Published On: Fri, Jul 5th, 2019

ಮುತ್ತೂರು ಗ್ರಾಮಸಭೆ ಮೆಸ್ಕಾಂ ಬಿ.ಎಸ್.ಎನ್.ಎಲ್.ವಿರುದ್ಧ ಗ್ರಾಮಸ್ಥರ ಅಕ್ರೋಶ

ಕೈಕಂಬ:ಮೆಸ್ಕಾಂ ಮತ್ತು ಬಿ.ಎಸ್.ಎನ್.ಎಲ್ ವಿರುದ್ಧ ಗ್ರಾಮಸ್ಥರು ತೀವ್ರವಾದ ಅಕ್ರೋಶ ವ್ಯಕ್ತಪಡಿಸಿದ ಘಟನೆ ಮುತ್ತೂರು ಗ್ರಾಮಪಂಚಾಯತ್‍ನ ಗ್ರಾಮಸಭೆಯಲ್ಲಿ ನಡೆದಿದೆ.ಕುಳವೂರಿನ ಗೆಂದಡ್ಪು ಸಭಾಭವನದಲ್ಲಿ ನಡೆದ ಪಂಚಾಯತ್‍ನ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಮಾತನಾಡಿದ ಎಡಪದವು ಮೆಸ್ಕಾಂ ಜೆ.ಇ.ಶಿವರಾಮ್ ಅವರನ್ನು ತೀವೃವಾಗಿ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಪದೇ ಪದೇ ವಿದ್ಯುತ್ ಕೈಕೊಡುತ್ತದೆ. ವಿದ್ಯುತ್ ಕಡಿತವಾದಾಗ ವಿಚಾರಿಸಲು ನಿಮಗೆ ಕರೆಮಾಡಿದರೆ ನೀವು ಕರೆ ಸೀಕರಿಸುವುದಿಲ್ಲ.

IMG-20190704-WA0014 (1) ಒಂದು ಸಣ್ಣದಾಗಿ ಮಳೆ ಬಂದರೂ ಸಾಕು ತಕ್ಷಣ ವಿದ್ಯುತ್ ಹೋಗುತ್ತದೆ. ಗೆಂದಡ್ಪು ಎಂಬಲ್ಲಿ ವಿದ್ಯುತ್ ತಂತಿಗಳು ತೀರಾ ಹಳೆಯದಾಗಿದ್ದು ಪದೇ ಪದೇ ತುಂಡಾಗಿ ಬೀಳುತ್ತದೆ, ಇವುಗಳನ್ನು ಬದಲಾಯಿಸುವ ಗೋಜಿಗೆ ಮೆಸ್ಕಾಂ ಹೋಗಿಲ್ಲ ಹತ್ತಾರು ಭಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ತಂತಿ ಬದಲಾಯಿಸಲು ಜೀವಹಾನಿಯಾಗಬೇಕೆಂದು ಮೆಸ್ಕಾಂ ಕಾಯುತ್ತಿದೆ ಎಂದು ಗ್ರಾಮಸ್ಥರು ಅಕ್ರೋಶದಿಂದ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜೆ.ಇಯವರು ಶೀಘ್ರವಾಗಿ ಈ ತಂತಿಗಳನ್ನು ಬದಲಾಯಿಸಲಾಗುವುದು ಎಂದರು.ಪ್ರಗತಿ ಪರ ಕೃಷಿಕ ಅಜಯ್ ಅಮೀನ್ ನಾಗಂದಡಿಯವರು ಮತನಾಡಿ ಕುಪ್ಪೆಪದವಿನಲ್ಲಿದ್ದ ಬಿ.ಎಸ್.ಎನ್.ಎಲ್. ದೂರವಾಣಿ ವಿನಿಮಯ ಕೇಂದ್ರವನ್ನು ಮುಚ್ಚಲಾಗಿದೆ.ಇಂದಿನ ಆಧುನಿಕ ಯುಗದಲ್ಲಿ ಇಂಟರ್‍ನೆಟ್ ಅತ್ಯಾವಶ್ಯಕವಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ಎಲ್ಲಾ ವ್ಯವಹಾರಗಳಿಗೂ ತೊಂದರೆಯಾಗುತ್ತದೆ.ಖಾಸಗಿಯವರಿಗೆ ಅನುಕೂಲ ಮಾಡಿಕೊಡಲು ಬಿ.ಎಸ್.ಎನ್.ಎಲ್.ಈ ರೀತಿ ಮಾಡುತ್ತಿದೆಯೇ ಎಂದು ಅಕ್ರೋಶ ವ್ಯಕ್ತಪಡಿಸಿರು. ಇದಕ್ಕೆ ಉತ್ತರಿಸಿದ ನೊಡಲ್ ಅಧಿಕಾರಿ ಈ ಬಗ್ಗೆ ಪಂಚಾಯತ್ ಏನೂ ಮಾಡಲು ಸಾಧ್ಯವಿಲ್ಲ ಈ ವಿಚಾರವನ್ನು ಬಿ.ಎಸ್.ಎನ್.ಎಲ್. ಗಮನಕ್ಕೆ ತರಲಾಗುವುದು ಎಂದರು.
ಮನೆ ನಿವೇಶನಗಳನ್ನು ಗುರುತಿಸದೇ ಕೇವಳ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ, ಅಲ್ಲದೆ ಮತ್ತೆ ಅವುಗಳನ್ನು ವಾಪಸ್ ತೆಗೆದುಕೊಂಡಿದ್ದೀರಿ ನಿವೇಶನವನ್ನು ಗುರುತಿಸಿಕೊಡದೇ ಹಕ್ಕುಪತ್ರ ನೀಡಿದರೆ ಮನೆಕಟ್ಟುವುದೆಲ್ಲಿ ಎಂದು ಮಾಜಿ ಪಂ. ಸದಸ್ಯ ಹರಿಯಪ್ಪ ಮುತ್ತೂರು ಪ್ರಶ್ನಿಸಿದರು. ನಿವೇಶಕ್ಕಾಗಿ ಜಾಗ ಸಮತಟ್ಟು ಮಾಡಲು ಶಾಸಕರಲ್ಲಿ ಅನುದಾನ ನೀಡುವಂತೆ ವಿನಂತಿಸಲಾಗಿದೆ. ಜಾಗ ಸಮತಟ್ಟು ಮಾಡದೇ ನಿವೇಶನ ಹಂಚಿದರೆ ಮುಂದೆ ಸಮಸ್ಯೆಯಾಗುತ್ತದೆ. ಜಾಗ ಸಮತಟ್ಟುಗೊಳಿಸಿದ ಬಳಿಕ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಪಂ. ಸದಸ್ಯ ಸತೀಶ್ ಬಳ್ಳಾಜೆ ಉತ್ತರಿಸಿದರು.ದೊಡ್ಡಳಿಕೆ ನದಿಯಿಂದ ಮುತ್ತೂರುವರೆಗಿನ ಕಾಲುವೆಯಲ್ಲಿ ಈಗ 8ಕಿ.ಮೀಟರ್ ದೂರ ನೋಣಾಲ್ ಎಂಬಲ್ಲಿಯವರೆಗೆ ಮಾತ್ರ ನೀರು ಹರಿಯುತ್ತಿದ್ದು. ಇದನ್ನು ಮುತ್ತೂರುವರೆಗೂ ಹರಿಸಬೇಕು ಇದರಿಂದ ಮುತ್ತೂರಿನ ರೈತರಿಗೂ ಅನುಕೂಲವಾಗುತ್ತದೆ ಎಂದು ಕೃಷಿಕ ವಿಜಯಕುಮಾರ್ ಶೆಟ್ಟಿ ಒತ್ತಾಯಿಸಿದರು. ಸಣ್ಣ ನೀರಾವರಿ ಇಲಾಖೆಯ ಪರವಾಗಿ ಉತ್ತರಿಸಿದ ಕೃಷ್ಣಪ್ಪಗೌಡ ನೋಣಾಲ್ ನಿಂದ ಮುಂದಕ್ಕೆ ಕಾಲುವೆಯಲ್ಲಿ ಕೆಲವರು ತೆಂಗಿನ ಗಿಡಗಳನ್ನು ನೆಟ್ಟು ಅತಿಕ್ರಮಿಸಿದ್ದಾರೆ. ಇದನ್ನು ತೆರವುಗೊಳಿಸಬೇಕಾದುದು ಕಂದಾಯ ಇಲಾಖೆ ಈಗಾಗಲೇ ಈ ಬಗ್ಗೆ ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಎಂದರು. ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಅರ್ಜಿಸಲ್ಲಿಸಿದರೆ ಮಾಹಿತಿ ನೀಡುವಾಗ ಪಂಚಾಯತ್ ಅವೈಜ್ಞಾನಿಕವಾಗಿ ಶುಲ್ಕ ನೀಡುತ್ತಿದೆ ಒಂದೊಂದು ಬಾರಿ ಒಂದೊಂದು ಶುಲ್ಕ ವಿಧಿಸಲಾಗುತ್ತಿದೆ ಎಂದು ದಯಾನಂದ ಶೆಟ್ಟಿ ಕುಳವೂರು ದೂರಿದರು. ಬ್ಯಾಂಕ್ ಆಫ್ ಬರೋಡ ಕುಪ್ಪೆಪದವು ಶಾಖೆಯ ಮ್ಯಾನೇಜರ್ ಸಂತೋಷ್‍ರವರು ಬ್ಯಾಂಕಿಂಗ್ ವ್ಯವಹಾರ, ಕೃಷಿ ,ಶಿಕ್ಷಣ ಸಾಲಗಳ ಬಗ್ಗೆ ಸವಿವರವಾದ ಮಾಹಿತಿ ನೀಡಿದರು. ಆರೋಗ್ಯ ಕಂದಾಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳು ಅಧಿಕಾರಿಗಳು ತಮ್ಮ ಇಲಾಖೆಗಳ ಬಗ್ಗೆಗಿನ ಮಾಹಿತಿಗಳನ್ನು ನೀಡಿದರು. ಪಂಚಾಯತ್ ಅಧ್ಯಕ್ಷೆ ನಾಗಮ್ಮ ಅಧ್ಯಕ್ಷತೆ ವಹಿಸಿದ್ದರು. ಪಿ.ಡಿ.ಒ ವಸಂತಿ ಸಭೆಯನ್ನು ನಿರ್ವಹಿಸಿದರು ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆಯ ಕೆ.ಆರ್ ವೀಣಾ ಉಪಸ್ಥಿತರಿದ್ದರು.

5ವಿಪಿ ಗ್ರಾಮಸಭೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter