Published On: Mon, Jul 30th, 2018

ಹೊಸ ಛಾಯೆ ಮೂಡಿಸಿದ ಮನೋಹರ್ ಜೋಷಿ

ಒಂದು ಚಿತ್ರದಲ್ಲಿ ನಿರ್ದೇಶಕ, ನಿರ್ಮಾಪಕ ಹೀಗೆ ಹಲವು ಸ್ಥಾನಗಳಲ್ಲಿ ಕೆಲಸ ನಡೆಯುತ್ತದೆ. ಅದರಲ್ಲಿಯೂ ಛಾಯಾಗ್ರಾಹಕ ಅತೀ ಪ್ರಮುಖ ಪಾತ್ರ ವಹಿಸುತ್ತಾನೆ. ಕೇವಲ ದೃಶ್ಯದಿಂದಲೇ ಒಂದು ಘಟನೆಯನ್ನು ಪ್ರೇಕ್ಷಕರು ಅರಿತುಕೊಳ್ಳುತ್ತಾರೆ. ಅಂತಹ ಛಾಯಾಗ್ರಹಕರಲ್ಲಿ ಒಬ್ಬರಾದವರು ಮನೋಹರ್ ಜೋಶಿ.

manohar joshi (1)
ಕನ್ನಡ ಚಿತ್ರರಂಗದಲ್ಲಿ “ಸಿಂಪಲ್ ಆಗಿ ಒಂದು ಲವ್ ಸ್ಟೋರಿ” ಹಾಗೂ ಥ್ರಿಲ್ಲರ್ ಚಿತ್ರ “ಅನುಕ್ತಾ” ದಂತಹ ಚಿತ್ರಗಳಿಗೆ ಕೆಲಸ ಮಾಡಿರುವ ಛಾಯಾಗ್ರಾಹಕ ಮನೋಹರ್ ಜೋಷಿ ಅವರು ತಮ್ಮ 14 ವರ್ಷದ ವೃತ್ತಿ ಬದುಕಿನಲ್ಲಿ ಪ್ರೇಕ್ಷಕರಿಗೆ ಅತ್ಯುತ್ತಮ ಕೊಡುಗೆಯನ್ನೇ ನೀಡುತ್ತಾ ಬಂದಿದ್ದಾರೆ. ಇವರು ಸ್ಯಾಂಡಲ್ವುಡ್ನ ಖ್ಯಾತ ನಟರಾದ ಗಣೇಶ್, ನಟಿ
ಶ್ವೇತಾ ಶ್ರೀವಾತ್ಸವ್, ರಕ್ಷಿತ್ ಕುಶಾಲ್ ಮತ್ತಿತರರ ಜೊತೆ ಕೆಲಸ ಮಾಡಿದ್ದಾರೆ.

manohar joshi (2)
ಸದ್ಯ ಮನೋಹರ್ ಜೋಶಿ ಅವರು ನಗರದಲ್ಲಿ ಸುದ್ದಿ ಮಾಡುತ್ತಿದ್ದು, ಹೊಸ ಕಥೆಯತ್ತ ಮುಖ ಮಾಡಿದ್ದಾರೆ. ಹೆಚ್ಚು ವಿಸ್ತಾರ ಹಾಗೂ ಶಕ್ತಿಯುತ ಚಿತ್ರ ಮೈಸೂರು ಮಸಾಲಾ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಸಂಯುಕ್ತ ಹೊರನಾಡು, ಅನಂತನಾಗ್, ಪ್ರಕಾಶ್ ಬೆಳವಾಡಿ ಮತ್ತಿತರರು ಚಿತ್ರದಲ್ಲಿದ್ದಾರೆ.
ಜೋಷಿ ಅವರ ಪ್ರಕಾರ ಸೈಫೈ ಚಿತ್ರದ ಛಾಯಾಗ್ರಹಣ ಸಾಕಷ್ಟು ಸವಾಲಿನದ್ದಾಗಿತ್ತಾದರೂ, ಚಿತ್ರವನ್ನು ಪ್ರೇಕ್ಷಕರ ಮನಮುಟ್ಟುವಂತೆ ನೀಡುವುದು ಇನ್ನೊಂದು ಸವಾಲಾಗಿದೆ. ಈ ಚಿತ್ರದ ಮೂಲಕ ಜನರಿಗೆ ವಿನೂತನ ಚಿತ್ರವೊಂದನ್ನು ನೋಡಲು ಅವಕಾಶ ಸಿಗುತ್ತದೆಎಂಬುದೇ ಆಶಯ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter