Published On: Wed, Apr 3rd, 2019

RCB ಮಗದೊಮ್ಮೆ ಕುಸಿತ

ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಗದೊಮ್ಮೆ ಕುಸಿತವನ್ನು ಕಂಡಿದೆ.
ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಉತ್ತಮ ಆರಂಭ ಪಡೆದರೂ ಸ್ಟಾರ್ ಆಟಗಾರರ ವೈಫಲ್ಯದಿಂದಾಗಿ ಮಧ್ಯಂತರ ಅವಧಿಯಲ್ಲಿ ಹಿನ್ನಡೆಯನ್ನು ಅನುಭವಿಸಿತು.
ಸತತ ಮೂರು ಸೋಲುಗಳಿಗೆ ಶರಣಾಗಿರುವ ಆರ್‌ಸಿಬಿ, ಸ್ಟಾರ್ ಆಟಾಗಾರರಾದ ಎಬಿ ಡಿ ವಿಲಿಯರ್ಸ್ ಹಾಗೂ ನಾಯಕ ವಿರಾಟ್ ಕೊಹ್ಲಿರನ್ನು ಅತಿ ಹೆಚ್ಚು ನೆಚ್ಚಿಕೊಂಡಿತ್ತು.
ಆದರೆ ರಾಜಸ್ಥಾನ್ ತಂಡದಲ್ಲಿ ಆಡುತ್ತಿರುವ ಕನ್ನಡಿಗ ಬೌಲರ್ ಶ್ರೇಯಸ್ ಗೋಪಾಲ್, ಅಪಾಯಕಾರಿ ಕೊಹ್ಲಿ ಹಾಗೂ ವಿಲಿಯರ್ಸ್ ವಿಕೆಟುಗಳನ್ನು ಕಬಳಿಸುವ ಮೂಲಕ ಆರ್‌ಸಿಬಿ ಓಟಕ್ಕೆ ಕಡಿವಾಣ ಹಾಕಿದರು.
ಆರ್‌ಸಿಬಿ ತಂಡದಲ್ಲಿ ಕನ್ನಡಿಗರ ಅಭಾವ ಎದ್ದು ಕಾಣುತ್ತಿದೆ. ಅಲ್ಲದೆ ಕರ್ನಾಟಕದ ಆಟಗಾರರು ಐಪಿಎಲ್‌ನಲ್ಲಿ ಇತರೆಲ್ಲ ತಂಡಗಳ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಹಿಂದೊಮ್ಮೆ ಹರಾಜಿನಲ್ಲಿ ಕನ್ನಡಿಗ ಆಟಗಾರರನ್ನು ಕಡೆಗಣಿಸಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

IMG-20190402-WA0023 (1)
ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಏಕೈಕ ಕನ್ನಡಿಗ ದೇವದತ್ ಪಡಿಕ್ಕಲ್ ಮಾತ್ರ ಆರ್‌ಸಿಬಿ ತಂಡನವನ್ನು ಪ್ರತಿನಿಧಿಸುತ್ತಿದ್ದಾರೆ. ಒಟ್ಟಿನಲ್ಲಿ ಆರ್‌ಸಿಬಿಗೆ ಕನ್ನಡಿಗ ಆಟನಿಂದಲೇ ಕಂಟಕ ಎದುರಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter