Published On: Sun, Sep 23rd, 2018

ಇಲೈಕ ಯಾ ರಸೂಲಲ್ಲಾಹ ಮೀಲಾದ್ – ಕಾನ್ಫರನ್ಸ್-2018 ಸ್ವಾಗತ ಸಮಿತಿ ರಚನೆ

ಕುವೈತ್ : ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ನಡೆಯಲಿರುವ ಇಲೈಕ ಯಾ ರಸೂಲಲ್ಲಾಹ ಮಿಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿಯ ರಚನೆಯು ಕೆಸಿಎಫ್ ಕುವೈತ್ ರಾಷ್ಟ್ರೀಯ ಅಧ್ಯಕ್ಷ ರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಉಸ್ತಾದರ ಘನ ಅಧ್ಯಕ್ಷತೆಯಲ್ಲಿ ದುವಾದೊಂದಿಗೆ ಕುವೈತ್ ಸಿಟಿಯಲ್ಲಿರುವ ನಶಾತ್ ಹಾಲ್ ನಲ್ಲಿ ಸೆ.21ರಂದು ಮಗ್ರಿಬ್ ನಮಾಝ್ ನ ನಂತರ ನಡೆಯಿತು.

kcf (4)

ರಾಷ್ಟ್ರೀಯ ಶಿಕ್ಷಣ ವಿಭಾಗದ ಅಧ್ಯಕ್ಷ ಬಹುಮಾನ್ಯ ಫಾರೂಕ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆಸಿಎಫ್ ಕುವೈತ್ ಸೌತ್ ಝೋನ್ ಅಧ್ಯಕ್ಷ ಬಹುಮಾನ್ಯ ಶಾಹುಲ್ ಹಮೀದ್ ಸಅದಿ ಝುಹ್ರಿ ಉಸ್ತಾದರು ಮುಹರ್ರಂ ತಿಂಗಳ ಬಗ್ಗೆ ತಿಳಿಸಿದರು.

kcf (5)
ನವೆಂಬರ್ 30 ರಂದು ನಡೆಯಲಿರುವ ಇತಿಹಾಸದಲ್ಲಿ ಆಧ್ಯಾತ್ಮಿಕ ಹಾಗೂ ಲೌಕಿಕ ಇವೆರಡರಲ್ಲೂ ನಾಯಕರಾದ ಮುಹಮ್ಮದ್ ಮುಸ್ತಫಾ (ಸ.ಅ)ರ ಮೇಲಿನ ಅಪಾರ ಪ್ರೇಮ ಪ್ರಕಟಿಸುವ “ಇಲೈಕ ಯಾ ರಸೂಲಲ್ಲಾಹ” “ಸಂದೇಶ ವಾಹಕರೆ ತಮ್ಮೆಡಗೆ” ಎಂಬ ಘೋಷ ವಾಕ್ಯ ದೊಂದಿಗೆ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸೈಯದ್ ಕುಟುಂಬದ ಧ್ರುವ ತಾರೆ,ತಾಜುಲ್ ಉಲಮಾ ರ ಸುಪುತ್ರರ ದ.ಕ ಸಂಯುಕ್ತ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರ ದುವಾಶಿರ್ವಚನ ನೀಡಲಿದ್ದಾರೆ. ಹುಬ್ಬು ರಸೂಲ್ ಮುಖ್ಯ ಪ್ರಭಾಷಣಕಾರರಾಗಿ ಬಹುಮಾನ್ಯ ಫಾರೂಕ್ ನಇಮಿ ಆಗಮಿಸಲಿದ್ದಾರೆ.

kcf (3)
ಈ ಸ್ವಾಗತ ಸಮಿತಿಯ ಅಧ್ಯಕ್ಷರಾದ ಆಗಿ ಜನಾಬ್ ಯಾಕೂಬ್ ಕಾರ್ಕಳ,ಕನ್ವೀನರ್ ಆಗಿ ಜನಾಬ್ ತೌಫೀಕ್ ಅಡ್ಡೂರ್ ಮತ್ತು ಕೋಶಾಧಿಕಾರಿ ಆಗಿ ಜನಾಬ್ ಮುಸ್ತಫಾ ಉಳ್ಳಾಲ ಅವರನ್ನು ಆಯ್ಕೆ ಮಾಡಲಾಯಿತು.
ರಾಷ್ಟ್ರೀಯ ಶಿಕ್ಷಣ ಕನ್ವೀನರ್ ಬಹುಮಾನ್ಯ ಬಾದುಷ ಸಖಾಫಿ ಹಾಗೂ ಕೆಸಿಎಫ್ ಅಂತರರಾಷ್ಟ್ರೀಯ ಆಡಳಿತ ವಿಭಾಗದ ಕನ್ವೀನರ್ ಬಹುಮಾನ್ಯ ಹುಸೈನ್ ಎರ್ಮಾಡ್ ರವರು ಉಪಸ್ಥಿತರಿದ್ದರು. ಕೆಸಿಎಫ್ ಕುವೈತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜನಾಬ್ ತೌಫೀಕ್ ಅಡ್ಡೂರ್ ಸ್ವಾಗತಿಸಿದರು.

kcf (1)
ಕೆಸಿಎಫ್ ಉಲಮಾ ನೇತ್ರತ್ವದಲ್ಲಿ ಸಲಹಾ ಸಮಿತಿ ರಚನೆ
ಪ್ರಚಾರ ಸಮಿತಿ,ಜಾಹಿರಾತು ಸಮಿತಿ,ವಿಶೇಷಾಂಕ ಪ್ರತಿ ಸಂಪಾದಕ ಸಮಿತಿ,ವಾಹನ,ಆಹಾರ ವಿಭಾಗದ ಸಮಿತಿ ರಚಿಸಿ ಚೇಯರ್ಮ್ಯಾನ್,ಕನ್ವೀನರ್ ರನ್ನು ಆಯ್ಕೆಮಾಡಲಾಯಿತು. ಹಾಗೂ ಕಾರ್ಯಕ್ರಮದ ಕೂಪನ್ ಹಾಗೂ ಪೊಸ್ಟರ್ ಈ ಸಂದರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು. ಕೆಸಿಎಫ್ ರಾಷ್ಟ್ರೀಯ ನಾಯಕರು,ಝೋನ್,ಸೆಕ್ಟರ್ ವಿಭಾಗದ ನಾಯಕರು ಭಾಗವಹಿಸಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter