Published On: Fri, May 18th, 2018

ಸಮಾಜದಲ್ಲಿ ದಾದಿಯರರ ಪಾತ್ರ ಅಮೂಲ್ಯ: ಡಾ. ಗಣೇಶ್ಕಾಪಮತ್

32332586_1749587935064757_445717944903663616_n

ಉಡುಪಿ: ದಾದಿಯರರ ಸೇವೆ ಅತ್ಯಂತ ಅಮೂಲ್ಯವಾದದ್ದು, ರೋಗಿಗಳನ್ನು ಆರೋಗ್ಯವಂತರನ್ನಾಗಿ ಮಾಡುವಲ್ಲಿ ಅವರ ಪಾತ್ರ ಅನುಪಮ ಎಂದು ಉಡುಪಿ ಮಿಶನ್‍  ಆಸ್ಪತ್ರೆಯ ಹಿರಿಯ ವೈದ್ಯ ಡಾ. ಗಣೇಶ್‍ಕಾಮತ್ ಹೇಳಿದ್ದಾರೆ.

ಉಡುಪಿ ಮಿಶನ್‍ಆಸ್ಪತ್ರೆಯ ನರ್ಸಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ವಿಶ್ವದಾದಿಯರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಜೇಸಿ ವಲಯ ಉಪಾದ್ಯಕ್ಷ ರಾಘವೇಂದ್ರ ಪ್ರಭುಕರ್ವಾಲು ಮಾತನಾಡಿ, ದಾದಿಯರ ಸೇವೆ ಮಾನವೀಯ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ  ಅಮೂಲ್ಯವಾದದ್ದು ಎಂದರು.

ಈ ವೇಳೆ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ಪರ್ಧೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ  ಡಾ. ನಾರಾಯಣ ಪೆರಳಾಯ, ಡಾ. ಎಸ್.ಪಿ ಆನಂದ್, ಆಡಳಿತಾಧಿಕಾರಿ ಡೋನಾಲ್ಡ ಅಂಚನ್, ಹೆಲನ್ ಮಥಾಯಿಸ್, ಪ್ರಾಂಶುಪಾಲೆ  ವೀಣಾ ಮೆನೆಜಸ್ ಮತ್ತಿತರರು ಉಪಸ್ಥಿತರಿದ್ದರು.

ರೋಹಿ ರತ್ನಾಕರ್ ನಿರೂಪಿಸಿ, ಹೇಮಾ ಅವರು ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter