Published On: Mon, Apr 16th, 2018

ಆಸೀಫಾ ಅತ್ಯಾಚಾರ, ಕೊಲೆ ಪ್ರಕರಣ: ಉಡುಪಿಯಲ್ಲಿ ಅತ್ಯಾಚಾರಿಗಳ ಭಾವಚಿತ್ರ ಸುಟ್ಟು ಆಕ್ರೋಶ

30713260_1921120894585610_4205055132070576128_n-696x522

ಉಡುಪಿ: ದೇಶದ್ಯಾಂತ ಆಸೀಫಾ ಅತ್ಯಾಚಾರ ಪ್ರಕರಣದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಸೋಮವಾರ ಉಡುಪಿಯಲ್ಲಿ ನಾಗರಿಕರು ಸೇರಿ ಆಸೀಫಾ ಅತ್ಯಾಚಾರಿಗಳ ಭಾವಚಿತ್ರಗಳನ್ನು ಸುಡುವ ಮೂಲಕ ಪ್ರತಿಭಟಿಸಿದ್ದಾರೆ.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅನ್ಸಾರ್ ಅಹ್ಮದ್ ಅತ್ಯಾಚಾರಿಗಳಿಗೆ ಅತ್ಯಂತ ಉಗ್ರವಾದ ಶಿಕ್ಷೆ ವಿಧಿಸಬೇಕು. ಹಾಗೂ ಗಲ್ಫ್ ರಾಷ್ಟ್ರಗಳ ಮಾದರಿಯಲ್ಲಿ ಸಾರ್ವಜನಿಕವಾಗಿ ಶಿಕ್ಷೆ ವಿಧಿಸುವ ಕ್ರಮ ಜಾರಿಯಾಗಬೇಕೆಂದು ಆಗ್ರಹಿಸಿದ್ದಾರೆ. ಅತ್ಯಾಚಾರ ನಡೆದ ನೂರು ದಿನಗಳೊಳಗೆ ಅಪರಾಧಿಗೆ ಗಲ್ಲು ಶಿಕ್ಷೆಯಾದ ಪಕ್ಷದಲ್ಲಿ ಅತ್ಯಾಚಾರಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಸರಕಾರಗಳು ಮುಂದುವರಿಯುತ್ತದೆ ಎಂದರು.

ರೋಗ ಬಂದ ಮೇಲೆ ಚಿಕಿತ್ಸೆ ಮಾಡುವ ಬದಲು ಮುಂಚಿತವಾಗಿಯೇ ಜಾಗೃತಗೊಳ್ಳುವಂತೆ, ನಾವೆಲ್ಲರೂ ಒಗ್ಗಟ್ಟಾಗಿ ಮುಂಚಿತವಾಗಿ ಹೋರಾಟಬೇಕಾದ ಅನಿವಾರ್ಯವಿದೆ ಎಂದು ಹೇಳಿದರು.

ಪ್ರತಿಭಟನಾ ಸಭೆಯಲ್ಲಿ ರೆಹ್ಮಾನ್,ಸುಧೀರ್, ಸಮೀರ್, ರೆಹ್ಮಾನ್ ಪಡುಬಿದ್ರಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

30708122_1921120687918964_1193979025429626880_n

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter