ಜೀವನದಲ್ಲಿಜ್ಞಾನಾರ್ಜನೆ ಶ್ರೇಷ್ಠ ಕಾರ್ಯವಾಗಿದೆ: ಗೋವಿಂದದಾಸ ಕುತ್ತೆತ್ತೂರು
ಸುರತ್ಕಲ್: ವಿದ್ಯಾರ್ಥಿಗಳ ಶೈಕ್ಷಣಿಕಅಧ್ಯಯನಕ್ಕೆ ನೀಡುವದಾನ ಶ್ರೇಷ್ಠತರವಾಗಿದ್ದು, ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಭಕ್ತ ಶ್ರೀ ಕುತ್ತೆತ್ತೂರುಗೋವಿಂದದಾಸಚಾರಿಟೇಬಲ್ ಟ್ರಸ್ಟ್ ಪೌಂಡೇಶನ್‍ನ ಅಧ್ಯಕ್ಷ ಗೋವಿಂದದಾಸಕುತ್ತೆತ್ತೂರು ಹೇಳಿದರು.
ಅವರು ಸುರತ್ಕಲ್‍ಗೋವಿಂದದಾಸಕಾಲೇಜಿನಲ್ಲಿಗೋವಿಂದದಾಸ ಪದವಿಪೂರ್ವ ಹಾಗೂ ಗೋವಿಂದದಾಸಕಾಲೇಜಿನ ವಿದ್ಯಾರ್ಥಿಗಳಿಗೆ ಭಕ್ತಕುತ್ತೆತ್ತೂರುಗೋವಿಂದದಾಸಚಾರಿಟೇಬಲ್ ಟ್ರಸ್ಟ್ ಪೌಂಡೇಶನ್ ವತಿಯಿಂದ ನೀಡುತ್ತಿರುವ ಶ್ರೀ ಹಯಗ್ರೀವಆಚಾರ್ಯ ಮತ್ತು ಶ್ರೀಮತಿ ಭಾರತಿದೇವಿ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಮಾನವ ಜೀವನದಲ್ಲಿಜ್ಞಾನಾರ್ಜನೆ ಶ್ರೇಷ್ಠ ಕಾರ್ಯವಾಗಿದ್ದು, ಜ್ಞಾನ ಸಂಪತ್ತಿನಿಂದ ಸಕಲ ಲೌಕಿಕ ಹಾಗೂ ಅಲೌಕಿಕ ಸುಖಗಳನ್ನು ಪಡೆಯಲು ಸಾಧ್ಯವಿದೆ. ವಿದ್ಯಾರ್ಥಿಗಳುಅಧ್ಯಯನದೊಂದಿಗೆ ಪಠ್ಯೇತರಚಟುವಟಿಕೆ ಹಾಗೂ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದರು.
ವಿದ್ಯಾದಾಯಿನೀ ಪ್ರೌಢಶಾಲೆಯ ಶಿಕ್ಷಕ ವಿದ್ವಾನ್ ದಿವಸ್ಪತಿ ಮಾತನಾಡಿ, ಶಾಲಾ ಋಣವೆಂಬುದುಅನನ್ಯವಾಗಿದ್ದು, ಧನಾರ್ಜನೆಯಒಂದು ಪಾಲನ್ನುದಾನ ಕಾರ್ಯಗಳಿಗೆ ನೀಡುವ ಮನೋಭಾವ ಮೂಡಿ ಬರಬೇಕೆಂದರು. ಹಿಂದೂ ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಎಂ.ವೆಂಕಟ್ರಾವ್‍ಅರ್ಹ ವಿದ್ಯಾಥರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆಯ ಮೂಲಕ ಗೋವಿಂದದಾಸಚಾರಿಟೇಬಲ್ ಟ್ರಸ್ಟ್ ಶ್ಲಾಘನೀಯಕಾರ್ಯ ನಡೆಸುತ್ತಿದೆಂದರು.
ಟ್ರಸ್ಟ್‍ನ ಕೋಶಾಧಿಕಾರಿ ಡಾ| ನರಹರಿದಾಸ್ ವಿದ್ಯಾರ್ಥಿವೇತನಗಳನ್ನು ವಿತರಿಸಿ ಶುಭ ಹಾರೈಸಿದರು.
ಗೋವಿಂದದಾಸ ಪದವಿ ಕಾಲೇಜು ಹಾಗೂ ಪದವಿಪೂರ್ವ ಕಾಲೇಜುಗಳ ಮದ್ಯಾಹ್ನದಉಚಿತ ಭೋಜನ ನಿಧಿಗೆಟ್ರಸ್ಟ್‍ನ ವತಿಯಿಂದರೂ.60000/-ವನ್ನುಗೋವಿಂದದಾಸರು ಹಸ್ತಾಂತರಿಸಿದರು.
ರೂಪಾಯಿ ಮೂರು ಲಕ್ಷ ಮೊತ್ತದ ವಿದ್ಯಾರ್ಥಿ ವೇತನಗಳನ್ನು ಹಾಗೂ ಸಂಸ್ಕøತ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಕ ವಿದ್ಯಾರ್ಥಿ ವೇತನಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಗೋವಿಂದದಾಸಕಾಲೇಜಿನ ಪ್ರಾಂಶುಪಾಲ ಡಾ. ಬಿ. ಮುರಳೀಧರ ರಾವ್, ಆಡಳಿತಾತ್ಮಕ ನಿರ್ದೇಶಕ ಪಿ.ಮಧುಸೂಧನರಾವ್, ಉಪಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ ಪಿ., ಗೋವಿಂದದಾಸ ಪದವಿಪೂರ್ವಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮಿ ಪಿ. ಉಪಸ್ಥಿತರಿದ್ದರು.
ಟ್ರಸ್ಟ್‍ನ ಸದಸ್ಯರಮೇಶ್‍ರಾವ್ ಮಧ್ಯ ಸ್ವಾಗತಿಸಿದರು. ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ವೈಲೆಟ್ ಮಿರಾಂಡ, ಜಯಂತಿ ಬಂಗೇರ ವಿದ್ಯಾರ್ಥಿ ವೇತನ ಪಡೆದವರ ಪಟ್ಟಿಯನ್ನು ವಾಚಿಸಿದರು. ಡಾ. ಆಶಾಲತಾಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್‍ನ ಕಾರ್ಯದರ್ಶಿ ಡಾ.ಕೆ.ರಾಜಮೋಹನರಾವ್ ವಂದಿಸಿದರು.