಯ ಯು ಪಿ ಇಬ್ರಾಹಿಂ ಮಾತನಾಡುತ್ತ, ಕೆಲವು ವರ್ಷದಿಂದ ಇಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತೊರುವ ರೋಹಿಣಿಯವರು ತಾನು ಬೇರೆಡೆಯಲ್ಲೂ ಸೇವೆ ಸಲ್ಲಿಸುವ ಇಚ್ಛೆ ವ್ಯಕ್ತಪಡಿಸಿರುವಂತೆ, ಈಗ ಅವರಿಗೆ ವರ್ಗವಾಗಿದೆ. ಅವರೊಬ್ಬ ಪ್ರಾಮಾಣಿಕ ಅಧಿಕಾರಿ ಎಂದರು.ಕಂದಾವರದಿಂದ ಬಂಟ್ವಾಳದ ಕೊಲ್ನಾಡು ಗ್ರಾಪಂಗೆ ವರ್ಗಾವಣೆಯಾಗಿರುವ ಪಿಡಿಒಗೆ ಕಂದಾವರ ಗ್ರಾಪಂ ಅಧ್ಯಕ್ಷೆ ವಿಜಯಾ ಜಿ ಸುವರ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳು, ಅಂಗನವಾಡಿ-ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ, ನೀರು ಪೂರೈಕೆ ವಿಭಾಗ, ಪಂಚಾಯತ್-ನಾಡ ಕಚೇರಿ ಸಿಬ್ಬಂದಿ ವರ್ಗ, ಸಾರ್ವಜನಿಕ ಪ್ರತಿನಿಧಿಗಳು ಹೂಗುಚ್ಛ, ಸೀರೆ, ಆಭರಣ ನೀಡಿ, ಶಾಲು ಹೊದಿಸಿ ಗೌರವ ಸಲ್ಲಿಸಿದರು.IMG_20190718_114355

gur-july-18-sabhe-1ಪಂಚಾಯತ್ ಮಾಜಿ ಅಧ್ಯಕ್ಷ ತಿಮ್ಮಪ್ಪ ಗುಜರನ್, ಸದಸ್ಯ ಶಿವಶಂಕರ್ ಪಿಡಿಒ ಕರ್ತವ್ಯ ನಿಷ್ಠೆ ಕುರಿತು ಮಾತನಾಡಿದರು. ಸನ್ಮಾನಕ್ಕುತ್ತರವಾಗಿ ಮಾತನಾಡಿದ ಪಿಡಿಒ ರೋಹಿಣಿ, ಕೆಲವು ವರ್ಷ ಒಂದೇ ಕಡೆಯಲ್ಲಿದ್ದರೆ ಯಾರಾದರೂ ಸಂಶಯ ತಾಳುವುದು ಸಹಜ. ಯಾರಲ್ಲೂ ಅಂತಹ ಸಂಶಯ ಹುಟ್ಟಿಕೊಳ್ಳುವುದು ಬೇಡವೆಂದು ಇಲಾಖೆಗೆ ಮನವಿ ಮಾಡಿಕೊಂಡಂತೆ ನಾನೀಗ ಬೇರೆಡೆಗೆ ವರ್ಗಗೊಳ್ಳುತ್ತಿದ್ದೇನೆ. ಇದುವರೆಗೂ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಿದ್ದೇನೆಂಬ ವಿಶ್ವಾಸ ನನಗಿದೆ. ಕಾನೂನಿನ ಚೌಕಟ್ಟಿನಡಿ ಕೆಲಸ ಮಾಡುವಾಗ ಕೆಲವರಿಗೆ ನೋವಾಗಿರಬಹುದು. ನನ್ನೊಂದಿಗೆ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿವರ್ಗ ಆತ್ಮೀಯವಾಗಿ ನಡೆದುಕೊಂಡಿದೆ ಎಂದರು.

ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ದೇವೇಂದ್ರ, ಕಂದಾವರ ಗ್ರಾಪಂಗೆ ಹೊಸದಾಗಿ ನಿಯುಕ್ತಿಗೊಂಡ ಪ್ರಭಾರ ಪಿಡಿಒ ಜಗದೀಶ, ಪಂಚಾಯತ್ ಸದಸ್ಯರು, ಗ್ರಾಮಸ್ಥರು ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter