Published On: Sat, Jun 8th, 2019

ಕ್ರೈಸ್ತ ಕುಟುಂಬದ ಜಮೀನಿನಲ್ಲಿ ದೈವ ದೇವರುಗಳ ಪವಾಡ, ದೈವದೇವರಗಳ ಪೂಜೆಯಿಂದ ನೀರಿಲ್ಲದ ಐದು ಕೊಳವೆ ಬಾವಿಯಲ್ಲಿ ನೀರು

 ಕಿನ್ನಿಗೋಳಿ:ನೀರಿಲ್ಲದೆ ಒಣಗುವ ಹಂತದಲಿದ್ದ ತಮ್ಮ ಜಮೀನಿನಲ್ಲಿ ದೈವದೇವರುಗಳ ಪೂಜೆಯಿಂದ ನೀರಿಲ್ಲದ ಐದು ಕೊಳವೆ ಬಾವಿಯಲ್ಲಿ ನೀರು ಸಿಕ್ಕಿ ಪವಾಡ ನಡೆದು ವೈಜ್ಞಾನಿಕತೆಗೆ ಸವಾಲಾದ ಘಟನೆಯೊಂದು ನಡೆದಿದೆ, ಕಿನ್ನಿಗೋಳಿ ಸಮೀಪದ ಕಲ್ಲಮುಂಡ್ಕೂರು ಪಂಚಾಯತ್ ವ್ಯಾಪ್ತಿಯ ನಿಡ್ಡೋಡಿ ಗುಂಡೆಲ್ ಗ್ರಾಮದಲ್ಲಿ ವಾಸವಾಗಿರುವ ವಿಕ್ಟರ್ ಡಿಸಿಲ್ವ ಕಳೆದ ಹಲವಾರು ವರ್ಷದಿಂದ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದಾರೆ, ತಮ್ಮ 7 ಎಕ್ಕರೆ ಜಮೀನಿನಲ್ಲಿ ತೆಂಗು ,ಕಂಗು, ಭತ್ತ ಮತ್ತಿತರ ಬೆಳೆಗಳನ್ನು ಬೆಳೆಸುತ್ತ ಬಂದಿದ್ದಾರೆ.5kinni kolave bhavi pavada (2)

ಬೆಳೆಗೆ ನೀರುಣಿಸಲು ಬಾವಿಯೊಂದನ್ನು ತೊಡಿದ್ದು ಅದರಲ್ಲಿ ಬೇಕಾದಷ್ಟು ನೀರು ಸಿಗುತ್ತಿತ್ತು, ಆದರೆ ಈ ಬಾರಿ ಮಳೆಯ ಪ್ರಮಾನ ಕಡಿಮೆಯಾದರಿಂದ ಏಪ್ರೀಲ್ ತಿಂಗಳಿನಲ್ಲೇ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಬಂತು, ಮಳೆ ಬಾರದಿದ್ದರೆ ನೀರು ಸಮಸ್ಯೆ ಉದ್ಭವವಾಗಿ ತಮ್ಮ ಬೆಳೆಗೆ ನೀರು ಕಡಿಮೆಯಾಗಬಹುದು ಎಂದು ಕೊಳವೆ ಬಾವಿಯನ್ನು ತೋಡಿದರು ಸುಮಾರು 600 ಅಡಿ ಕೊರೆದರೂ ನೀರು ಸಿಗಲಿಲ್ಲ, ಬೇಸತ್ತು ಮತ್ತೊಂದು ಕೊಳವೆ ಬಾವಿಯನ್ನು ಕೊರೆದರು ಅದು 700 ಅಡಿ ಅಳಕ್ಕೆ ಹೋದರೂ ಒಂದು ತೊಟ್ಟು ನೀರಿಲ್ಲ, ಇಷ್ಟಕ್ಕೆ ಸುಮ್ಮನಾಗದ ವಿಕ್ಟರ್ ಡಿಸಿಲ್ವ ಅವರು ಒಂದರ ನಂತರ ಒಂದರಂತೆ ಮತ್ತೆ ಎರಡು ಕೊಳವೆಬಾವಿಯನ್ನು ತೋಡಿದರೂ ನೀರು ಸಿಗಲಿಲ್ಲ, ಅದುವರೆಗೆ 4 ಬೋರ್ ವೆಲ್ ಗಳನ್ನು ತೋಡಿ ಸುಮಾರು 5 ಲಕ್ಷದಷ್ಟು ಖರ್ಚು ಮಾಡಿದ ಡಿಸಿಲ್ವ ಅವರು ಮಾನಸಿಕವಾಗಿ ಕುಗ್ಗಿದ್ದರು, ಕೃಷಿಯನ್ನೇ ನಂಬಿ ಬದುಕಿದ ಇವರು ತಾವು ಕಷ್ಟ ಪಟ್ಟು ಬೆಳೆಸಿದ ತೋಟ ನೀರಿಲ್ಲದೆ ಒಣಗಲಿದೆ, ಮುಂದೇನು ಎಂದು ದಾರಿ ತೋಚದೆ ಇರುವಾಗ ಬೋರ್ ವೆಲ್ ಮಾಲಕ ಪ್ರಕಾಶ್ ಅವರು ಬೆಳ್ತಂಗಡಿ ಮೂಲದ ಜಗದೀಶ್ ಶಾಂತಿ ಎಂಬುವವರ ಮೊಬೈಲ್ ನಂಬರ್ ಕೊಟ್ಟು ಸಮಸ್ಯೆಗೆ ಪರಿಹಾರ ಹುಡುಕುವಂತೆ ಹೇಳಿದರು, ಅದರಂತೆ ಡಿಸಿಲ್ವ ಅವರು ಜಗದೀಶ್ ಶಾಂತಿಯವರನ್ನು ಸಂಪರ್ಕಿಸಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು, ಸ್ಥಳಕ್ಕೆ ಆಗಮಿಸಿದ ಜಗದೀಶ್ ಶಾಂತಿಯವರು ಡಿಸಿಲ್ವ ಅವರ ಜಮೀನು ಪರಿಶೀಲಿಸಿ, ಜಮೀನಿನಲ್ಲಿ ನಾಗನ ದೋಷವಿದೆ ಮಾತ್ರವಲ್ಲದೆ ಜುಮಾದಿ ದೈವದ ದೋಷವಿದೆ, ಕೊಡಮಣಿತ್ತಾಯ ದೈವದ ಸವಾರಿ ಇದೆ, ನಾಗನಿಗೆ ಬೇಕಾದ ಪೂಜೆ ಜುಮಾದಿ ದೈವಕ್ಕೆ ಸೀಯಾಳ, ಕೊಡಮಣಿತ್ತಾಯ ದೈವಕ್ಕೆ ಹಾಲು ನೀಡಲು ಬೆಳ್ಳಿಯ ಲೋಟ ಕೊಡಿ, ಧರ್ಮಸ್ಥಳ ಮತ್ತು ಸುಬ್ರಮಣ್ಯದಲ್ಲಿ ಪ್ರಾರ್ಥನೆ ಮಾಡಿ ಮಾತ್ರವಲ್ಲದೆ ಕಾರ್ಕಳ ಮಂಗಳೂರು ಮತ್ತು ತಮ್ಮ ಗ್ರಾಮದ ವ್ಯಾಪ್ತಿಯ ಚರ್ಚ್ ಗಳಲ್ಲಿ ಪೂಜೆ ಸಲ್ಲಿಸಿ ಈ ರೀತಿ ಮಾಡಿದರೆ ನಿಮಗೆ ಬೇಕಾದಷ್ಟು ನೀರು ಸಿಗುತ್ತದೆ ಎಂದರು.5kinni kolave bhavi pavada (4)

ಡಿಸಿಲ್ವ ನನ್ನ ಸಮಸ್ಯೆಗೆ ಪರಿಹಾರ ದೊರಕುದಾದರೆ ಯಾವ ಕೆಲಸಕ್ಕೂ ತಯಾರಿದ್ದೇನೆ ಎಂದರು. ಅದರಂತೆ ಒಂದು ಸ್ಥಳವನ್ನು ಗುರುತಿಸಿ ಈ ಜಾಗದಲ್ಲಿ ಕೊಳವೆ ಬಾವಿ ಕೊರೆಯಿರಿ ಮೊದಲ 35 ಅಡಿ ಅಳದಲ್ಲಿ ಕೆಂಪು ನೀರು ಸಿಗುತ್ತದೆ, ಮುಂದುವರಿದು 100 ಅಡಿ ಅಳ ಹೋಗುವಾಗ ಮತ್ತೊಮ್ಮೆ ನೀರು ಸಿಗುತ್ತದೆ, ಮತ್ತೂ ಮುಂದುವರಿದು 600 ಅಡಿ ತೋಡಿ ಇದರಲ್ಲಿ ಬೇಕಾದಷ್ಟು ನೀರು ಸಿಗುವುದು ಎಂದರು, ಜಗದೀಶ್ ಶಾಂತಿಯವರು ಹೇಳಿದ ರೀತಿಯಲ್ಲಿ ಕೊಳವೆ ಬಾವಿ ತೋಡಲಾರಂಬಿಸಿದರು ಶಾಂತಿ ಭಟ್ರು ಹೇಳಿದಂತೆ ಮೊದಲ 35 ಅಡಿ ಅಳದಲ್ಲಿ ಕೆಂಪು ನೀರು 100 ಅಡಿ ಅಳದಲ್ಲಿ ನೀರು 600 ಅಡಿ ಅಳಕ್ಕೆ ಕೊರೆಯುವಾಗ ಬೇಕಾದಷ್ಟು ನೂರು ಸಿಕ್ಕಿತ್ತು. ಡಿಸಿಲ್ವರವರ ಜಮೀನಿನಲ್ಲಿ ಕಂಡು ಕೇಳರಿಯದ ಪವಾಡ ನಡೆಯಿತು.5kinni kolave bhavi pavada (3)

ಮರುದಿನ ಈ ಕೊಳವೆ ಬಾವಿ ಸಮೀಪದ ಕಲ್ಲೊಂದರ ಮೇಲೆ ಸರ್ಪವೊಂದು ಮಲಗಿತ್ತು ಇದನ್ನು ಕಂಡು ಭಯಗೊಂಡ ಡಿಸಿಲ್ವರವರು ಮತ್ತೆ ಜಗದೀಶ್ ಶಾಂತಿ ಯವರಿಗೆ ಕರೆ ಮಾಡಿದರು. ಭಯಪಡುವ ಅಗತ್ಯವಿಲ್ಲ ನಾಗದೇವರೇ ಅಲ್ಲಿ ಬಂದಿದ್ದಾರೆ, ತಾವು ಪ್ರಾರ್ಥಿಸಿದಂತೆ ಪೂಜೆ ನಡೆಯಬೇಕಾಗಿದೆ ನಂತರ ಅಲ್ಲಿಂದ ಅದು ಹೋಗಲಿದೆ ಎಂದು ಪೂಜೆಗೆ ದಿನ ನಿಗದಿಪಡಿಸಿದರು, ಅದರಂತೆ ಮೇ ಮೊದಲ ವಾರದಲ್ಲಿ ನಾಗನಿಗೆ ಅಶ್ಲೇಶ ಬಲಿ ಮತ್ತಿತರ ಪೂಜೆಯನ್ನು ಜಗದೀಶ್ ಶಾಂತಿಯವರು ನೆರವೇರಿಸಿದರು, ಪೂಜೆ ಮುಕ್ತಾಯವಾದ ನಂತರ ಜಗದೀಶ್ ಶಾಂತಿಯವರು ಈ ಹಿಂದೆ ನೀವು ತೋಡಿದ ಐದು ಕೊಳವೆ ಬಾವಿಗಳ ಮೇಲೆ ಮುಚ್ಚಿದ ಕಲ್ಲನ್ನು ಸರಿಸಿ ನೋಡಿ ಅದರಲ್ಲಿ ನೀರು ಇರಲಿದೆ ಎಂದರು. ಅದರಂತೆ ಡಿಸಿಲ್ವ ಅವರು ಈ ಹಿಂದೆ ತೋಡಿದ ಎಲ್ಲಾ ಕೊಳವೆ ಬಾವಿಯಲ್ಲಿ ಕೇವಲ 15 ಅಡಿ ಅಂತರದಲ್ಲಿ ನೀರು ತುಂಬಿತ್ತು, 600 ಅಡಿಯಷ್ಟು ಕೊರೆದರೂ ನೀರು ಸಿಗದ ಕೊಳವೆ ಬಾರಿಯಲ್ಲಿ ನೀರು ಸಿಗದಿದ್ದಾಗ ಈಗ ಒಮ್ಮಿಂದೊಂಮೆಲ್ಲೇ ನೀರು ಬಂದಿರುವುದು ಆಚ್ಚರಿಯೂ ಸಂತೋಷವೂ ಆಯಿತು. ಇನ್ನು ಮುಂದಕ್ಕೆ ಈ ಎಲ್ಲಾ ಕೊಳವೆ ಬಾವಿಯಲ್ಲಿ ನೀರು ಇರಲಿದೆ ನೀರಿನ ಸಮಸ್ಯೆ ಇದ್ದವರಿಗೆ ನೀರು ಕೊಡಿ ನಿಮಗೆ ನೀರಿನ ಸಮಸ್ಯೆ ಬರುವುದಿಲ್ಲ ಎಂದರು. ನಿಡ್ಡೊಡಿ ಪರಿಸರದಲ್ಲಿ ಇದೊಂದು ದೊಡ್ದ ಮಟ್ಟದ ಸುದ್ದಿಯಾಗಿ ಹಲವಾರು ಮಂದಿ ಈ ವವಾಡವನ್ನು ವೀಕ್ಷಿಸಲು ಆಗಮಿಸುತ್ತಿದ್ದಾರೆ.

5kinni kolave bhavi pavada (5)
ಡಿಸಿಲ್ವ ಅವರ ಜಮೀನು ಭೂಸುಧಾರಣೆ ಕಾನೂನಿನಂತೆ ಬಂದ ಜಮೀನಾಗಿದ್ದು, ಶಿವರಾಮ ಹೆಗ್ಡೆಯವರು ಇದರ ಹಿಂದಿನ ಮಾಲಕರಾಗಿದ್ದರು, ಡಿಸಿಲ್ವ ಅವರ ಹಿರಿಯರಿಗೆ ಜಮೀನು ಸಿಗುವಾಗ, ಇದರ ಮೂಲ ಮಾಲಕರು ಶಿವರಾಮ ಹೆಗ್ಡೆ, ದೈವ ದೇವರ ಪೂಜೆ ಕಷ್ಟವಾಗಬಹುದೆಂದು ಇಲ್ಲಿದ್ದ ದೈವ ದೇವರುಗಳನ್ನು ಬೇರೆಡೇಗೆ ಸ್ಥಳಾಂತರಿಸಿದ್ದು ಅದು ಜಮೀನಿಗೆ ಸಂಬಂಧಿಸಿದ ಶಕ್ತಿಯಾದರಿಂದ ಡಿಸಿಲ್ವ ಅವರಿಗೆ ಈ ತೊಂದರೆ ಬಂದಿತ್ತು ಎಂಬುದು ನಂಬಿಕೆ.

5kinni kolave bhavi pavada (1)
ವಿಕ್ಟರ್ ಡಿಸಿಲ್ವ ಅವರ ನೆರೆಯ ತೋಟದವರಿಗೆ ನೀರಿನ ಸಮಸ್ಯೆ ಇದ್ದು, ತನ್ನ ಒಂದು ಕೊಳವೆಬಾವಿಯ ನೀರನ್ನು ಅವರಿಗೆ ನೀಡಿದ್ದಾರೆ, ಆ ಕೊಳವೆ ಬಾವಿಗೆ ಪಂಪು ಅಳವಡಿಸಿ ನೆರೆಯ ತೋಟಕ್ಕೆ ನೀರು ಹರಿದು ನೆರೆಯವರ ಸಮಸ್ಯೆ ಬಗೆಹರಿದಿದೆ, ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ಅದಕ್ಕೂ ಉಚಿತವಾಗಿ ನೀರು ಕೊಡಲು ತಯಾರಿದ್ದಾರೆ ಈ ಬಗ್ಗೆ ಪಂಚಾಯತ್ ಗೆ ಮಾಹಿತಿ ನೀಡಿದ್ದಾರೆ.

600 ಅಡಿಯಷ್ಟು ಅಳಕ್ಕೆ ಕೊಳವೆ ಬಾವಿ ತೊಡಿದರೂ ನೀರು ಸಿಗದಿದ್ದಾಗ ದೈವ ದೇವರ ಪ್ರಾರ್ಥನೆಯಿಂದ ಎಲ್ಲಾ ಬಾವಿಯಲ್ಲಿ ನೀರು ಸಿಕ್ಕಿದ್ದು ಒಂದು ಪವಾಡವೇ ಸರಿ, 5 ಕೊಳವೆ ಬಾಬಿಗೆ ಸುಮಾರು 6 ಲಕ್ಷದಷ್ಟೂ ಖರ್ಚು ಮಾಡಿದ್ದೇನೆ, 3 ಲಕ್ಷದಷ್ಟು ಸಾಲ ಮಾಡಿದ್ದೇನೆ, ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಉಚಿತವಾಗಿ ನೀಡುತ್ತೇನೆ.

*ವಿಕ್ಟರ್ ಡಿಸಿಲ್ವ

ಇಂತಹ ಒಂದು ಪವಾಡ ಇದುವರೆಗೆ ಕಂಡಿಲ್ಲ, ಈ ಬಾರಿ ನೀರಿನ ಸಮಸ್ಯೆ ಇದ್ದರೂ ಕೇವಲ ಪೂಜೆಯಿಂದ ನೀರಿಲ್ಲದ ಕೊಳವೆ ಬಾವಿಯಲ್ಲಿ ಮೇಲ್ಮಟ್ಟದಲ್ಲಿಯೇ ನೀರಿರುವುದು ದೊಡ್ದ ಪವಾಡ, ಅಗತ್ಯವಿದ್ದಲ್ಲಿ ಪಂಚಾಯತ್ ಗೆ ನೀರು ಕೊಡಲು ಮುಂದಾಗಿದ್ದಾರೆ, ನೀರಿನ ಅಗತ್ಯತೆ ಕಂಡು ಮುಂದಿನ ದಿನದಲ್ಲಿ ಅಲೋಚಿಸಲಾಗುವುದು.

*ಸುಂದರ ಪೂಜಾರಿ
ಉಪಾಧ್ಯಕ್ಷರು ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್.

 

*ವರಧಿ: ನಿಶಾಂತ್ ಶೆಟ್ಟಿ ಕಿಲೆಂಜೂರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter