Published On: Thu, Apr 12th, 2018

ಎ.15ರಂದು ಪಟ್ಲ ಫೌಂಡೇಶನ್ ಟ್ರಸ್ಟ್ ನ ಸುರತ್ಕಲ್ ಘಟಕ ಉದ್ಘಾಟನೆ

a4a2494a-85c2-4e00-9833-2aaf5bd3184f

ಸುರತ್ಕಲ್: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ನೂತನ ಸುರತ್ಕಲ್ ಘಟಕದ ಉದ್ಘಾಟನಾ ಸಮಾರಂಭ ಎ.15ರಂದು ಮಧ್ಯಾಹ್ನ 2ಕ್ಕೆ ಇಲ್ಲಿನ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ ಎಂದು ಕೇಂದ್ರೀಯ ಘಟಕದ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 2ಕ್ಕೆ “ತುಳು ನಾಡ ಬಲಿಯೇಂದ್ರ” ಯಕ್ಷಗಾನ ತಾಳಮದ್ದಳೆ ಹಾಗೂ ಸಂಜೆ 5ಕ್ಕೆ ಶಿವ ಎಲ್. ಸುವರ್ಣ ಹೊಸಬೆಟ್ಟು, ಸುರೇಶ್ ಕಾಮತ್ ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಅಗರಿ ರಘುರಾಮ ಭಾಗವತ, ಅರುಣ್ ಪೈ ಮಾರಿಗುಡಿ, ಶಿವರಾಮ ಪಣಂಬೂರು, ಪ್ರಕಾಶ್ ಸುರತ್ಕಲ್, ಮಾಧವ ಶೆಟ್ಟಿ ಬಾಳ, ಜನಾರ್ದನ ಡಿ. ಶೆಟ್ಟಿಗಾರ್, ರವಿಕುಮಾರ್ ಸುರತ್ಕಲ್, ಅಪೂರ್ವ ಸುರತ್ಕಲ್ ಮತ್ತಿತರರನ್ನು ಗೌರವಿಸಲಾಗುವುದು ಎಂದವರು, ರಾತ್ರಿ 7ಕ್ಕೆ “ಕನಕಾಂಗಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸುರತ್ಕಲ್ ಘಟಕದ ಗೌರವಾಧ್ಯಕ್ಷ ಕಡಂಬೋಡಿ, ಮಹಾಬಲ ಪೂಜಾರಿ, ಸುರತ್ಕಲ್ ಘಟಕಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಕೋಶಾಧಿಕಾರಿ ಸತೀಶ್ ಶೆಟ್ಟಿ ಬಾಳಿಕೆ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter