Published On: Sat, Aug 18th, 2018

ಬ್ರಹ್ಮಾನಂದ ಸ್ವಾಮೀಜಿ ಪಟ್ಟಾಭೀಷೇಕ ದಶಮಾನೋತ್ಸವ ಸಭೆ : ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ:ದಕ್ಷಿಣದ ಅಯೋಧ್ಯೆಯೆಂದೇ ಪ್ರಸಿದ್ಧವಾದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸನಿಹದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಮಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಪಟ್ಟಾಭೀಷೇಕ ದಶಮಾನೋತ್ಸವ ಸಂಭ್ರಮ ಸೆ.3ರಂದು ನಡೆಯಲಿದ್ದು, ಶ್ರೀರಾಮ ತಾರಕಮಂತ್ರ ಯಜ್ಞ ಮತ್ತು ಧರ್ಮ ಸಂಸದ್‍ನಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳೋಣ ಎಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ ಕರೆಯಿತ್ತರು.

Billawar Kanyadi Dharma Sansad MANAVI 5

ಧರ್ಮ ಸಂಸದ್ ನಿಮಿತ್ತ ಸಮಾಲೋಚನಾ ಸಭೆಯು ಆ.17 ಶುಕ್ರವಾರ ಸಂಜೆ ಬಿಲ್ಲವರ ಭವನದಲ್ಲಿ ಆಯೋಜಿಸಲಾಗಿತ್ತು. ಶ್ರೀ ಬ್ರಹ್ಮಾನಂದ ಸ್ವಾಮೀಜಿ ಪಟ್ಟಾಭೀಷೇಕ ದಶಮಾನೋತ್ಸವ ಆಮಂತ್ರಣ ಪತ್ರಿಕೆ ಚಂದ್ರಶೇಖರ್ ಪೂಜಾರಿ ಬಿಡುಗಡೆ ಗೊಳಿಸಿದರು.

Billawar Kanyadi Dharma Sansad MANAVI A1

ದೇವ ಭೂಮಿ, ಪಾವನ ಭೂಮಿಯೆಂದೇ ಪ್ರಸಿದ್ಧಿ ಹೊಂದಿದ್ದ ಭರತ ಖಂಡದಲ್ಲಿ ಅದೆಷ್ಟೋ ಸಾಧು ಸಂತರು, ಸಿದ್ಧ ಪುರುಷರು, ಸನಾತನ ಹಿಂದೂ ಧರ್ಮದ ಉತ್ಥಾನಕ್ಕಾಗಿ ಬಾಳಿ ಬೆಳಗಿರುವ ಈ ಪುಣ್ಯ ಭೂಮಿಯಲ್ಲಿ ಜನಿಸಿರುವ ಕನ್ಯಾಡಿ ರಾಮಕ್ಷೇತ್ರದಲ್ಲಿ ದೈವೈಕ್ಯ ಶ್ರೀ ಆತ್ಮನಂದ ಸರಸ್ವತಿ ಸ್ವಾಮೀಜಿ ನಿರ್ಮಿಸಿದ ದೇಗುಲವು ನಮ್ಮೆಲ್ಲರ ಹೆಮ್ಮೆಯ ಧಾರ್ಮಿಕ ತಾಣವಾಗಿದೆ. ಅವರ ಉತ್ತರಾಧಿಕಾರಿಯಾಗಿ ದೀಕ್ಷೆ ಪಡೆದ ಬ್ರಹ್ಮನಂದಾ ಸ್ವಾಮೀಜಿ ಗುರುವರ್ಯರ ಧ್ಯೇಯೋದ್ದೇಶಗಳನ್ನು ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕಾಯಕಗಳೊಂದಿಗೆ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಪೂರೈಸಿ ಇದೀಗ ಹತ್ತು ವರ್ಷಗಳ ಸೇವೆಯಲ್ಲಿ ಮುನ್ನಡೆಯುತ್ತಿದ್ದಾರೆ. ತನ್ನ ಪಟ್ಟಾಭಿಷೇಕದ ದಶಸಂಭ್ರದ ಪ್ರಯುಕ್ತ ರಾಷ್ಟ್ರೀಯ ಧರ್ಮ ಸಂಸದ್ 2018ರ ಮುಖೇನ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಕ್ರಾಂತಿಯ ಸಲುವಾಗಿ ಮಹಾತ್ ಕಾರ್ಯವನ್ನು ಕೈಗೊಂಡಿರುವುದು ಅಭಿನಂದನೀಯ. ಅಂದು ಹಿಮಾಲಯದಿಂದ ಸುಮಾರು ಎರಡು ಸಾವಿರಕ್ಕೂ ಅಧಿಕ ಸಾಧುಸಂತರು ಹಾಗೂ ರಾಜಕೀಯ ನೇತಾರರು, ಸಾಮಾಜಿಕ ಧುರೀಣರು ಪಾಲ್ಗೊಳ್ಳುವರು ಎಂದು ಗಂಗಾಧರ ಜೆ.ಪೂಜಾರಿ ಕಾರ್ಯಕ್ರಮದ ಬಗ್ಗೆ ಸ್ಥೂಲವಾದ ಮಾಹಿತಿಯನ್ನಿತ್ತರು.

Billawar Kanyadi Dharma Sansad MANAVI 4

ಬ್ರಹ್ಮಾನಂದ ಸ್ವಾಮೀಜಿ ಅವರ ಇದೊಂದು ಒಳ್ಳೆಯ ಯೋಚನೆ ಮತ್ತು ಯೋಜನೆಯಾಗಿದೆ. ಧನ ಸಹಾಯ, ಸ್ವಯಂ ಸೇವೆ ಮಾಡಿಯಾದರೂ ಇಂತಹ ಪುಣ್ಯಧಿ ಕಾರ್ಯಕ್ರಮವನ್ನು ಫಲಪ್ರದ ಪಡಿಸಬೇಕು. ಲೋಕ ಕಲ್ಯಾಣಕ್ಕಾಗಿ ನಡೆಸಲ್ಪಡುವ ಈ ಕಾರ್ಯಕ್ರಮಗಳಿಂದ ಸ್ವಸಮಾಜದ ಗೌರವಕ್ಕೂ ಪೂರಕವಾಗಿದೆ ಎಂದು ನಿತ್ಯಾನಂದ್ ತಿಳಿಸಿದರು.

ಇದೊಂದು ಬೃಹತ್ ಧರ್ಮರಕ್ಷಣಾ ಕಾರ್ಯಕ್ರಮ. ಸಮಾಜದ ಉನ್ನತೀಕರಣದ ಸಿದ್ಧಾಂತವನ್ನು ಸಿದ್ಧಿಗೊಳಿಸುವ ಕಾರ್ಯಕ್ರಮವೂ ಹೌದು. ಇದನ್ನು ನಾವೆಲ್ಲರೂ ಜವಾಬ್ದಾರಿಯಿಂದ ನಿಭಾಯಿಸಿ ಯಶಗೊಳಿಸಿದಾಗ ಅದರ ಪುಣ್ಯ ನಮಗೂ ಫಲಿಸುವುದು. ಭಾರತೀಯ ಮೂಲ ಸಂಸ್ಕೃತಿಯನ್ನು ಪುನರುಸ್ಥಾನದ ಉದ್ದೇಶವೇ ಈ ಧರ್ಮ ಸಂಸದ್‍ನದ್ದಾಗಿದೆ ಎಂದು ಎಲ್.ವಿ ಅವಿೂನ್ ಅಭಿಪ್ರಾಯ ವ್ಯಕ್ತಪಡಿಸಿದರು.

Billawar Kanyadi Dharma Sansad MANAVI 2

ಧರ್ಮ ಸಂಸದ್ ಮುಂಬಯಿ ಸಮಿತಿ ಸಂಚಾಲಕರುಗಳಾದ ಗಂಗಾಧರ ಜೆ.ಪೂಜಾರಿ, ನಿತ್ಯಾನಂದ ಡಿ.ಕೋಟ್ಯಾನ್, ಸಂತೋಷ್ ಕೆ.ಪೂಜಾರಿ ಮಲಾಡ್, ಬಿಲ್ಲವರ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ ಎಲ್.ಅವಿೂನ್, ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ಭಾಸ್ಕರ್ ಎಂ.ಸಾಲ್ಯಾನ್, ನ್ಯಾಯವಾದಿ ಎಸ್.ಬಿ ಅವಿೂನ್, ಉದ್ಯಮಿಗಳಾದ ಯಶೋಧ ಎನ್.ಟಿ ಪೂಜಾರಿ, ನಾರಾಯಣ ಕೆ.ಸುವರ್ಣ ಕಲ್ವಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Billawar Kanyadi Dharma Sansad MANAVI 9
ಸಭೆಯಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ಹರೀಶ್ ಜಿ.ಅವಿೂನ್, ಶ್ರೀನಿವಾಸ ಆರ್.ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಯುವಾಭ್ಯುದಯ ಉಪ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎಂ.ಕೋಟ್ಯಾನ್ ಸೇರಿದಂತೆ ಅಸೋಸಿಯೇಶನ್‍ನ ಸ್ಥಳೀಯ ಸಮಿತಿಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಸದಸ್ಯರನೇಕರು ಹಾಜರಿದ್ದರು. ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್ ಸ್ವಾಗತಿಸಿ ಪ್ರಸ್ತವನೆಗೈದು ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter