349 ಅಭ್ಯರ್ಥಿಗಳಲ್ಲಿ ಗೌತಂ ಗಂಭೀರ ಶ್ರೀಮಂತ ಅಭ್ಯರ್ಥಿ
ನವದೆಹಲಿ: ಪೂರ್ವ ದೆಹಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ, ಮಾಜಿ ಕ್ರಿಕೆಟ್ ಆಟಗಾರ ಗೌತಂ ಗಂಭೀರ್ 349 ಅಭ್ಯರ್ಥಿಗಳಲ್ಲೇ ಅತ್ಯಂತ ಶ್ರೀಮಂತ ಅಭ್ಯರ್ಥಿ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಗೌತಂ ಗಂಭೀರ 147 ಕೋಟಿ ರೂಪಾಯಿಯ ಒಡೆಯರಾಗಿದ್ದು, ನಾಮಪತ್ರದಲ್ಲಿ ಅದನ್ನು ಘೋಷಿಸಿಕೊಂಡಿದ್ದಾರೆ. ವಾರ್ಷಿಕ 6.15 ಲಕ್ಷ ರೂ. ಆದಾಯವನ್ನು ಘೋಷಿಸಿರುವ ಗಂಭೀರ್ ಕಳೆದ ವರ್ಷದ ಐಟಿ ರಿಟನ್ರ್ಸ್‍ನಲ್ಲಿ ರೂ.12.40 ಕೋಟಿ ಆದಾಯವಿರುವುದಾಗಿ ತಿಳಿಸಿದ್ದಾರೆ. ದಶಕಗಳ ಕಾಲ ಟೀಂ ಇಂಡಿಯಾದಲ್ಲಿ ಆರಂಭಿಕ ಆಟಗಾರರಾಗಿ ಗುರುತಿಸಿಕೊಂಡಿರುವ ಗಂಭೀರ ಟಿ20, ಟೆಸ್ಟ್, ಐಪಿಎಲ್‍ನಲ್ಲೂ ತನ್ನ ಆಟದ ಮೂಲಕ ಜನಮನ್ನಣೆಗಳಿಸಿದರು. ಇತ್ತೀಚೆಗಷ್ಟೇ ಬಿಜೆಪಿ ಸೇರಿ, ಪೂರ್ವ ದೆಹಲಿ ಕ್ಷೇತ್ರದಿಂದ ಟಿಕೆಟ್ ಪಡೆಯಲು ಸಫಲರಾದ ಗಂಭೀರ ಅವರ ರಾಜಕೀಯ ಜೀವನದ ಆಟ ಮೇ.23ರಂದು ನಿರ್ಧರವಾಗಲಿದೆ.