ಜೀವ ವೈವಿಧ್ಯ ಉಳಿಸುವುದು ಆದ್ಯ ಕರ್ತವ್ಯ: ಅಬ್ಬಾಸ್ ಆಲಿ
ಬಂಟ್ವಾಳ: ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಅರಣ್ಯ ಪರಿಸರ ಮತ್ತು ಜೀವ ಶಾಸ್ತ್ರ ಇಲಾಖೆ ಹಾಗೂ ತಾ.ಪಂ.ಇವರ ಸಹಯೋಗದೊಂದಿಗೆ ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತಿ ಯ ಜೀವ ವೈವಿಧ್ಯ ಸಮಿತಿಯ ಸದಸ್ಯ ರುಗಳಿಗೆ ತರಬೇತಿ ಕಾರ್ಯಗಾರ ತಾ.ಪಂ.ನ ಎಸ್.ಜಿ.ಆರ್.ಎಸ್.ವೈ.ಸಭಾಂಗಣದಲ್ಲಿ ನಡೆಯಿತು.
ಕಾರ್ಯ ಕ್ರಮದ ಅದ್ಯಕ್ಷ ತೆಯನ್ನು ವಹಿಸಿದ್ದ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ ಜೀವ ವೈವಿಧ್ಯ ತೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕಾದ ಅನಿವಾರ್ಯತೆ ನಮ್ಮ ಮುಂದೆ ಇದೆ. ಈ ಭೂಮಿಗೆ ಪರಸರದ ಸಂರಕ್ಷಣೆ ಅತೀ ಅಗತ್ಯವಾಗಿದೆ. ಜೀವ ವೈವಿಧ್ಯ ಉಳಿಸುವುದು ಕೂಡ ಪ್ರಥಮ ಅಧ್ಯತೆ ಆಗಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಜೀವ ವೈವಿಧ್ಯ ಸಮಿತಿಗಳನ್ನು ರಚಿಸಿ ಪರಿಣಕಾರಿಯಾಗಿ ಕೆಲಸ ಮಾಡಿ, ನಾಗರೀಕರಿಗೆ ಇದರ ಅಗತ್ಯ ವನ್ನು ತಿಳಸಿ ಎಂದು ಹೇಳಿದರು.
ಶಾಲಾ ಮಕ್ಕಳಿಗೆ ಕೂಡಾ ಪರಿಸರ ಸಂರಕ್ಷಣೆ ಮತ್ತು ಜೀವ ವೈವಿಧ್ಯ ನ್ನು ಉಳಿಸಿ ಬೆಳೆಸುವ ಬಗ್ಗೆ ಮಾಹಿತಿ ನೀಡಿ ಎಂದರು. ವೇದಿಕೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ, ತಾ.ಪಂ.ಸದಸ್ಯೆ ಗಾಯತ್ರಿ, ಮಂಡಳಿಯ ತಾಂತ್ರಿಕ ನಿರ್ವಹಣಾ ಅಧಿಕಾರಿ ಅಂಬಿಕಾ, ಮಂಡಳಿಯ ತಾಲೂಕು ಸಂಯೋಜಕಿ ಶ್ವೇತಾ ಕೆ ಉಪಸ್ಥಿತರಿದ್ದರು.
Jeeva vaividya Khate account opening kuritu suttole