Published On: Mon, Apr 15th, 2019

ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಕಲಾ ವಿಭಾಗದಲ್ಲಿ 100% ಫಲಿತಾಂಶ:

2018-19ನೇ ಸಾಲಿನ ದ್ವಿತೀಯ ಪಿ.ಯು.ಸಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಈ ಪೈಕಿ ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ 268 ವಿದ್ಯಾರ್ಥಿಗಳ ಪೈಕಿ 260 ವಿದ್ಯಾರ್ಥಿಗಳು ತೇರ್ಗಡೆಗೊಂಡು 97% ಫಲಿತಾಂಶ ಸಾಧಿಸಿದೆ. ವಾಣಿಜ್ಯ ವಿಭಾಗದಲ್ಲಿ ನಿರೀಕ್ಷಾ 577, ಕಲಾ ವಿಭಾಗದಲ್ಲಿ ಪ್ರಜ್ಞಾ 564, ವಿಜ್ಞಾನ ವಿಭಾಗದಲ್ಲಿ ಕಾವ್ಯಶ್ರೀ 544 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ccc
ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 30 ವಿದ್ಯಾರ್ಥಿಗಳ ಪೈಕಿ 4 ಅತ್ಯುನ್ನತ ಶ್ರೇಣಿ, 22 ಪ್ರಥಮ ಶ್ರೇಣಿ, 4 ದ್ವಿತೀಯ ಶ್ರೇಣಿ ಪಡೆಯುವುದರ ಮೂಲಕ ಶೇಕಡಾ 100 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 179 ವಿದ್ಯಾರ್ಥಿಗಳ ಪೈಕಿ 29 ಅತ್ಯುನ್ನತ ಶ್ರೇಣಿ, 122 ಪ್ರಥಮ ಶ್ರೇಣಿ, 20 ದ್ವಿತೀಯ ಶ್ರೇಣಿ, 5 ತೃತೀಯ ಶ್ರೇಣಿ ಪಡೆಯುವುದರ ಮೂಲಕ ಶೇಕಡಾ 98.32 ಫಲಿತಾಂಶ ದಾಖಲಾಗಿದ್ದು,ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 59 ವಿದ್ಯಾರ್ಥಿಗಳ ಪೈಕಿ 6 ಅತ್ಯುನ್ನತ ಶ್ರೇಣಿ, 39 ಪ್ರಥಮ ಶ್ರೇಣಿ, 8 ದ್ವಿತೀಯ ಶ್ರೇಣಿ, 1 ತೃತೀಯ ಶ್ರೇಣಿ ಪಡೆಯುವುದರ ಮೂಲಕ ಶೇಕಡಾ 92 ಫಲಿತಾಂಶ ದಾಖಲಾಗಿದೆ. ಬಹುತೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುತ್ತಿರುವ ಈ ಸಂಸ್ಥೆಯಲ್ಲಿ ಈ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕ ಉಪನ್ಯಾಸಕೇತರ ವರ್ಗದವರನ್ನು ಸಂಸ್ಥೆಯ ಆಡಳಿತ ಮಂಡಳಿ ಅಭಿನಂದಿಸಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter