Published On: Sat, Jun 8th, 2019

ಮೈಸೂರು: ರಾಜ್ಯಮಟ್ಟದ ಕವಿಗೋಷ್ಠಿ ಅಧ್ಯಕ್ಷತೆಗೆ ಡಾ.ಕಾತ್ಯಾಯಿನಿ ಕುಂಜಿಟ್ಟು

ಉಡುಪಿ: ಮೈಸೂರಿನಲ್ಲಿ ಭಾನುವಾರ ಗ್ರಾಮಾಂತರ ಬುದ್ದಿ ಜೀವಿಗಳ ಬಳಗ ಆಯೋಜಿಸಿರುವ ಸಂಸ್ಥೆಯ 255 ನೇ ಕಾರ್ಯಕ್ರಮ ಪ್ರೇಮ ಕವಿ ಕೆ.ಎಸ್.ನ ರಾಜ್ಯಮಟ್ಟದ ಸಾಹಿತ್ಯೋತ್ಸವದ ಕವಿಗೋಷ್ಠಿಯ ಅಧ್ಯಕ್ಷರಾಗಿ ಉಡುಪಿಯ ಸಾಹಿತಿ, ಕವಯತ್ರಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರು ಭಾಗವಹಿಸಲಿರುವರು ಎಂದು ಸಂಸ್ಥೆಯ ಅಧ್ಯಕ್ಷ ಡಾ.ಬೇರ್ಯ ರಾಮ್ ಕುಮಾರ್ ಅವರ ಪ್ರಕಟಣೆ ತಿಳಿಸಿದೆ.
ಇಡಿ ದಿನದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿದೆಡೆಗಳಿಂದ ಮುಂಬಯಿಯಿಂದ ಸಾಹಿತಿಗಳು ಮತ್ತು ಕವಿಗಳು ಭಾಗವಹಿಸಲಿದ್ದಾರೆ.IMG-20190608-WA0190

ಮಹಾಕವಿ ಡಾ. ಲತಾ ರಾಜಶೇಖರ್ ಮತ್ತು ಚಿಂದತಕ ಡಾ.ರಾಜ್ ಶೇಖರ್ ದಂಪತಿಗಳ ಉಪಸ್ಥಿತಿಯಲ್ಲಿ ವಿಶ್ವ ಮಾನ್ಯ ಕನ್ನಡಿಗ ಪ್ರಶ್ತಿಯನ್ನು ನೀಡಲಾಗುತ್ತಿದ್ದು ಕರಾವಳಿಯ ಸಾಧಕರರಾದ ಶಿಲ್ಪಿ ಕೆ.ಶಿವರಾಮ ಆಚಾರ್ಯ ಕಾರ್ಕಳ, ಮೂಡುಬಿದಿರೆ ತುಳು ಕೂಟದ ಅಧ್ಯಕ್ಷ ಚಂದ್ರಹಾಸ ಎಂ.ದೇವಾಡಿಗ, ಛಾಯಾಗ್ರಾಹಕ ಶರತ್ ಕಾನಂಗಿ, ಹಿರಿಯ ಪತ್ರಕರ್ತ ಡಾ.ಶೇಖರ ಅಜೆಕಾರು, ಮುಂಬಯಿಯ ಸಮಾಜ ಸೇವಕಿ ಡಾ.ರಜನಿ ಪೈ ಈ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ.

ಸಾಧನೆಯ ಹಾದಿಯ ಬಾಲ ಪ್ರತಿಭೆಗಳಾದ ಸೃಜನ್ಯ ಜೆ.ಹೋಮಲ್ಕೆ ಬೆಳುವಾಯಿ, ಅನನ್ಯ ಬೆಳಾಲ್ ಬೆಳ್ತಂಗಡಿ, ತಕ್ಷಿಲ್ ಎಂ.ದೇವಾಡಿಗ, ಕೆ.ಅಮೋಘ ಹೆಗ್ಡೆ ಮತ್ತು ಕೆ.ಅಥರ್ವ ಹೆಗ್ಡೆ ಮೂಡುಬಿದಿರೆ ವಿಶ್ವ ಮಾನ್ಯ ಕನ್ನಡಿಗ ಬಾಲ ಪ್ರತಿಭಾ ಗೌರವವನ್ನು ಡಾ. ಮಹೇಶ್ ಜೋಶಿ ಅವರ ಉಪಸ್ಥಿತಿಯಲ್ಲಿ ನೀಡಲಾಗುತ್ತಿದೆ. ಅನನ್ಯ ಬೆಳಾಳ್ ಅವರ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನವಿದೆ. ಕಾರ್ಕಳದ ಕವಯತ್ರಿ ಬಾಲಕಿ ಅವನಿ ಉಪಾಧ್ಯಾ ಅವರಿಗೆ ದಿ. ಬಿ.ಆರ್ ಉಲ್ಲಾಸ್ ನೆನಪಿನ ಸಾಹಿತ್ಯ ಪ್ರಶಸ್ತಿ ನೀಡಲಾಗುತ್ತಿದೆ.

Displaying 1 Comments
Have Your Say
  1. Shekar Moily Padebettu says:

    Congratulations Mr.Chandrahasa Devadiga and Master Taksheel M Devadiga for having been chosen for this prestigious award.God bless you and stay blessed throughout

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter