Published On: Fri, May 18th, 2018

ನಾಳೆಯೇ ಬಹುಮತ ಸಾಬೀತು ಪಡಿಸಿ: ಸುಪ್ರೀಂ ಕೋರ್ಟ್

b4c1b6e40c6812b4296c7f97707e0817

ನವದೆಹಲಿ: ರಾಜ್ಯಪಾಲ ತೀರ್ಮಾನ ಪ್ರಶ್ನಿಸಿ ಕಾಂಗ್ರೆಸ್‌-ಜೆಡಿಎಸ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಬಹುಮತವನ್ನು ನಾಳೆ ಸಾಬೀತು ಪಡಿಸಿದರೆ ಉತ್ತಮ ಎಂಬ ಸಲಹೆ ನೀಡಿದೆ.

ಇದೊಂದು ನಂಬರ್‌ ಗೇಮ್‌ ಆಗಿದ್ದು, ಯಾರ ಬಳಿ ಸಂಖ್ಯಾಬಲವಿದೆ ಎಂಬುವುದನ್ನು ರಾಜ್ಯಪಾಲರು ನೋಡಬೇಕಾಗುತ್ತಿದೆ. ಈ ವಿಷಯದಲ್ಲಿ ರಾಜ್ಯಪಾಲರಿಗೆ ತೃಪ್ತಿ ಆಗಬೇಕೆಂದು ಸುಪ್ರೀಂ ಹೇಳಿದೆ. ಚುನಾವಣೆ ಮುನ್ನ ಮತ್ತು ಚುನಾವಣೆ ನಂತರದ ಮೈತ್ರಿ ವಿಭಿನ್ನವಾಗಿದೆ ಎಂದೂ ನ್ಯಾಯ ಪೀಠ ಅಭಿಪ್ರಾಯ ಪಟ್ಟಿತು.

ಇದೇ ವೇಳೆ ರಾಜ್ಯಪಾಲರು ಮೈತ್ರಿಕೂಟವನ್ನು ಆಹ್ವಾನಿಸಿಲ್ಲ ರಾಜ್ಯಪಾಲರು ಆಹ್ವಾನ ನೀಡದೆ ಮೈತ್ರಿಕೂಟ ಬಹುಮತ ಪಡಿಸಲು ಸಾಧ್ಯವಿಲ್ಲ ರಾಜ್ಯಪಾಲರು ಆಹ್ವಾನಿಸಿದರೆ ಮಾತ್ರ ಮೈತ್ರಿಕೂಟ ಬಹುಮತ ಸಾಬೀತು ಪಡಿಸಲಿ ಎಂದು ಎಚ್.ಡಿ. ಕುಮಾರ ಸ್ವಾಮಿ ಅವರ ವಿರುದ್ಧ ವಾದಿಸಿದ ಕಪಿಲ್​ ಸಿಬಲ್​ ನ್ಯಾಯಪೀಠದ ಮುಂದೆ ಹೇಳಿದರು.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter