Published On: Tue, May 15th, 2018

ಅತಂತ್ರ ಫಲಿತಾಂಶ: ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ನಿರ್ಧಾರ?

download (3)

ಬೆಂಗಳೂರು: ಕರ್ನಾಟಕ ವಿಧಾನ ಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು 222 ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಬಹುತೇಕ ಕ್ಷೇತ್ರಗಳಲ್ಲಿ ಸ್ಥಾನಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.ಇದರೊಂದಿಗೆ ಬಿಜೆಪಿ ಕರ್ನಾಟವನ್ನು ಕಾಂಗ್ರೇಸ್ ನಿಂದ ಕಿತ್ತುಕೊಂಡಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರ ಈ ಮೂಲಕ ಭಾರಿ ಮುಖಭಂಗ ಅನುಭವಿಸಿದೆ.

ಸ್ವತಃ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎದುರು ಸೋತು ಮುಖ ಭಂಗ ಅನುಭವಿಸಿದರೆ, ಬಾದಮಿಯಲ್ಲಿ ಪ್ರಯಾಸದ ಗೆಲುವು ದಾಖಲಿಸಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ಬಹುತೇಕ ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದು, ಕಾಂಗ್ರೇಸ್ ಕೈಯಲ್ಲಿದ್ದ ಕರಾವಳಿ ಕೇಸರಿ ಪಡೆಗಳ ಕೈವಶವಾಗಿದೆ. ಮಂಗಳೂರಿನ ಉಳ್ಳಾಲದಲ್ಲಿ ಯುಟಿ ಕಾದರ್ ಒಬ್ಬರನ್ನು ಬಿಟ್ಟರೆ ಮತ್ತೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿದೆ. ಅದರಲ್ಲೂ ಕಾಂಗ್ರೇಸ್ ಸರಕಾರದ ವೇಳೆಯಲ್ಲಿದ್ದ ಬಹುತೇಕ ಪ್ರಭಾವಿ ಸಚಿವರು ನೆಲಕಚ್ಚಿರುವುದು ಕಾಂಗ್ರೇಸ್ ಪಾಲಿಗೆ ತೀವೃ ಹಿನ್ನಡೆಯುಂಟಾಗಿದೆ.

ಆದರೆ ಮುಂದಿನ ಬೆಳವಣಿಗೆಯಲ್ಲಿ ಕಾಂಗ್ರೇಸ್ ಜೆಡಿಎಸ್ ನೊಂದಿಗೆ ಸೇರಿ ಸರಕಾರ ರಚಿಸಲು ಬಹಳಷ್ಟು ಕಸರತ್ತುಗಳು ನಡೆಯುತ್ತಿದೆ. ಈಗಾಗಲೇ ಕುಮಾರ್ ಸ್ವಾಮಿಯವರಿಗೆ ಮುಖ್ಯಮಂತ್ರಿಯ ಆಫರ್ ನೀಡಲು ಕಾಂಗ್ರೇಸ್ ಮುಂದಾಗಿದ್ದು ಬಿಜೆಪಿಗೆ ಕೈಗೆ ಬಂದ ತುತ್ತು ಬಾಯಿಗೆ ಬರುವುದು ಕಷ್ಟವಾಗಉವ ಸಾಧ್ಯತೆ ಇದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter