Published On: Wed, May 16th, 2018

ನಾಳೆ ಬೆಳಗ್ಗೆ 9ಕ್ಕೆ ಯಡಿಯೂರಪ್ಪ ಪ್ರಮಾಣ ವಚನ

yedd_1_0

ಬೆಂಗಳೂರು: ಮೇ 17 ರಂದು ಬೆಳಗ್ಗೆ 9ಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿಎಸ್. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬಿಎಸ್’ವೈ ನಿವಾಸದಿಂದ ಮಾತನಾಡಿದ ಅವರು, ಈಗಷ್ಟೆ ರಾಜಭವನದಿಂದ ಮಾಹಿತಿ ಬಂದಿದ್ದು ನಾಳೆ ಪ್ರಮಾಣ ವಚನ ಸ್ವೀಕರಿಸುವುದು ಖಚಿತ ಎಂದು ಹೇಳಿದರು.

8.30ಕ್ಕೆ ಎಲ್ಲ ಮುಖಂಡರಿಗೂ ಆಹ್ವಾನ ಬಂದಿದ್ದು, ಬಹುಮತ ಸಾಬೀತಿಗೆ 15 ದಿನಗಳ ಕಾಲ ಗಡುವು ನೀಡಿದ್ದಾರೆ. ಮೋದಿ ಸೇರಿದಂತೆ ಯಾವ ನಾಯಕರು ಪಾಲ್ಗೊಳ್ಳುತ್ತಿಲ್ಲ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಚುನಾವಣಾ ಪೂರ್ವವಾಗಿ ಮೈತ್ರಿ ಮಾಡಿಕೊಂಡಿರಲಿಲ್ಲ, ಆದರೆ ಈಗ ಅಧಿಕಾರದ ಆಸೆಯಿಂದಷ್ಟೆ ಸರ್ಕಾರ ರಚಿಸಲು ಅವಕಾಶ ಕೋರುತ್ತಿವೆ ಎಂದು ರಾಜ್ಯಪಾಲರಿಗೆ ನಾವು ಮನದಟ್ಟು ಮಾಡಿಕೊಟ್ಟಿದ್ದೇವೆ ಎಂದರು.

ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಪಕ್ಷಕ್ಕೆ 104, ಕಾಂಗ್ರೆಸ್’ಗೆ 78 ಹಾಗೂ ಜೆಡಿಎಸ್’ಗೆ 38 ಸ್ಥಾನ ಲಭಿಸಿದ್ದವು. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಅವಕಾಶ ಕೇಳಿದರೆ, ತಾನು ಅತಿ ದೊಡ್ಡ ಪಕ್ಷ ಬಿಜೆಪಿಗೂ ಹಕ್ಕು ಮಂಡಿಸಲು ಅವಕಾಶ ನೀಡುವಂತೆ ಬಿಎಸ್’ವೈ ನೇತೃತ್ವದ ಮುಖಂಡರು ಮನವಿ ಮಾಡಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter