Published On: Sat, May 19th, 2018

ಬಿಡುಗಡೆಗೆ ಸಜ್ಜಾಗಿದೆ “ಪ್ರಥಮ್ ಎಂಎಲ್‌ಎ” ಸಿನೆಮಾ

maxresdefault

ಸಿನೆಮಾ: ಆರಂಭದಿಂದಲೂ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದ ಪ್ರಥಮ್ ಅಭಿನಯದ ‘ಎಂಎಲ್‌ಎ’ ಸಿನೆಮಾ ಚಿತ್ರೀಕರಣ ಕಂಪ್ಲೀಟ್ ಆಗಿ ತೆರೆಗೆ ಬರಲು ಸಿದ್ಧವಾಗಿದೆ. ಇತ್ತಿಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದ ಆಡಿಯೋ ಬಿಡುಗಡೆ ಮಾಡಿಸಿದ್ದ ನಿರ್ಮಾಪಕರು ಚಿತ್ರವನ್ನ ತೆರೆಗೆ ತರುವ ಸಿದ್ಧತೆಗಳನ್ನ ಮಾಡಿಕೊಂಡಿದ್ದಾರೆ.

ಮೌರ್ಯ ಆಕ್ಷನ್ ಕಟ್ ಹೇಳಿರುವ ‘ಎಂಎಲ್‌ಎ’ ಸಿನೆಮಾದ ಚಿತ್ರೀಕರಣವನ್ನು ಹೈದ್ರಾಬಾದ್ ನಲ್ಲಿ ನಡೆಸಿದ್ದು, ಅಲ್ಲಿಯವರೇ ಆದ ವೆಂಕಟೇಶ್ ರೆಡ್ಡಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಈಗಾಗಲೇ ಹಾಡುಗಳನ್ನ ಮೆಚ್ಚಿಕೊಂಡಿರುವ ಸಿನೆಮಾ ಪ್ರೇಕ್ಷಕರು ಚಿತ್ರವನ್ನು ಇಷ್ಟ ಪಡುತ್ತಾರೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಪ್ರಥಮ್ ನಾಯಕನಾಗಿರುವ ಚಿತ್ರದಲ್ಲಿ ಸೋನಾಲ್ ಮಾಂಟೇರಿಯೋ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಮಾಳವಿಕಾ ಅವಿನಾಶ್, ಚಂದ್ರಕಲಾ ಮತ್ತಿತ್ತರರು ಅಭಿನಯಿಸಿದ್ದಾರೆ.

ಸದ್ಯ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿರುವ ಸಿನಿಮಾತಂಡ ಜೂನ್ ಎರಡನೇ ವಾರದಲ್ಲಿ ತೆರೆಗೆ ತರುವ ಪ್ರಯತ್ನದಲಿದ್ದಾರೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಎಂಎಲ್‌ಎ ಚಿತ್ರ ಬಾಕ್ಸ್ ಆಫೀಸ್ ನಲ್ಲಿಯೂ ಸೌಂಡ್ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter