Published On: Sun, Apr 15th, 2018

ಆಸೀಫಾ ಅತ್ಯಾಚಾರ, ಹತ್ಯೆ ಪ್ರಕರಣ: ಕ್ರಮಕ್ಕೆ ಆಗ್ರಹಿಸಿ ಅಡ್ಡೂರಿನಲ್ಲಿ ಎಸ್ಸೆಸ್ಸೆಫ್ ನಿಂದ ಧರಣಿ

WhatsApp Image 2018-04-15 at 7.43.51 PM

ಅಡ್ಡೂರು: ಕುಥುವಾದ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿ ಕೊಲೆ ನಡೆಸಿರುವುದನ್ನು ವಿರೋಧಿಸಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಎಸ್ಸೆಸ್ಸೆಫ್ ಅಡ್ಡೂರು ಶಾಖೆ ವತಿಯಿಂದ ಇಲ್ಲಿನ ಮುಖ್ಯ ಜಂಕ್ಷನ್ ನಲ್ಲಿ ರವಿವಾರ ಧರಣಿ ನಡೆಸಲಾಯಿತು.

ಈ ವೇಳೆ ಶಾಫೀ ಮದನಿ ಕಂದಾವರ ಮಾತನಾಡಿ, ಇಲ್ಲಿನ ರಾಜಕಾರಣಿ, ನ್ಯಾಯ ಪಾಲಕ ಹಾಗೂ ಪೊಲೀಸರ ನಿರ್ಲಕ್ಷ್ಯದಿಂದ ದೇಶದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇದರಿಂದ ಇಂತಹ ಅಮಾನವೀಯ ಘಟನೆಗಳು ಮರುಕಳಿಸುವಂತೆ ಮಾಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಗುಜರಾತಿನಲ್ಲಿ ಅಖ್ಲಾಕ್ ಎಂಬ ಮುಸ್ಲಿಂ ವೃದ್ಧರನ್ನು ಭೀಕರವಾಗಿ ಕೊಲೆಗೈದಾಗ ನಾವು ತಾಳ್ಮೆ ವಹಿಸಿದ್ದೆವು. ಆದರೆ ಇದೀಗ ಮುಗ್ಧ ಬಾಲಕಿ ಆಸೀಫಾಳ ಪ್ರಕರಣದಲ್ಲಿ ನಮ್ಮಲ್ಲಿ ರೋಷವನ್ನುಂಟು ಮಾಡಿದೆ ಎಂದವರು, ಆಸೀಫಾಳ ಕುಟುಂಬಕ್ಕೆ ನ್ಯಾಯ ಸಮ್ಮತ ಪರಿಹಾರ ಒದಗಿಸಬೇಕು ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದರು.

ಧರಣಿಯಲ್ಲಿ ಬದ್ರುದ್ದೀನ್ ಅಝ್ಹರಿ, ಎಸ್ಸೆಸ್ಸೆಫ್ ಕೈಕಂಬ ಸೆಕ್ಟರ್ ಅಧ್ಯಕ್ಷ ರಿಯಾಝ್  ಸಈದ್, ಎಸ್ಸೆಸ್ಸೆಫ್ ಅಡ್ಡೂರು ಶಾಖೆ ಅಧ್ಯಕ್ಷ ಉಬೈದುಲ್ಲಾ ಸಖಾಫಿ, ಇಹ್ಸಾನ್ ದಾಯಿ ಮಿನೀರ್ ಸಖಾಫಿ, ನಜೀಬ್ ಸೆಲೀನ ಮತ್ತಿತರರು ಉಪಸ್ಥಿತರಿದ್ದರು.

ಶಹೀದ್ ಸ್ವಾಗತಿಸಿ, ಶಬೀರ್ ಕಾರ್ಯಕ್ರಮ ನಿರೂಪಿಸಿದರು.

WhatsApp Image 2018-04-15 at 7.41.21 PM

WhatsApp Image 2018-04-15 at 7.42.25 PM

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter