Published On: Tue, Apr 2nd, 2019

`ಡಾ| ಶಿವರಾಮ ಭಂಡಾರಿ ಜೀವನ ಚರಿತ್ರೆ’

ಧರ್ಮಸ್ಥಳ: ಶೀಘ್ರದಲ್ಲೇ ಬಿಡುಗಡೆ ಗೊಳ್ಳುವ `ಡಾ| ಶಿವರಾಮ ಭಂಡಾರಿ ಜೀವನ ಚರಿತ್ರೆ’ ಕೃತಿಗೆ ಶುಭಾರೈಕೆ ಯಾಚಿಸಿ ಡಾ| ವೀರೇಂದ್ರ ಹೆಗ್ಗಡೆ ಅವರಿಗೆ ಸಾಂಪ್ರದಾಯಿಕ ಮನವಿ. ಹೇರ್ ಸ್ಟೈಲೋ ಮೂಲಕ ಅಂತರಾಷ್ಟ್ರೀಯ ಹಿರಿಮೆಗೆ ಪಾತ್ರರಾಗಿರುವ ಮುಂಬಯಿನ ಖ್ಯಾತ ಕೇಶ ವಿನ್ಯಾಸಕಾರ, ಶಿವಾ’ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೃಷ್ಣ ಭಂಡಾರಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಕಳೆದ ಶುಕ್ರವಾರ (ಮಾ.29) ಭೇಟಿಗೈದು ಶೀಘ್ರದಲ್ಲೇ ಬಿಡುಗಡೆ ಗೊಳ್ಳುವ ತನ್ನ ಜೀವನ ಚರಿತ್ರೆ ಕೃತಿಗೆ ಶುಭಾರೈಕೆ ಯಾಚಿಸಿ ಸಾಂಪ್ರದಾಯಿಕವಾಗಿ ಬಿನ್ನಹ ಗೈದರು.

Shivaram Bhandary @ Dharmasthala A2

ಕಾರ್ಕಳ ಅತ್ತೂರು ಗ್ರಾಮದ ಹಳ್ಳಿ ಹುಡುಗನೋರ್ವ ತನ್ನ ಸಮುದಾಯದ ಕುಲಕಸಬು ಕೇಶ ಛೇದನವನ್ನೇ ಜೀವನ ಉದ್ಯಮವಾಗಿಸಿ ವೃತ್ತಿನಿಷ್ಠೆಯಿಂದಲೇ ಗೌರವ ಡಾಕ್ಟರೇಟ್‍ಗೆ ಭಾಜನರಾಗಿ ಸದ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿರುವ ಶಿವರಾಮ ಭಂಡಾರಿ ಅವರ ಸಾಧನೆಗೆ ಡಾ| ಹೆಗ್ಗಡೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಪ್ರೊ| ಎಂ.ಪಿ ಶ್ರೀನಾಥ್ ಅರಸಿನಮಕ್ಕಿ, ಪತ್ರಕರ್ತ ಆರೀಫ್ ಕಲಕಟ್ಟಾ ಉಪಸ್ಥಿತರಿದ್ದರು.

Shivaram Bhandary @ Dharmasthala A1

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter