Published On: Thu, Mar 21st, 2019

ಶ್ರೀ ರಾಮ ನಾಮ ಜಪ ಯಜ್ಞ ನಡೆಯುವ ಬೀಡು ಗದ್ದೆಯಲ್ಲಿ ಚಪ್ಪರ ಮುಹೂರ್ತ

 ಬಂಟ್ವಾಳ:  ಶ್ರೀ ರಾಮ ನಾಮ  ಜಪ ಯಜ್ಞ ನಡೆಯುವ  ಕಳ್ಳಿಗೆ ಗ್ರಾಮ ದ ಪೆರಿಯೋಡು  ಬೀಡು ಗದ್ದೆಯಲ್ಲಿ  ಚಪ್ಪರ ಮುಹೂರ್ತ  ಮಾ.21 ರಂದು ಬೆಳಿಗ್ಗೆ 7:30 ಕ್ಕೆ  ನಡೆಯಿತು . 60×60 ಪ್ರದಾನ ಯಜ್ಞ ಮಂಟಪ ತೆಂಗಿನ   ಮಡಲಿ ನ ಸಾಂಪ್ರದಾಯಿಕ   ಚಪ್ಪರ  ವನ್ನು ಗುತ್ತಿಗೆದಾರ ರಾದ ಕೆ ರಾಜೀವ ಕೈಕಂಬ ರವರು ವಿಶೇಷ ಮುತುವರ್ಜಿಯಿಂದ ನಿರ್ಮಿಸಲಿದ್ದಾರೆ . ಧ್ವಜ ಆಯ ದ ಚಪ್ಪರದಲ್ಲಿ ದಶಾವತಾರ ವನ್ನು ಪ್ರತಿಬಿಂಬಿಸುವಂತೆ  ಒಂದು ಪ್ರದಾನ ಕುಂಡ ಸೇರಿ 10 ಯಜ್ಞ ಕುಂಡಗಳು  ನಿರ್ಮಾಣ ವಾಗಲಿದೆ . ಪೆರಿಯೋಡು  ಬೀಡುವಿನ ಗದ್ದೆ ವಿಶಾಲ ವಾಗಿದ್ದು ಸುಮಾರು ಹತ್ತು ಸಾವಿರ ಜನರಿಗೆ ಕುಳಿತುಕೊಳ್ಳುವ ಪ್ರತ್ಯೇಕ ಚಪ್ಪರ ವ್ಯವಸ್ಥೆ ನಿರ್ಮಾಣವಾಗಲಿದೆ . ಪಕ್ಕದ ಗದ್ದೆಗಳಲ್ಲಿ ಪಾರ್ಕಿಂಗ್ , ಪಾಕ ಶಾಲೆ , ಭೋಜನ ಶಾಲೆಗಳು ನಿರ್ಮಾಣವಾಗಲಿದೆ ಎಂದು  ಶ್ರೀ ರಾಮ ನಾಮ ತಾರಕ   ಜಪ ಯಜ್ಞ ಸಮಿತಿ ಅಧ್ಯಕ್ಷರಾದ ತೇವು ತಾರಾನಾಥ್ ಕೊಟ್ಟಾರಿ ಯವರು ಮಾಹಿತಿ ನೀಡಿದರು

IMG_0385news

   ಈ ಸಂದರ್ಭ ದಲ್ಲಿ  ಶ್ರೀ ರಾಮ ನಾಮ ತಾರಕ   ಜಪ ಯಜ್ಞ ಸಮಿತಿ  ಸಂಚಾಲಕರಾದ ದಾಮೋದರ ನೆತ್ತರಕೆರೆ , ಕಾರ್ಯದರ್ಶಿ ಪ್ರವೀಣ್ ಕುಮಾರ್ ಜ್ಯೋತಿಗುಡ್ಡೆ ,   ನಿವೃತ್ತ ಪೊಲೀಸ್ ಅಧಿಕಾರಿ ಎಂ ಆರ್ ನಾಯರ್  ಗಣ್ಯರುಗಳಾದ ರಾಮದಾಸ್ ಕೋಟ್ಯಾನ್ ಮಜಿ, ನಾರಾಯಣ ನಾಯ್ಕ್ ಜ್ಯೋತಿ ಗುಡ್ಡೆ , ಭಾಸ್ಕರ ಚೌಟ ಕುಮುಡೇಲು , ಜ್ಯೋತಿಂದ್ರ ಶೆಟ್ಟಿ ಮುಂಡಾಜೆ , ನವೀನಚಂದ್ರ ಶೆಟ್ಟಿ ಮುಂಡಾಜೆ , ಸಂತೋಷ್ ನೆತ್ತರಕೆರೆ ,ಹರಿಶ್ಚಂದ್ರ  ಆಳ್ವ ಪದೆಂಜಾರು,  ನವೀನ್ ಕಲ್ಲಗುಡ್ಡೆ , ಯೋಗೀಶ್ ಕೋಟ್ಯಾನ್ , ಜಗದೀಶ್ ಕುಮುಡೇಲು , ಧೀರಜ್ ಮಾರಿಪಳ್ಳ , ಹರೀಶ್ ಆಚಾರ್ಯ , ಮನೋಹರ್ ಕಂಜತ್ತೂರ್ , ಮಹಿಳಾ ಸಮಿತಿ ಅಧ್ಯಕ್ಷೆ ಲಾವಣ್ಯ , ಉದಯ ಕುಮಾರ್ ಜ್ಯೋತಿಗುಡ್ಡೆ , ದಿನೇಶ್ ತುಂಬೆ,   ಮತ್ತಿತರರು ಉಪಸ್ಥಿತರಿದ್ದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter