Published On: Wed, May 16th, 2018

ರಾಜ್ಯಪಾಲರಿಂದಲೇ ಆಪರೇಷನ್ ಕಮಲಕ್ಕೆ ಪ್ರೋತ್ಸಾಹ: ಕುಮಾರಸ್ವಾಮಿ ಅಸಮಾಧಾನ

HDK

ಬೆಂಗಳೂರು: ಬಿಜೆಪಿ ತನ್ನ ನಿಜ ಬಣ್ಣ ಬಯಲು ಮಾಡುತ್ತಿದೆ. ಇದೇ ವೇಳೆ ರಾಜ್ಯಪಾಲರು ತಮ್ಮ ನಿರ್ಣಯದಿಂದ ಆಪರೇಷನ್ ಕಮಲಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆ ಆಹ್ವಾನ ಮಾಡಿ ಬಹುಮತ ಸಾಬೀತಿಗೆ 15 ದಿನ ಕಾಲಾವಕಾಶ ನೀಡಿರುವ ಬೆನ್ನಲ್ಲೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನ ನೀಡಿದ ಬಗ್ಗೆ ಬೇಸರವಿಲ್ಲ. ಆದರೆ ಅವರು ನಿಯಮದ ಪ್ರಕಾರ ಬಿಜೆಪಿ ಬಹುಮತ ಸಾಬೀತಿಗೆ 4-6 ದಿನ ಕಾಲಾವಕಾಶ ಕೊಡಬೇಕಿತ್ತು. ಇದ್ಯಾವುದನ್ನು ಮಾಡದೆ ರಾಜ್ಯಪಾಲರು ಬಿಜೆಪಿಯು ಶಾಸಕರನ್ನು ಹಣದ ಬಲದಿಂದ ಕೊಂಡುಕೊಳ್ಳಲಿ ಎಂಬ ಕಾರಣಕ್ಕೆ 15 ದಿನಗಳ ಕಾಲಾವಕಾಶ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಣಿಪುರದಲ್ಲಿ, ಮೇಘಾಲಯದಲ್ಲಿ, ಬಿಹಾರದಲ್ಲಿ, ಗೋವಾದಲ್ಲಿ ಹೀಗೆ ಒಂದೊಂದು ಕಡೆ ಒಂದೊಂದು ರೀತಿ ಬಿಜೆಪಿ ಅವಕಾಶವಾದಿ ರಾಜಕಾರಣ ಮಾಡಿದೆ. ಇಲ್ಲಿ ರಾಜ್ಯಪಾಲರ ಮೂಲಕ ಬಿಜೆಪಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಗುಜರಾತ್‌ನಿಂದ ಈಗಾಗಲೇ ಮೋದಿ ಅವರು ತಮ್ಮ ಗುಜರಾತ್ ಗೆಳೆಯರ ಕೈಗೆ ಹಣದ ಮೂಟೆಗಳನ್ನು ಕೊಟ್ಟು ಕಳುಹಿಸಿದ್ದಾರೆ. ಆಪರೇಷನ್ ಕಮಲದಂತಹಾ ನೀಚ ರಾಜಕಾರಣ ಮಾಡಲು ಮೋದಿ ಸೂಚಿಸಿದಂತಿದೆ. ಅಧಿಕಾರ ಹಿಡಿಯಲು ಸಂವಿಧಾನವನ್ನೂ ಅವರು ಮೀರಿದ್ದಾರೆ ಎಂದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter