Published On: Mon, Jul 30th, 2018

ವಿಶ್ವದ ಅಗ್ರಮಾನ್ಯ ಪಟ್ಟಿಯಲ್ಲಿ ಕಳರಿಪಯಟ್ಟು

ಕಲೆ ಎಂಬುದು ಭಾರತದ ಮಣ್ಣಲ್ಲಿ ಬೆರೆತು ಹೋಗಿದೆ. ಪ್ರತಿಯೊಂದು ಪ್ರದೇಶದಲ್ಲಿ ಅದರದ್ದೇ ಆದ ಕಲೆಯು ತನ್ನ ಇರುವಿಕೆಯನ್ನು ತೋರಿಸುತ್ತದೆ. ಸಂಸ್ಕøತಿ ಸಂಪ್ರದಾಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವ ನಮ್ಮ ಭಾರತದಲ್ಲಿ ಕಲೆಯು ಅಚ್ಚಳಿಯಾಗಿದೆ ಉಳಿದಿದೆ. ಇಂತಹ ಕಲೆಗಳಲ್ಲಿ ಒಂದಾದ ಕಲೆಯೆಂದರೆ ಕಳರಿಪಯಟ್ಟು. ಕೇರಳದ ಈ ಕಲೆಗೆ ಜಾಗತೀಕ ಮಟ್ಟದಲ್ಲಿ ಸ್ಥಾನ ಸಿಗಬೇಕು ಎನ್ನುವ ಅಭಿಲಾಷೆಯಿಂದ ಭಾರತೀಯ ಚಲನಚಿತ್ರ ನಟ ವಿಧ್ಯುತ್ ಜಮ್ಮಿವಾಲ್ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಕೇರಳ ಸಂಸ್ಕøತಿ ಲೇಪನದ ಭಯಾನಕ ಯುದ್ಧಕಲೆ ಇದಾಗಿದ್ದು, ಸಾಮಾಜಿಕ ರಕ್ಷಣೆಗೂ ಸಾಕ್ಷಿಯಾಗಬೇಕು ಎಂದು ಹೇಳಿದ್ದಾರೆ.

kalaripayattu
ಇತ್ತೀಚೆಗೆ ಅಮೇರಿಕಾದಲ್ಲಿ ಜಗತ್ತಿನಾದ್ಯಂತ ಉನ್ನತ ಯುದ್ದಕಲೆ ಮತ್ತು ಕಲಾವಿದರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೇರಳದ ‘ಕಳರಿಪಯಟ್ಟು’ ಕೂಡ ಇದ್ದು, ಗೌರವ ಸ್ಥಾನ ಪಡೆದುಕೊಂಡಿದೆ.
ತುಫಾಕಿ, ಕಮಾಂಡೊ ಸರಣಿ ಚಿತ್ರಗಳಲ್ಲಿ ನಟಿಸಿರುವ ಯಾಕ್ಷನ್ ಹೀರೋ ವಿಧ್ಯುತ್ ಜಮ್ಮಿವಾಲ್, ತಮ್ಮ ಮುಂದಿನ ಚಿತ್ರದಲ್ಲಿ ಈ ಕಲೆಯನ್ನು ಬಳಸಿಕೊಳ್ಳಲಿದ್ದಾರೆ. ಅದಕ್ಕಾಗಿ ಈ ಕಲೆಯ ಬಗ್ಗೆ ಪೂರ್ವ ತಯಾರಿಯಲ್ಲಿ ನಿರತರಾಗಿದ್ದಾರೆ. ಚೆಕ್ ರಸೆಲ್ ನಿರ್ದೇಶನ ಮಾಡಲಿರುವ ‘ಜಂಗ್ಲಿ’ ಚಿತ್ರವನ್ನು ಜಂಗಲ್ ಪಿಕ್ಚರ್ಸ್ ನಿರ್ಮಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್‍ನ ತಯಾರಿಯಲ್ಲಿರುವ ಈ ತಂಡ, ಉತ್ತಮ ಅಪೇಕ್ಷೆಯಲ್ಲಿದೆ. ಏಪ್ರಿಲ್ 5, 2019ರಂದು ವಿಶ್ವದಾದ್ಯಂತ ಈ ಸಿನೆಮಾ ತೆರೆ ಕಾಣಲಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter