Published On: Wed, May 16th, 2018

ಎಡವಟ್ಟು ಮಾಡಿದ ಈಶ್ವರಪ್ಪಗೆ ರಾಷ್ಟ್ರೀಯ ನಾಯಕರಿಂದ ಫುಲ್ ಕ್ಲಾಸ್!: ಕಾರಣವೇನು ಗೊತ್ತೇ?

ameshwara

ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ಬಿಜೆಪಿಯ ರಾಷ್ಟ್ರೀಯ ಮುಖಂಡರು ಗ್ರಹಚಾರ ಬಿಡಿಸಿದ ಘಟನೆ ಬೆಂಗಳೂರಿನಲ್ಲಿ ಬುಧವಾರ ನಡೆದಿದೆ.

ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೆ ಬಿಜೆಪಿ 104 ಸ್ಥಾನ ಗಳಿಸಿ ಅತಿ ದೊಡ್ಡಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್- ಜೆಡಿಎಸ್ ಈಗಾಗಲೇ ಮೈತ್ರಿ ಮಾಡಿಕೊಂಡು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಈ ನಡುವೆ ಕೆಪಿಜೆಪಿಯಿಂದ ರಾಣೆಬೆನ್ನೂರು ಕ್ಷೇತ್ರದಿಂದ ಗೆದ್ದಿದ್ದ ಶಂಕರ್ ಅವರನ್ನು ಇಂದು ಬೆಳಿಗ್ಗೆ ದೂರದ ಸಂಬಂಧಿಯು ಆದ ಈಶ್ವರಪ್ಪ ಸಂಪರ್ಕಿಸಿ ಪಕ್ಷಕ್ಕೆ ಆಹ್ವಾನಿಸಿದ್ದರು. ಆದರೆ ಮಧ್ಯಾಹ್ನದ ಹೊತ್ತಿಗೆ ಶಂಕರ್ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡರು. ಇದರಿಂದ ಗರಂ ಆದ ಬಿಜೆಪಿ ರಾಷ್ಟ್ರೀಯ ನಾಯಕರಾದ ಕೆ.ಎಸ್.ಈಶ್ವರಪ್ಪಗೆ ಪ್ರಕಾಶ್ ಜಾವ್ಡೇಕರ್, ಮುರಳೀಧರ್ ರಾವ್ ಕ್ಲಾಸ್ ತೆಗೆದುಕೊಂಡು, “ಒಬ್ಬ ಪಕ್ಷೇತರ ಶಾಸಕನನ್ನು ಹಿಡಿದಿಟ್ಟುಕೊಳ್ಳಲು ಆಗಿಲ್ವಾ?” ಎಂದು ಪ್ರಶ್ನಿಸಿ ಅಮಿತ್, ಶಾ ಮೋದಿಗೆ ನೀವೆ ಉತ್ತರ ಕೊಡಿ ಎಂದ ಕೋಪಗೊಂಡಿದ್ದಾರೆ ಎನ್ನಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter