Published On: Wed, May 2nd, 2018

ಸಿದ್ದರಾಮಯ್ಯ ಸರ್ಕಾರಕ್ಕೆ ರೈತಪರ ಕಾಳಜಿ ಇಲ್ಲ: ಪ್ರಧಾನಿ ಮೋದಿ ಕಿಡಿ

167537-modiapp

ವದೆಹಲಿ : ಕಾಂಗ್ರೆಸ್ ರೈತರನ್ನು ಕೇವಲ ಭಾಷಣಗಳಲ್ಲಿ ಮಾತ್ರ ನೆನೆಯುತ್ತದೆ. ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ರೈತರ ಏಳಿಗೆ ವಿಚಾರದಲ್ಲಿ ಸಂವೇದನಾ ರಹಿತ ಮನಸ್ಥಿತಿ ತೋರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ.

ಇಂದು ಬೆಳಿಗ್ಗೆ ನಮೋ ಆಪ್ ಮೂಲಕ ಬಿಜೆಪಿ ಕರ್ನಾಟಕ ರೈತ ಮೋರ್ಚಾ ಕಾರ್ಯಕರ್ತರನ್ನು ಉದ್ದೇಶಿಸಿ ಸಂವಾದ ನಡೆಸಿದ ಪ್ರಧಾನಿ ಮೋದಿ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಏಳಿಗೆಗಾಗಿ ಯಾವುದೇ ಯೋಜನೆ ಜಾರಿಗೆ ತಂದಿಲ್ಲ. ಬರಗಾಲ ಬಂದಾಗ ಯಾವುದೇ ಯೋಜನೆ ಜಾರಿಗೆ ತರದೆ, ಕೇವಲ ಬತ್ತಿ ಹೋಗಿರುವ ಕೆರೆಗಳನ್ನು ಬಿಲ್ಡರ್’ಗಳಿಗೆ ಒಪ್ಪಿಸಿ ಸಂವೇದನಾರಹಿತ ಮನಸ್ಥಿತಿ ತೋರಿದೆ ಎಂದು ಮೋದಿ ಕಿಡಿ ಕಾರಿದರು.

ಕರ್ನಾಟಕದಲ್ಲಿ ಫಸಲ್ ಬಿಮಾ ಯೋಜನೆಯ ಅನುಷ್ಟಾನದ ಬಗ್ಗೆ, ರಾಜ್ಯ ಸರ್ಕಾರದ ನಿರಾಸಕ್ತಿಯ ಬಗ್ಗೆ ದೂರು ಬರುತ್ತಿದ್ದವು. ಒಂದು ವೇಳೆ ಬರಗಾಲದಲ್ಲಿ ರಾಜ್ಯ ಸರ್ಕಾರ ಸಕ್ರಿಯವಾಗಿ ಕೆಲಸ ಮಾಡಿದ್ದಿದ್ದರೆ ರೈತರ ಹಲವಾರು ಸಂಕಷ್ಟಗಳಿಗೆ ಪರಿಹಾರ ಸಿಗುತ್ತಿತ್ತು. ಆದರೆ, ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನಾ ಇಂದ ರೈತರಿಗೆ ಸಾಕಷ್ಟು ಲಾಭವಿದೆ. ಆದರೆ ಕರ್ನಾಟಕದಲ್ಲಿನ ಸಿದ್ದರಾಮಯ್ಯ ಸರ್ಕಾರ ಈ ಯೋಜನೆಯನ್ನು ಜನರಿಗೆ ಕಲ್ಪಿಸುವ ಕೆಲಸಮಾಡಿಲ್ಲ. ಅಲ್ಲದೆ, ಬಿಜೆಪಿ ಸಂಸದರು ಈ ನಿಟ್ಟಿನಲ್ಲಿ ಕೆಲಸಕ್ಕೆ ಮುಂದಾದಾಗ ಸರಿಯಾದ ಸಹಕಾರವನ್ನೂ ನೀಡದೆ, ಕಾಂಗ್ರೆಸ್ ರೈತರನ್ನು ಕಡೆಗಣಿಸಿದೆ ಎಂದು ಹೇಳಿದರು.

ದೇಶದಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಬದಲಾವಣೆಗಳನ್ನು ತರುವಂತಹ ಕೆಲಸವನ್ನು ನಾವು ಮಾಡುತ್ತಿದ್ದೇವೆ. ರೈತರಿಗೆ ಸರಿಯಾದ ಮಾರುಕಟ್ಟೆಯನ್ನು ದೇಶದಲ್ಲಿ ಕಲ್ಪಿಸುವ ಅಗತ್ಯವಿದೆ. ಅವರ ಪರಿಶ್ರಮಕ್ಕೆ ತಕ್ಕಂತಹ ಬೆಳೆಯನ್ನು ಮಾರುಕಟ್ಟೆಯಲ್ಲಿ ಪಡೆಯುವಂತಾಗಬೇಕು. ಆ ನಿಟ್ಟಿನಲ್ಲಿ ಬಿಜೆಪಿ ಕೆಲಸಮಾಡುಟ್ಟಿದೆ ಎಂದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter