Published On: Mon, Jun 3rd, 2019

ಜೇಸಿಐ ಪರ್ಕಳಕ್ಕೆ ಅತ್ಯುತ್ತಮ ಘಟಕ ಪ್ರಶಸ್ತಿ

ಇಂದು ಪುತ್ತೂರಿನಲ್ಲಿ ನಡೆದ “ಮುಂಗಾರು” – ಭಾರತೀಯ ಜೇಸಿಸ್ ವಲಯ ಹದಿನೈದರ ಮಧ್ಯಂತರ ಸಮ್ಮೇಳನದಲ್ಲಿ ಜೇಸಿಐ ಪರ್ಕಳ ಘಟಕ ಅತ್ಯುತ್ತಮ ಘಟಕ (ವಿನ್ನರ್) ಪ್ರಶಸ್ತಿಯೊಂದಿಗೆ ಪುರಸ್ಕೃತವಾಯಿತು.
IMG_20190602_193307
ಅಲ್ಲದೇ, ಜೇಸಿ ವಿನುತರವರಿಗೆ ಅತ್ಯುತ್ತಮ ಘಟಕಾಧ್ಯಕ್ಷೆ (ರನ್ನರ್ ಅಪ್) ಮತ್ತು “ಮುಂಗಾರು ರಾಣಿ” ಪುರಸ್ಕಾರ, ಕಾರ್ಯಕ್ರಮ ವಿಭಾಗದ “ಅತ್ಯುತ್ತಮ ವಿಶೇಷ ಕಾರ್ಯಕ್ರಮ” ಪುರಸ್ಕಾರ, ಆಡಳಿತ ವಿಭಾಗದ “ಡೈಮಂಡ್ ಘಟಕ” ಪುರಸ್ಕಾರ,  ಸಾಂಸ್ಕೃತಿಕ ಕಾರ್ಯಕ್ರಮ ಘಟಕ ವೈಭವ (ಪ್ರಥಮ), ಫೋಟೋ ಡಿಸ್ಪ್ಲೇ (ಪ್ರಥಮ), ಘಟಕ ಆಯೋಜಿಸಿದ ಪವರ್ ಟಾಕ್, ಪ್ರಯಾಸ್, ಬಹುಘಟಕ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳ  ಮನ್ನಣೆಗೆ ಪಾತ್ರವಾಯಿತು.
ವಲಯಾಧ್ಯಕ್ಷ ಜೇಸಿ ಅಶೋಕ್ ಚೂಂತಾರ್ ಪ್ರಶಸ್ತಿ ವಿತರಿಸಿದರು. ನಿಕಟ ಪೂರ್ವ ವಲಯಾಧ್ಯಕ್ಷ ಜೇಸಿ ರಾಕೇಶ್ ಕುಂಜೂರ್, ಕಾರ್ಯಕ್ರಮ ವಿಭಾಗದ ರಾಷ್ಟ್ರೀಯ ನಿರ್ದೇಶಕ ಜೇಸಿ ಸಂದೀಪ್ ಕುಮಾರ್, ವಲಯ ಉಪಾಧ್ಯಕ್ಷರುಗಳಾದ ದೇವೇಂದ್ರ ನಾಯಕ್, ಕಾರ್ತಿಕೇಯ ಮಧ್ಯಸ್ಥ, ಜಬ್ಬಾರ್ ಸಾಹೇಬ್, ಮಕರಂದ ಮತ್ತು ವಲಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter